ಬಳ್ಳಾರಿ,ಸೆ.6 BP News –ಎಲಿವೇಟ್ ಕಲ್ಯಾಣ ಕರ್ನಾಟಕ ಬೂಟ್ ಕ್ಯಾಂಪ್ ಯುವ ಉದ್ಯಮಿಗಳಿಗೆ ವರದಾನವಾಗಿದೆ ಎಂದು ವಿಶ್ವರೂಪ ಸಂಸ್ಥೆಯ ರಾಹುಲ್ ಪುಲಿಪಾಟಿ ಅಭಿಪ್ರಾಯ ಪಟ್ಟಿದ್ದಾರೆ.
ಶಿಕ್ಷಕರ ದಿನಾಚರಣೆಯಂದು ನಗರದ ಹೊಸಪೇಟೆ ರಸ್ತೆಯಲ್ಲಿರುವ ಬಿಐಟಿಎಂ ಕಾಲೇಜಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಇವರು ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಬೂಟ್ ಕ್ಯಾಂಪ್ ನಲ್ಲಿ ಭಾಗವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಸ್ಟಾರ್ಟ್ ಅಪ್ ಕಂಪನಿಗಳಿಗೆ ಸರ್ಕಾರವು ಆರ್ಥಿಕ ಸಹಾಯ ಮತ್ತು ಮಾರ್ಗದರ್ಶನವನ್ನು ನೀಡುತ್ತಿರುವುದು ಹೊಸ ತಲೆಮಾರಿನ ಉದ್ಯಮಿಗಳಿಗೆ ನೆರವಾಗುತ್ತಿದೆ. ಈ ಎಲಿವೇಟ್ ಕಲ್ಯಾಣ ಕರ್ನಾಟಕ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈಗಾಗಲೇ ಎಲಿವೇಟ್ ಅಮೃತಾ ಸ್ಟಾರ್ಟ್‍ಅಪ್-2020-2021 ನಲ್ಲಿ ನಮ್ಮ ಸ್ಟಾರ್ಟ್ ಅಪ್ ಕಂಪನಿಯಾದ ವಿಶ್ವರೂಪ ಸಂಸ್ಥೆಯು ಆಯ್ಕೆಯಾಗಿದ್ದು ಇದು ಬಳ್ಳಾರಿಯ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಐಟಿಎಂ ಕಾಲೇಜಿನ ಡೆಪ್ಯುಟಿ ಡೈರೆಕ್ಟರ್ ಪೃಥ್ವಿರಾಜ್ ಭೂಪಾಲ್, ಸ್ಟಾರ್ಟ್ ಅಪ್ ಕರ್ನಾಟಕದ ಡಾ.ಸಂಧ್ಯಾ, ಗೌರವ್ ಕೆ.ಪಂಜಾಬಿ, ಉದ್ಯಮಿ ಡಾ.ರಮೇಶ್ ಗೋಪಾಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸರಾವ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು, ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗದವರು ಇದ್ದರು.
——-