ಬಳ್ಳಾರಿಯ ಕೊಳಗಲ್ಲಿನ HLC ಕಾಲುವೆಯಲ್ಲಿ ಆಟೋ ಪಲ್ಟಿ ಮೂರು ದೇಹ ಪತ್ತೆ, ನಾಲ್ಕು ಜನರಿಗಾಗಿ ಹುಡುಕಾಟ, ಡ್ರೈವರ್ ಪರಾರಿ

0
1123

BP News Ballari : ತುಂಗಭದ್ರಾ ಎಚ್‌ಎಲ್‌ಸಿ ಕಾಲುವೆಗೆ ಆಟೋವೊಂದು ಪಲ್ಟಿಯಾದ ಘಟನೆ ಕೊಳಗಲ್ ಗ್ರಾಮದ ಬಳಿ ಇಂದು ಬೆಳಿಗ್ಗೆ 8.30 ಕ್ಕೆ ನಡೆದಿದೆ.

ಆಟೋದಲ್ಲಿ 10 ಜನರು ಪ್ರಯಾಣಿಸುತ್ತಿದ್ದು, ಆಯತಪ್ಪಿ ಆಟೋ ಕಾಲುವೆಗೆ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಈಜಿ ದಡ ಸೇರಿದ್ದಾರೆ, ಉಳಿದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗಿದೆ.

ಕಳೆದ ಮೂರು ನಾಲ್ಕು ವರ್ಷಗಳ‌ಹಿಂದೆ ಇದೇ ರೀತಿಅವಘಡ ನಡೆದಿದ್ದು ಎಂಟೆತ್ತು ಜನ‌ ಮೃತರಾಗಿದ್ದು, ಈಗ ಈ ದುರಂತ ಮರುಕಳಿಸಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ SP, DC ಸೇರಿದಂತೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಜೆಸಿಬಿ ಮೂಲಕ ಉಳಿದವರ ಶೋಧ ಕಾರ್ಯ ಹಾಗೂ ಆಟೋ ಮೇಲಕ್ಕೆತ್ತುವ ಕಾರ್ಯ ನಡೆದಿದೆ. ಕಾಲುವೆ ಭರ್ತಿಯಾಗಿ ಹರಿಯುತ್ತಿದ್ದು ರಕ್ಷಣಾ ಕಾರ್ಯಕ್ಕೆ ಸಮಸ್ಯೆಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

LEAVE A REPLY

Please enter your comment!
Please enter your name here