BP News Karnataka Super Fast 15-09-2022

0
111

ವಿಮ್ಸ್ ನಲ್ಲಿ ಮೂರು ಜನರ ಸಾವು- ನಿಷ್ಪಕ್ಷಪಾತ ತನಿಖೆಗೆ ಎಸ್.ಯು.ಸಿ.ಐ(ಸಿ) ಆಗ್ರಹ


BP News ಬಳ್ಳಾರಿ,ಸೆ.15-ವಿದ್ಯುತ್ ವ್ಯತ್ಯಯ ಹಾಗೂ ಜನರೇಟರ್ ಸಮಸ್ಯೆಯಿಂದಾಗಿ ವಿಮ್ಸ್ ನ ತೀವ್ರ ನಿಗಾ ಘಟಕದಲ್ಲಿ (ಐಸಿಯು ) ದಾಖಲಾದ, ವೆಂಟಿಲೇಟರ್ ನಲ್ಲಿದ್ದ ಮೂರು ರೋಗಿಗಳು ಸಾವೀಗೀಡಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈ ಘಟನೆಯ ಬಗ್ಗೆ ಧಿಘ್ಬ್ರಮೆ ವ್ಯಕ್ತಪಡಿಸಿರುವ ಎಸ್‍ಯುಸಿಐಸಿ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಅವರು, ವಿಮ್ಸ್.ನಂತಹ ಉನ್ನತ ಆರೋಗ್ಯ ಸಂಸ್ಥೆಗಳಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಜನರೇಟರ್ ರಿಪೇರಿಯಂತಹ ಸಮಸ್ಯೆಗಳು ಉಂಟಾಗಲು ಅವಕಾಶ ನೀಡಿರುವುದು ನಿರ್ಲಕ್ಷ್ಯತೆಯ ಪರಮಾವಧಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
——-
ಪಿಟಿಸಿಎಲ್ ಕಾಯಿದೆ ತಿದ್ದುಪಡಿ ಮಾಡಲು ವಕೀಲರ ಮನವಿ


BP News ಬಳ್ಳಾರಿ,ಸೆ.15-ಕರ್ನಾಟಕ ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ಕಾಯ್ದೆ 1978ಕ್ಕೆ ಕಾಲಮಿತಿ ಅನ್ವಯಿಸದಂತೆ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಿಟಿಸಿಎಲ್ ಕಾಯ್ದೆ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ವಕೀಲರೂ ಆದ ಹೆಚ್.ಸಿದ್ಧಣ್ಣ ಅವರು, ಈಗಾಗಲೇ ಕಳೆದ ಮೂರು ವರ್ಷಗಳಿಂದ ಈ ಕುರಿತು ಹೋರಾಟಗಳು ನಡೆಯುತ್ತಿವೆ. ಜ್ಞಾನಪ್ರಕಾಶ್ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಹಾಗೂ ನೂರಾರು ಹಿಂದೂಪರ ಸಂಘಟನೆಗಳ ಮತ್ತು ದಲಿತಪರ ಸಂಘಟನೆಗಳ ಬೆಂಬಲದೊಂದಿಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
——
ಸೆ.17ರಂದು ವಿಶ್ವದಾಖಲೆಯ ರಕ್ತದಾನ ಶಿಬಿರ-ಪÀಂಕಜ್ ಛಾಜ್ಜೇರ್


BP News ಬಳ್ಳಾರಿ,ಸೆ.15-ಇದೇ ಸೆ.17ರಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 72ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿದ್ದು, ಇದೇವೇಳೆ ಅಖಿಲ ಭಾರತೀಯ ತೇರಾಪಂಥ ಯುವಕ ಪರಿಷತ್ತಿನಿಂದ ವಿಶ್ವದಾಖಲೆಯ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಯುವ ಪರಿಷತ್ ನ ಕಾರ್ಯದರ್ಶಿ ಪಂಕಜ್ ಛಾಜ್ಜೇರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಟ್ಟೂರುಸ್ವಾಮಿ ಮಠ, ಬಾಲಾಂಜನೇಯ ಮಂದಿರ, ಮೇಧಾ ಕಾಲೇಜು, ಲಯನ್ಸ್ ಕ್ಲಬ್, ಶಿವಾನಂದ ಆಶ್ರಮ, ಮೊಹಮ್ಮದೀಯ ಕಾಲೇಜು ಮತ್ತು ಸಿರುಗುಪ್ಪದ ನಿಟ್ಟೂರು ನರಸಿಂಹಮೂರ್ತಿ ಪ್ಲಾಟ್ ನಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ತಿಳಿಸಿದ್ದಾರೆ.
——
ಲಿಂಗ ಅಸಮಾನತೆ ಇರಕೂಡದು-ಶ್ರೀನಾಥ್ ಜೋಷಿ


