ಬಸರಕೋಡು ಗ್ರಾಮಕ್ಕೆ ತಹಸೀಲ್ದಾರ್ ಭೇಟಿ: ಪರಿಶೀಲನೆ

0
135

BP NEWS: ಬಳ್ಳಾರಿ: ಸೆಪ್ಟೆಂಬರ್.10: ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮಕ್ಕೆ ತಹಸೀಲ್ದಾರ್ ವಿಶ್ವನಾಥ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದಲ್ಲಿ ಜಿಲ್ಲಾಡಳಿತ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರದಲ್ಲಿ ಅಲ್ಲಿನ ಜನರೊಂದಿಗೆ ತಹಸೀಲ್ದಾರ್ ಅವರು ಊಟ ಮಾಡಿದರು.


ಅಲ್ಲಿನ ಜನರು ಜಿಲ್ಲಾಡಳಿತ ವತಿಯಿಂದ ಉತ್ತಮ ರುಚಿ ಹಾಗೂ ಗುಣಮಟ್ಟ ಆಹಾರವನ್ನು ನೀಡಿದ್ದರಿಂದ ಅಲ್ಲಿನ ಜನರು ಜಿಲ್ಲಾಡಳಿತವನ್ನು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಹಸೀಲ್ದಾರ್ ವಿಶ್ವನಾಥ ಅವರು ತಿಳಿಸಿದ್ದಾರೆ.
ಜಾನವಾರುಗಳಿಗೆ ಮೇವು ಕೂಡ ವಿತರಿಸಲಾಗಿದೆ ಮತ್ತು ಸೆ.06ರಿಂದ ಇಲ್ಲಿಯವರೆಗೆ ಕಾಳಜಿ ಕೆಂದ್ರದಲ್ಲಿ ಸುಮಾರು ಪ್ರತಿದಿನ ಮಕ್ಕಳು ಸೇರಿದಂತೆ 430 ಜನರು ತಾತ್ಕಾಲಿಕ ನೆಲೆ ಕಲ್ಪಿಸಲಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here