ಈರುಳ್ಳಿ ಬೆಳೆಯುವ ರೈತರು ಕೊಳೆ ರೋಗ ಬಾಧೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಿ
BP News ಬಳ್ಳಾರಿ,ಸೆ.08-ಹೂವಿನಹಡಗಲಿ ತಾಲೂಕು ವ್ಯಾಪ್ತಿಯಲ್ಲಿ ಈರುಳ್ಳಿ ಬೆಳೆಯಲ್ಲಿ ಹವಮಾನ ವೈಪರಿತ್ಯ ಹಾಗೂ ಸತತ ಮಳೆಯಿಂದಾಗಿ ಶಿಲೀಂಧ್ರದ ಬೆಳವಣೆಗೆಯಿಂದ ಕೊಳೆ ರೋಗ ಬಾಧೆಯು ತಾಲೂಕಿನ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿದ್ದು, ಈರುಳ್ಳಿ ಬೆಳೆಯುವ ರೈತರು ಮುಂಜಾಗ್ರತೆ ಕ್ರಮಗಳನ್ನು ಹಾಗೂ ಔಷದೋಪಚಾರವನ್ನು ಕೈಗೊಳ್ಳಬೇಕು ಎಂದು ಹೂವಿನಹಡಗಲಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
——-
ಪೌರಕಾರ್ಮಿಕರಿಗೆ ಅಗತ್ಯ ಸೌಕರ್ಯ ಕಲ್ಪಿಸಿ:ಸಹಾಯಕ ಆಯುಕ್ತ ಸಿದ್ದರಾಮೇಶ್ವರ
BP News ಹೊಸಪೇಟೆ(ವಿಜಯನಗರ),ಸೆ.08-ಹೊಸಪೇಟೆಯ ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ಸ್‍ಗಳ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ 2013ಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಉಪವಿಭಾಗ ಮಟ್ಟದ ನಿಗಾ ಸಮಿತಿ ಸಭೆ ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳು 1995ರ ನಿಯಮ 17ರಂತೆ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
—–
ಪತ್ರಿಕೋದ್ಯಮ ಜೀವನ ರೂಪಿಸುವ ಮಾರ್ಗ-ಶಾಸಕ ಎಂ ಎಸ್ ಸೋಮಲಿಂಗಪ್ಪ
BP News ಸಿರುಗುಪ್ಪ,ಸೆ.8-ಪತ್ರಿಕೋದ್ಯಮ ಕ್ಷೇತ್ರ ಪದವಿ ಮಾತ್ರವಲ್ಲ ಅದು ಜೀವನ ರೂಪಿಸುವ ಮಾರ್ಗ. ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗದಂತೆ ಪತ್ರಿಕಾರಂಗವೂ ಒಂದು ಎಂದು ಶಾಸಕ ಎಂ ಎಸ್ ಸೋಮಲಿಂಗಪ್ಪ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಭಾಭವನದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣ ಆಯೋಜಿಸಿದ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ ಅವರು ಮಾತನಾಡಿದರು.
—-–
ಜಯಪ್ರಕಾಶ್ ಗೌಡ ನೇತೃತ್ವದ ಸಮಿತಿ ರದ್ದುಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ
BP News ಬಳ್ಳಾರಿ,ಸೆ.8-ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ವೇತನದ ಬಗ್ಗೆ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದ್ದು, ಪ್ರೊ.ಜಯಪ್ರಕಾಶ್ ಗೌಡ ಅಧ್ಯಕ್ಷತೆಯಲ್ಲಿ ಇರುವ ಸಮಿತಿಯನ್ನು ರದ್ದುಪಡಿಸಿ ಸಮಗ್ರ ತನಿಖೆ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಿ.ರಾಮಾಂಜಿನೇಯ ಅವರು ಆಗ್ರಹಿಸಿದ್ದಾರೆ.
