ಹಳೆ ಕೋರ್ಟ್ ಆವರಣದಲ್ಲಿ ಪಾಲಿಕೆ ಆಡಳಿತಕ್ಕೆ ಅವಕಾಶ ಕೋರಿ ಕೆಸಿ ಕೊಂಡಯ್ಯ ಮುಖ್ಯಮಂತ್ರಿಗೆ ಪತ್ರ
BP News ಬಳ್ಳಾರಿ,ಸೆ.2-ಬಳ್ಳಾರಿ ನಗರ ವೇಗವಾಗಿ ಬೆಳೆಯುತ್ತಿದ್ದು, ಮಹಾನಗರ ಪಾಲಿಕೆಗೆ ವಿಶಾಲವಾದ ಕಟ್ಟಡದ ಅಗತ್ಯತೆ ಇದೆ. ಹೃದಯ ಭಾಗದಲ್ಲಿರುವ ಹಳೇ ನ್ಯಾಯಾಲಯದ ಕಟ್ಟಡವನ್ನು ಮಹಾನಗರಪಾಲಿಕೆಗೆ ಹಸ್ತಾಂತರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಕೆ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಬಿ.ನಾಗೇಂದ್ರ, ಜಿಲ್ಲಾಧಿಕಾರಿ ಪವನಕುಮಾರ್, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಮತ್ತು ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಅವರಿಗೆ ಪತ್ರ ಬರೆದಿದ್ದಾರೆ.
——
ಗುಜರಾತ್ ಅಲ್ಪ ಸಂಖ್ಯಾತ ಹತ್ಯಾಕಾಂಡ ಮುಚ್ಚುವ ಯತ್ನ-ಎಸ್‍ಯುಸಿಐ ಆಕ್ರೋಶ
BP News ಬಳ್ಳಾರಿ,ಸೆ.2-ಇತ್ಯರ್ಥವಾಗದೆ ಉಳಿದಿರುವ ಗುಜರಾತ್ ಅಲ್ಪಸಂಖ್ಯಾತ ವಿರೋಧಿ ಕೋಮು ಹತ್ಯಾಕಾಂಡ ಪ್ರಕರಣಗಳನ್ನು ಮುಚ್ಚುವ ಸುಪ್ರೀಂ ಕೋರ್ಟ್ ತೀರ್ಪಿಗೆ ಎಸ್ ಯುಸಿಐ ಕಮ್ಯುನಿಸ್ಟ್ ಪಕ್ಷದ ಕರ್ನಾಟಕ ರಾಜ್ಯ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.
ನೊಂದವರಿಗೆ ನ್ಯಾಯ ಒದಗಸಲು ವಿಫಲವಾಗಿರುವುದು ಮಾತ್ರವಲ್ಲ, ಬದಲಿಗೆ ಗುಜರಾತ್ ಹತ್ಯಾಕಾಂಡದ ಅಪರಾಧಿಗಳಿಗೆ ಪುರಸ್ಕಾರ ನೀಡಿರುವ ಅತ್ಯಂತ ಗಂಭೀರ ರೀತಿಯ ತಪ್ಪಾಗಿದೆ. ಈ ಘೋರ ಅನ್ಯಾಯದ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕು ಮತ್ತು ಅರ್ಜಿಗಳನ್ನು ಪರಿಗಣಿಸಿ, ಆ ಮೂಲಕ ನೊಂದವರಿಗೆ ಸಾಧ್ಯವಾದಷ್ಟು ಬೇಗ ನ್ಯಾಯವನ್ನು ಒದಗಿಸಬೇಕು ಎಂದು ನಾವು ಸುಪ್ರೀಂ ಕೋರ್ಟ್‍ಗೆ ಅಗ್ರಹಿಸಿದೆ.
——
ದೂರ ದೃಷ್ಟಿಕೋನದ ಮಹಾನ್ ಚೇತನ ಪ್ರೊ. ಬಿ ಷೇಕ್ ಅಲಿ-ಡಾ.ಮೋಹನ್ ಕೃಷ್ಣ ರೈ
BP News ಬಳ್ಳಾರಿ,ಸೆ.2-ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಪನ್ಮೂಲ ತಜ್ಞರು, ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡ ಮಹಾನ್ ಚಿಂತಕರು, ಇತಿಹಾಸ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ ಅವರ ನೆನಪು ಇನ್ನು ಶಾಶ್ವತ ಎಂದು ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ. ಮೋಹನ್ ಕೃಷ್ಣ ರೈ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ನಾಡಿನ ಹಿರಿಯ ಇತಿಹಾಸ ತಜ್ಞರು ಹಾಗೂ ನಾಡೋಜ ಪ್ರೊ. ಬಿ ಷೇಕ್ ಅಲಿ ಅವರಿಗೆ ಸಂತಾಪ ಸೂಚಕ ಸಭೆಯಲ್ಲಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು.
