BP NEWS: ಬಳ್ಳಾರಿ: ಸೆಪ್ಟೆಂಬರ್.03: 2022-23ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ಪ್ರಕಟಿಸಲಾಗಿದ್ದು,12 ಜನರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಇದೇ ಸೆ.05ರಂದು ನಡೆಯಲಿರುವ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.
ಸೆ.1ರಂದು ಡಿಡಿಪಿಐ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಆಯ್ಕೆ ಸಮಿತಿ ಸಭೆಯ ಮೂಲಕ ಈ 12 ಜನರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಸಲ್ಲಿಕೆಯಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಪ್ರತಿ ತಾಲೂಕಿಗೆ ಕಿರಿಯ/ಹಿರಿಯ/ಪ್ರೌಢ ವಿಭಾಗಗಳಿಂದ ಒಟ್ಟು 12 ಜನ ಶಿಕ್ಷಕರನ್ನು ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ವಿವರ:
ಕಿರಿಯ ಪ್ರಾಥಮಿಕ ವಿಭಾಗದಿಂದ ಬಳ್ಳಾರಿಯ ಪೂರ್ವ ತಾಲೂಕಿನ ಕಪ್ಪುಗಲ್ಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಿ.ಸಿದ್ದೇಶ್ವರ, ಬಳ್ಳಾರಿಯ ಪಶ್ಚಿಮ ತಾಲೂಕಿನ ಕುರುಗೋಡು ಪಟ್ಟಣದ ವಾಲ್ಮೀಕಿ ನಗರ ಸ.ಹಿ.ಪ್ರಾ.ಶಾಲೆಯ ನಬಿಸಾಬ್, ಸಂಡೂರು ತಾಲೂಕಿನ ವೆಂಕಟಗಿರಿ ಸ.ಹಿ.ಪ್ರಾ.ಶಾಲೆಯ ರಾಧಮ್ಮ, ಸಿರುಗುಪ್ಪ ತಾಲೂಕಿನ ಮುತ್ತುಮುರಣಿ ಸ.ಹಿ.ಪ್ರಾ.ಶಾಲೆಯ ಶಿವಣ್ಣ.
ಹಿರಿಯ ಪ್ರಾಥಮಿಕ ವಿಭಾಗ: ಹಿರಿಯ ಪ್ರಾಥಮಿಕ ವಿಭಾಗದಿಂದ ಬಳ್ಳಾರಿಯ ಪೂರ್ವ ತಾಲೂಕಿನ ಬೈಲೂರು ಸ.ಹಿ.ಪ್ರಾ.ಶಾಲೆಯ ಕೆ.ಮಲ್ಲಿಕಾರ್ಜುನ, ಬಳ್ಳಾರಿ ಪಶ್ಚಿಮ ತಾಲೂಕಿನ ಹವಂಭಾವಿ ಸ.ಹಿ.ಪ್ರಾ.ಶಾಲೆಯ ಶೀಲಾ, ಸಂಡೂರು ತಾಲೂಕಿನ ಸುಶೀಲಾನಗರ ಸ.ಹಿ.ಪ್ರಾ.ಶಾಲೆಯ ಅನಿತಾ, ಸಿರುಗುಪ್ಪ ತಾಲೂಕಿನ ಮುದ್ದಟನೂರು ಸ.ಹಿ.ಪ್ರಾ.ಶಾಲೆಯ ಅಂಜಿನಮ್ಮ.
ಪ್ರೌಢ ಶಾಲಾ ವಿಭಾಗ: ಪ್ರೌಢ ಶಾಲಾ ವಿಭಾಗದಿಂದ ಬಳ್ಳಾರಿಯ ಪೂರ್ವ ತಾಲೂಕಿನ ಕಕ್ಕಬೇವಿನಹಳ್ಳಿ ಸ.ಪ್ರೌ. ಶಾಲೆಯ ಲಕ್ಷೀ, ಬಳ್ಳಾರಿ ಪಶ್ಚಿಮ ತಾಲೂಕಿನ ಬಂಡಿಹಟ್ಟಿ ಸ.ಪ್ರೌ. ಶಾಲೆಯ ವನಜಾಕ್ಷಿ, ಸಂಡೂರು ತಾಲೂಕಿನ ಚೋರುನೂರು ಸ.ಪ.ಪೂ.ಕಾಲೇಜು ಜಗದೀಶ ಬೇವಿನಕಟ್ಟಿ, ಸಿರುಗುಪ್ಪ ತಾಲೂಕಿನ ಬಲಕುಂದಿ ಸ.ಪ್ರೌ. ಶಾಲೆಯ ಶಂಕರ್ ವಾಲೇಕರ್ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.