ಪ್ರವಾಹಪೀಡಿತ ಬಸರಕೋಡ ಗ್ರಾಮಕ್ಕೆ ಡಿಎಚ್ಒ ಡಾ.ಜನಾರ್ಧನ್ ಭೇಟಿ ಪರಿಶೀಲನೆ

0
116

BP NEWS: ಬಳ್ಳಾರಿ: ಸೆಪ್ಟೆಂಬರ್.11: ಪ್ರವಾಹ ಪೀಡಿತ ಪ್ರದೇಶದಲ್ಲಿ ನದಿ ನೀರು ಇಳಿಕೆಯಾದ ನಂತರ ನಾಗರಿಕರು ತಮ್ಮ ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುವಾಗ, ಕಸಕಡ್ಡಿಗಳನ್ನು ತೆರವುಗೊಳಿಸುವಾಗ ಕ್ರಿಮಿಕೀಟಗಳ
ಇರುವಿಕೆಯನ್ನು ಗುರ್ತಿಸಿ ಸ್ವಚ್ಛಗೊಳಿಸಿಕೊಳ್ಳವಂತೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಎಚ್ ಎಲ್ ಜನಾರ್ದನ್ ಸಾರ್ವಜನಿಕರಲ್ಲಿ ವಿನಂತಿಸಿದರು.
ತಾಲ್ಲೂಕಿನ ಬಸರಕೋಡ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವೇದಾವತಿ ನದಿಯ ಪ್ರವಾಹದಿಂದ ತೊಂದರೆಗೀಡಾದ ಪ್ರದೇಶಗಳ ಸಾರ್ವಜನಿಕರೊಂದಿಗೆ ಮಾತನಾಡುತ್ತಾ ಪ್ರವಾಹದ ನೀರು ಇಳಿಕೆಯಾದ ನಂತರ ಹಾವು ಚೇಳುಗಳಂಥ ಕ್ರಿಮಿಗಳು ಕಂಡು ಬರುವ ಸಾಧ್ಯತೆಗಳಿದ್ದು ನೋಡಲು ಸತ್ತಂತೆ ಕಾಣುತ್ತವೆ. ನಿರ್ಲಕ್ಷ್ಯಿಸಿದರೆ ಕಡಿತಕ್ಕೊಳಗಾಗುವ ಸಂಭವವಿರುತ್ತದೆ. ಜಾಗೃತೆ ವಹಿಸಿ ಶುಚಿಗೊಳಿಸಿ ಎಂದರು.


ಅಲ್ಲದೆ ಮನೆಗಳಿಗೆ ವೈದ್ಯಕೀಯ ತಂಡ ಆಗಮಿಸಿ ನೀಡುವ ಮಾಹಿತಿ ಆರೋಗ್ಯ ಶಿಕ್ಷಣಕ್ಕೆ ಮಹತ್ವ ನೀಡಿ, ಅಲ್ಲದೆ ಮಕ್ಕಳನ್ನು ಗರ್ಭಿಣಿಯರನ್ನು ಆದಷ್ಟು
ಕಾಳಜಿ ಕೆಂದ್ರದಲ್ಲಿ ಇರಲಿ, ಮಕ್ಕಳಿಗೆ ಮತ್ತು ಮಹಿಳೆಯರು ಹಾಗೂ ವಯೋವೃದ್ಧರ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಯಾರಿಗಾದರೂ ಕೆಮ್ಮು, ನೆಗಡಿ ಜ್ವರ ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಪಡೆಯಲು ಕೋರಿದರು.
ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳುವಂತೆ ಹಾಗೂ ಮಲಗುವಾಗ ಸೊಳ್ಳೆ ಪರದೆ ಬಳಸಿ ಸೊಳ್ಳೆಯಿಂದ ಹರಡುವ ರೋಗ ನಿಯಂತ್ರಣಕ್ಕಾಗಿ ಕೈಜೊಡಿಸಿ ಮತ್ತು ಬಿಸಿಯಾದ ಆಹಾರ ಪದಾರ್ಥವನ್ನು ಬಳಸಲು ಮತ್ತು ತಯಾರಿಸಿದ ಆಹಾರ ಪದಾರ್ಥವನ್ನು ಮುಚ್ಚಿಡಲು ವಿನಂತಿಸಿದರು.

ಕುಡಿಯುವ ನೀರಿಗೆ ಹ್ಯಾಲೋಜನ್‌ ಮಾತ್ರೆಗಳನ್ನು ಹಾಕಿದ ಒಂದು ಘಂಟೆಯ ನಂತರ ಕುಡಿಯಲು ಬಳಸಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯ ನಿರ್ಮೂಲನಾ ಅಧಿಕಾರಿ ಡಾ ಅಬ್ದುಲ್ಲಾ, ಮೋಕಾ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭಾರತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಗ್ರಾಮ ಪಂಚಾಯತ ಸದಸ್ಯರು ಸಿಬ್ಬಂದಿಯರಾದ ಚಂದ್ರಮ್ಮ, ರೂಪಾ, ಮಾರುತಿ, ಆಶಾ ಕಾರ್ಯಕರ್ತೆಯರು ಹಾಗೂ
ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here