——
ಇಬ್ಬರು ರಂಗಸಾಧಕರಿಗೆ ದೊಡ್ಡನಗೌಡ ರಂಗತೋರಣ ಪುರಸ್ಕಾರ-ಪ್ರಭುದೇವ ಕಪ್ಪಗಲ್ಲು
BP News ಬಳ್ಳಾರಿ,ಸೆ.2-2020ನೇ ಸಾಲಿಗೆ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ ಶೇಖ್ ಮಾಸ್ತರ 2001ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ, ಪಪೆಟ್ ತಜ್ಞೆ ಗೌರಿದತ್ತು ಅವರು ಸ್ವೀಕರಿಸಲಿದ್ದು ಬರುವ ಆಕ್ಟೋಬರ್ ತಿಂಗಳಲ್ಲಿ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಬಳ್ಳಾರಿ ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜೋಳದರಾಸಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ, ಟ್ರಸ್ಟಿಗಳಾದ ಕಲ್ಲುಕಂಬ ಶಿವೇಶ್ವರಗೌಡ, ಅಡವಿಸ್ವಾಮಿ ಮತ್ತು ಪ್ರವೀಣ್ ನಾಯಕ್ ಇದ್ದರು.
——
ಅ.21ರಿಂದ 4 ದಿನಗಳ ಕಾಲ ವಿಶ್ವ ಕವಿ ಸಮ್ಮೇಳನ-ಡಾ.ಅರವಿಂದ ಪಟೇಲ್
BP News ಬಳ್ಳಾರಿ,ಸೆ.2-ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಾವ್ಯಕ್ಕೆ ಮೆರಗು ನೀಡಲು ಅರಿವು ಸಂಸ್ಥೆಯು ಅಕ್ಟೋಬರ್ 21ರಿಂದ ನಾಲ್ಕು ದಿನಗಳ ಕಾಲ ಸಂಗಂ-2022 ವಿಶ್ವ ಕವಿ ಸಮ್ಮೇಳನ ಆಯೋಜಿಸಿದೆ ಎಂದು ಅರಿವು ಸಂಘಟನೆಯ ಸಂಘಟನಾ ಅಧ್ಯಕ್ಷರಾದ ಡಾ.ಅರವಿಂದ್ ಪಟೇಲ್ ಅವರು ಹೇಳಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕವಿ ಸಮ್ಮೇಳನಕ್ಕೆ ವಿಶ್ವದಾದ್ಯಂತ 50ಕ್ಕೂ ಹೆಚ್ಚು ರಾಷ್ಟ್ರೀಯ, ಅಂತರಾಷ್ಟ್ರೀಯ ಕವಿಗಳು ಭಾಗವಹಿಸಲಿದ್ದಾರೆ. ಈಗಾಗಲೇ ವಿದೇಶೀ ಕವಿಗಳು ಸಮ್ಮೇಳನದಲ್ಲಿ ಭಾಗವಹಿಸಲು ಸಮ್ಮತಿಸಿದ್ದಾರೆ ಎಂದರು. ಸಿರಿಗೇರಿ ಪನ್ನಾರಾಜ್, ಅಜಯ್ ಬಣಕಾರ, ನಿಷ್ಠಿ ರುದ್ರಪ್ಪ, ಶಿವಲಿಂಗಪ್ಪ ಹಂದ್ಯಾಳು, ವೀರೇಂದ್ರ ರಾವಿಹಾಳ್, ಟಿಜಿ ವಿಠಲ್ ಮತ್ತು ಬಸವರಾಜ ಬಿಸಿಲಹಳ್ಳಿ ಇದ್ದರು.
——
ಮೃತ ವಿದ್ಯಾರ್ಥಿನಿ ಕುಟುಂಬದವರಿಗೆ ರೂ.25 ಲಕ್ಷ ಪರಿಹಾರ ನೀಡಲು ಆಮ್ ಆದ್ಮಿ ಪಾರ್ಟಿ ಆಗ್ರಹ
BP News ಬಳ್ಳಾರಿ,ಸೆ.2-ಶಂಕರಬಂಡೆ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಸಾವಿಗೀಡಾಗಿದ್ದು ಅಲ್ಲಿನ ಕಳಪೆ ಕಟ್ಟಡದಿಂದಾಗಿ. ಬಾಲಕಿಯನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬದವರಿಗೆ ರಾಜ್ಯ ಸರ್ಕಾರ ಪರಿಹಾರವಾಗಿ ರೂ.25 ಲಕ್ಷಣ ಹಣ ನೀಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ವಿಬಿ ಮಲ್ಲಪ್ಪ ಒತ್ತಾಯಿಸಿದ್ದಾರೆ.
ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಈ ಕುರಿತು ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಆಮ್ ಆದ್ಮಿ ಪಾರ್ಟಿಯ ಗ್ರಾಮಾಂತರ ಘಟಕದ ಅಧ್ಯಕ್ಷ ಖಲಂದರ್, ಪದಾಧಿಕಾರಿಗಳಾದ ಟಿ.ಕಿರಣ್ ಕುಮಾರ್, ನಗರ ಘಟಕದ ಅಧ್ಯಕ್ಷ ಸೈಯದ್ ಅಮೀರ್ ಖಾದ್ರಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶೇಕ್ಷಾವಲಿ ಇದ್ದರು.
——-