BP News ಬಳ್ಳಾರಿ, ಸೆ.15-ಲಿಂಗ ಅಸಮಾನತೆಯನ್ನು ಸಮತೋಲನಗೊಳಿಸುವ ಕ್ರಮಗಳ ಕುರಿತು ಮಾತನಾಡಿದ ಕನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀನಾಥ್ ಜೋಷಿ ಅವರು, ದೇವಿಯರಲ್ಲಿಯೂ ಕಾಣುವಂತೆ ಮಹಿಳೆಯರು ಸಮಾಜವನ್ನು ಮುನ್ನಡೆಸುತ್ತಾರೆ, ಆಕೆಯ ನಮ್ರತೆಗೆ ಧಕ್ಕೆಯುಂಟು ಮಾಡುವ ಸಂದರ್ಭದಲ್ಲಿ ಸಹಿಷ್ಣುತೆಯ ಮಟ್ಟಕ್ಕೆ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು.
ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ಹಮಿಕೊಂಡ ರಾಜ್ಯ ಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
—–
ಕಟ್ಟಡದ ವಿವಿಧ ಭಾಗಗಳ ಪರೀಕ್ಷೆಯನ್ನು ಮಾಡುವಂತಹ ತಾಂತ್ರಿಕ ಉಪಕರಣಗಳ ಉದ್ಘಾಟನೆ


BP News ಬಳ್ಳಾರಿ,ಸೆ.15-ಬಳ್ಳಾರಿ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಸಿವಿಲ್ ವಿಭಾಗದಲ್ಲಿ ವಿಭಿನ್ನ ರೀತಿಯ ಕಟ್ಟಡದ ವಿವಿಧ ಭಾಗಗಳ ಪರೀಕ್ಷೆಯನ್ನು ಮಾಡುವಂತಹ ತಾಂತ್ರಿಕ ಉಪಕರಣಗಳ ಉದ್ಘಾಟನೆಯನ್ನು ಡಾ. ಯಶವಂತ್ ಭೂಪಾಲ್ ಅವರ ಹುಟ್ಟು ಹಬ್ಬದ ಅಮೃತ ಮಹೋತ್ಸವದಲ್ಲಿ ನೆರವೇರಿಸಲಾಯಿತು.
ಇತ್ತೀಚಿನ ತಾಂತ್ರಿಕ ಬೆಳವಣಿಗೆಯಲ್ಲಿ ಕಟ್ಟಡದ ಜೀವಿತಾವಧಿಯ ಗುಣಮಟ್ಟವನ್ನು ಸುಧಾರಣೆ ಮಾಡಲು ಈ ಉಪಕರಣಗಳು ಅನುಕೂಲಕರವಾಗಿವೆ ಎಂದು ತಿಳಿಸಿದ ಡಾ.ಯಶವಂತ್ ಭೂಪಾಲ್ ಅವರು ತಾಂತ್ರಿಕತೆಯ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿದರು. ವಿಭಾಗ ಮುಖ್ಯಸ್ಥರಾದ ಡಾ. ಟಿ.ಹೆಚ್.ಪಟೇಲ್ ಅವರು ಉಪಕರಣಗಳ ಬಗ್ಗೆ ಶಿಕ್ಷಕ ವೃಂದಕ್ಕೆ ಪೂರ್ಣ ಮಾಹಿತಿ ನೀಡಿದರು.
——
ಹೊಸಪೇಟೆಯಲ್ಲಿ ಸಾಂಕೇತಿಕ ಧರಣಿ


BP News ಬಳ್ಳಾರಿ,ಸೆ.15-ಕ.ಕ.ರ.ಸಾ.ನಿಗಮದ ಹೊಸಪೇಟೆ ಕೇಂದ್ರೀಯ ಬಸ್ ನಿಲ್ದಾಣ ಮತ್ತು ಹೊಸಪೇಟೆ
ವಿಭಾಗದ ಇನ್ನಿತರ ಬಸ್ ನಿಲ್ದಾಣಗಳ ಅವ್ಯವಸ್ಥೆಗೆ ಕಾರಣರಾದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಇವರನ್ನು ವರ್ಗಾಯಿಸುವುದರೊಂದಿಗೆ ಇಲಾಖಾ ತನಿಖೆ ಕೈಗೊಳ್ಳುವ ಬಗ್ಗೆ. ಸಾಂಕೇತಿಕ ಧರಣಿ ನೆಡೆಸಲಾಯಿತು.
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಹೊಸಪೇಟೆ ತಾಲ್ಲೂಕ ವತಿಯಿಂದ ಈ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಯಿತು.
—–

LEAVE A REPLY

Please enter your comment!
Please enter your name here