ಡಾಟಾ ಎಂಟ್ರಿ ಆಪರೇಟರ್‍ಗಳು ಮತ್ತು ಡಿ ದರ್ಜೆಯ ನೌಕರರು ಕಳೆದ 2 ವರ್ಷ 6 ತಿಂಗಳಿಂದ ನೀಡುತ್ತಿದ್ದ ಮಾಸಿಕ ವೇತನ, ವೇತನ ಭವಿಷ್ಯ ನಿಧಿ, ಇಎಸ್‍ಐ ಪಾವತಿಗಳಲ್ಲಿ ಹಗರಣ ನಡೆದಿದೆ ಎಂದು ತಿಳಿಸಿದ್ದಾರೆ.
—–
ಉಕ್ಕಿ ಹರಿದ ವೇದಾವತಿ ನದಿ-ರೈತರು ಬೆಳೆದ ಬೆಳೆ ನೀರು ಪಾಲು
BP News ಬಳ್ಳಾರಿ,ಸೆ.8- ನಿರಂತರವಾಗಿ ಸುರಿದ ಮಳೆಯಿಂದಾಗಿ ವೇದಾವತಿ ನದಿ ಉಕ್ಕಿ ಹರಿಯುತ್ತಿದ್ದು, ರೈತರು ಬೆಳೆದ ಬೆಳೆಗಳೆಲ್ಲ ನೀರು ಪಾಲಾಗಿದೆ.
ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ಕೇಶವ ರೆಡ್ಡಿ ಅವರ ತೋಟದಲ್ಲಿ ವೇದಾವತಿ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಇದರಿಂದಾಗಿ ಹೊದಲ್ಲಿ ಬೆಳೆದಿದ್ದ ಬೆಳೆಗಳೆಲ್ಲ ನೀರು ಪಾಲಾಗಿವೆ. ಅದೇರೀತಿ, ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕಿನ ಹಲವಾರು ಹಳ್ಳಿಗಳ ರೈತರು ಕಂಗಾಲಾಗಿದ್ದಾರೆ. ಡಿಸಿ ಪವನಕುಮಾರ್ ಮಾಲಪಾಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
—–
ಕಿರೀಟಿಯಿಂದ ಚೊಚ್ಚಲ ಸಿನೇಮಾ ಕುರಿತು ಸ್ವಗತ
BP News ಬಳ್ಳಾರಿ,ಸೆ.8-ನನ್ನ ಚೊಚ್ಚಲ ಸಿನಿಮಾದ ಚಿತ್ರೀಕರಣವು ಬೆಂಗಳೂರಿನಲ್ಲಿ ಸಾಗುತಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಆಗಮಿಸಿ ಚಿತ್ರದ ತುಣುಕುಗಳನ್ನು ನೋಡಿ ಶುಭ ಹಾರೈಸಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು ಎಂದು ಮುಖಪುಟದಲ್ಲಿ ಕಿರೀಟಿ ಬರೆದುಕೊಂಡಿದ್ದಾರೆ. ನಿಮ್ಮ ಪ್ರೀತಿ, ಪೆÇ್ರೀತ್ಸಾಹದ ಮಾತುಗಳಿಗೆ ಆಭಾರಿಯಾಗಿದ್ದೇನೆ. ನಿಮ್ಮ ಹಾರೈಕೆ, ಪೆÇ್ರೀತ್ಸಾಹ ತಮ್ಮ ಕುಟುಂಬದಿಂದ ಸ್ಪೂರ್ತಿ ಪಡೆದ ನನ್ನಂಥ ಅದೆμÉ್ಟೂೀ ಯುವ ಕಲಾವಿದರಿಗೆ ದಾರಿಯಾಗುತ್ತಿದೆ ಎಂದು ಕಿರೀಟಿ ಶಿವರಾಜಕುಮಾರ್ ಬಗ್ಗೆ ಹೇಳಿಕೊಂಡಿದ್ದಾರೆ.
—–