BP News Karnataka Super Fast 07-09-2022

0
141

ಜಿಪಂ ಸಿಇಒ ಜಿ.ಲಿಂಗಮೂರ್ತಿ ನೇತೃತ್ವದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ


BP News ಬಳ್ಳಾರಿ,ಸೆ.07-2023ರ ವಿಧಾನಸಭೆ ಚುನಾವಣೆ ನಿಮಿತ್ತ ಜಿಲ್ಲಾ ಮಟ್ಟದ ಸಮಿತಿ ಹಾಗೂ ತಾಲೂಕು ಹಂತದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತದಾರರಲ್ಲಿ ನೈತಿಕ ಮತದಾನದ ಕುರಿತು ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಲಿಂಗಮೂರ್ತಿ ಅವರು ಹೇಳಿದರು.
2023ರ ವಿಧಾನಸಭೆ ಸುಗಮ ಚುನಾವಣೆಯ ಸಂಬಂಧ ಸ್ವೀಪ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ವಿಡೀಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವರ್ಚುವಲ್ ಮೂಲಕ ಅವರು ಮಾತನಾಡಿದರು.
——-
ಸೆ.17ರಂದು ವಿಶ್ವಕರ್ಮ ಜಯಂತಿ ಅರ್ಥಪೂರ್ಣ ಆಚರಣೆ


BP News ಹೊಸಪೇಟೆ(ವಿಜಯನಗರ),ಸೆ.07-ವಿಜಯನಗರ ಜಿಲ್ಲಾಡಳಿತದ ವತಿಯಿಂದ ಸೆ.17ರಂದು ಬೆಳಗ್ಗೆ 10.30ಕ್ಕೆ ವಿಶ್ವಕರ್ಮ ಜಯಂತಿಯನ್ನು ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎನ್.ಮಹೇಶ್ ಬಾಬು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ವಿರುಪಾಕ್ಷಪ್ಪ ಶೆಟ್ಟಿ, ಹೊಸಪೇಟೆ ತಾಲೂಕು ಕಚೇರಿ ಶಿರಸ್ತೇದಾರ್ ಶ್ರೀಧರ್, ವಿಶ್ವಕರ್ಮ ಸಮಾಜದ ಮುಖಂಡರು ಸೇರಿದಂತೆ ಇತರರು ಇದ್ದರು.
—–
ಹೊಸಪೇಟೆ ನಗರಸಭೆಯ ವಿಶೇಷ ಸಾಮಾನ್ಯ ಸಭೆ-ಟೆಂಡರ್‍ಗಳಿಗೆ ಅನುಮೋದನೆ


BP News ಹೊಸಪೇಟೆ(ವಿಜಯನಗರ)ಸೆ.07- ಹೊಸಪೇಟೆಯ ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.
ಹೊಸಪೇಟೆಯ ನಗರಸಭೆ ಪೌರಾಯುಕ್ತರಾದ ಮನೋಹರ್ ನಾಗರಾಜ ಅವರು, ಅನುಮೋದನೆಗೊಂಡ ಕಾಮಗಾರಿಗಳ ಕುರಿತು ಮಾಹಿತಿಯನ್ನು ಸಭೆಯಲ್ಲಿ ತಿಳಿಸಿದರು. ನಂತರ ಅನುಮೋದನೆಗೊಂಡ ವಿವಿಧ ಕಾಮಗಾರಿಗಳಿಗೆ ಕರೆಯಲಾದ ಟೆಂಡರ್‍ಗಳಿಗೆ ಕಡಿಮೆ ಮೊತ್ತಕ್ಕೆ ಟೆಂಡರ್ ಸಲ್ಲಿಸಿದವರಿಗೆ ವಿಶೇಷ ಸಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.
——
ವ್ಯಕ್ತಿ ಕಾಣೆ: ಪ್ರಕರಣ ದಾಖಲು


BP News ಹೊಸಪೇಟೆ(ವಿಜಯನಗರ),ಸೆ.07-ಹೊಸಪೇಟೆಯ ಪಟೇಲ್ ನಗರದ 3ನೇ ವಾರ್ಡ್‍ನ ನಿವಾಸಿಯಾದ ಎ.ನಾಗರಾಜ ಎಂಬ 61ವರ್ಷದ ವ್ಯಕ್ತಿಯು ಆ.28ರಂದು ಸಂಜೆ ಸುಮಾರು 5ಗಂಟೆಯ ಸಮಯದಲ್ಲಿ ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಹೊಸಪೇಟೆ ವಿಜಯನಗರ ಜಿಲ್ಲೆಯ ಎಸ್.ಪಿ ಅವರ ಕಚೇರಿ ದೂ.ಸಂ.08394-258400 ಹಾಗೂ ವಿಜಯನಗರ ಜಿಲ್ಲೆಯ ಕಂಟ್ರೋಲ್ ರೂಂ ಮೊ.ಸಂ.9480805700ಗೆ ಸಂಪರ್ಕಿಸಬಹುದು. .
——–
ಮಣುಪುರಂ ಹಾಗೂ ಮುತ್ತೂಟ್ ಗೋಲ್ಡ್ ಲೋನ್ ಬ್ಯಾಂಕಿನಲ್ಲಿ ಮೋಸ-ರೈತರ ಆರೋಪ


BP News ಬಳ್ಳಾರಿ,ಸೆ.7-ಮಣಪ್ಪುರಂ ಹಾಗೂ ಮುತ್ತೂಟ್ ಗೋಲ್ಡ್ ಲೋನ್ ಬ್ಯಾಂಕುಗಳು ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರು ಅಡವಿಟ್ಟ ಬಂಗರಾದ ಒಡವೆಗಳನ್ನು 1 ತಿಂಗಳ ನಂತರ ಹರಾಜು ಹಾಕಿ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆರೋಪಿಸಿದೆ.
ಕರ್ನಾಟಕ ರಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಡೊಂಬಿ ಹನುಮಂತಪಪ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಈ ಕುರಿತು ಪ್ರತಿಭಟನೆ ನಡೆಸಿದ ರೈತರು, ಈ ಎರಡು ಬ್ಯಾಂಕುಗಳು ಹರಾಜು ಮಾಡಿರುವ ಚಿನ್ನವನ್ನು ಮಹಿಳೆಯರಿಗೆ ವಾಪಾಸು ನೀಡಬೇಕು. ರಾಜ್ಯ ಸರ್ಕಾರ ಈ ಎರಡು ಬ್ಯಾಂಕುಗಳನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು.
—–
ಆಂಥೇ ಪರೀಕ್ಷಾ ಪದ್ಧತಿಯಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ವಿಕಸನಕ್ಕೆ ಸಹಕಾರಿ-ಕೌರ್


BP News ಬಳ್ಳಾರಿ,ಸೆ.7-ಆಕಾಶ್ ಬೈಜೂಸ್ ಎಲ್ಲರಿಗೂ ಶಿಕ್ಷಣವನ್ನು ಪ್ರಾರಂಭಿಸಿದೆ. ಶಿಕ್ಷಣದಲ್ಲಿ ಹೆಣ್ಣು ಮಗುವಿಗೂ ನ್ಯಾಯ ಸಿಗಬೇಕು. ಎಲ್ಲ ವಿದ್ಯಾರ್ಥಿಗಳೂ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕೆಂಬ ಉದ್ದೇಶವಿಟ್ಟುಕೊಂಡು ಸಮರ್ಥ ತರಗತಿಗಳನ್ನು ನಡೆಸುತ್ತಿದೆ ಎಂದು ಆಕಾಶ್ ಬೈಜೂಸ್ ನ ಶಾಖಾ ಮುಖ್ಯಸ್ಥೆ ಗುರುವಿಂದರ್ ಕೌರ್ ಹೇಳಿದರು.
ತಮ್ಮ ಶಾಖೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ ಎನ್ ಟಿ ಎಚ್ ಇ-2022ರ ಭಾಗವಾಗಿ ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಆಂಥೆ ಮತ್ತು ಜೆಇಇ ಕೋಚಿಂಗ್ ನೀಡಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ ಎಂದರು.
—–
ಶಿಕ್ಷಕರ ಶಿಕ್ಷಕ ಅಲ್ಲಾಸಾಬ್ ಮೇಷ್ಟ್ರು ಇನ್ನಿಲ್ಲ


BP News ಕೊಪ್ಪಳ,ಸೆ.7-ತಾಲೂಕಿನ ಹಿಟ್ನಾಳ ಗ್ರಾಮದ ಶಿಕ್ಷಕರ ಶಿಕ್ಷಕ ಅಲ್ಲಾಸಾಬ್ ಅವರು ಇಂದು ಅನಾರೋಗ್ಯ ನಿಮಿತ್ತ ನಿಧನ ಹೊಂದಿದ್ದು, ಅವರ ಅಪಾರ ಶಿಷ್ಯ ಬಳಗವು ದುಃಖದ ಮಡುವಿನಲ್ಲಿ ಮುಳುಗಿದೆ.
ಅಲ್ಲಾಸಾಬ್ ಅವರು 1980-90ರ ದಶಕದಿಂದ ಇಲ್ಲಿಯವರೆಗೂ ಅನೇಕ ವಿದ್ಯಾರ್ಥಿಗಳಿಗೆ ಬದುಕಿನ ದಾರಿದೀಪವಾಗಿದ್ದರು. ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿದ್ಯಾಭ್ಯಾಸದ ಸರಳ ಸೂತ್ರಗಳನ್ನು ತಿಳಿಸಿಕೊಡುವ ಮೂಲಕ ಸರಾಗವಾಗಿ ಇಂಗ್ಲೀಷ್ ಮಾತನಾಡಲು, ಓದಲು ಮತ್ತು ವ್ಯವಹರಿಸಲು ಬೋಧನೆ ಮಾಡುತ್ತಿದ್ದ ಅವರ ಕಲಿಕಾ ಶೈಲಿ ಎಲ್ಲರಿಗೂ ಇಷ್ಟವಾಗಿತ್ತು.
—-

 

 

LEAVE A REPLY

Please enter your comment!
Please enter your name here