BP News Karnataka Super Fast 01-09-2022

0
168

ಏತನೀರಾವರಿ ಯೋಜನೆ(ಡಿ-7 ಕಾಲುವೆ)ಪುನಶ್ಚೇತನ ಕಾಮಗಾರಿ ಸಚಿವ ಬಿ.ಶ್ರೀರಾಮುಲು ಲೋಕಾರ್ಪಣೆ


BP News ಬಳ್ಳಾರಿ,ಸೆ.1-ಕುರುಗೋಡು ತಾಲೂಕಿನ ಕೋಳೂರು ಬಳಿ 7.13 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೋಳೂರು ಏತನೀರಾವರಿ(ಡಿ-7 ಕಾಲುವೆ) ಪುನಶ್ಚೇತನಾ ಕಾಮಗಾರಿಯನ್ನು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಲೋಕಾರ್ಪಣೆಗೊಳಿಸಿದರು.
ನೀರಾವರಿ ಭಾದಿತ ಅಚ್ಚುಕಟ್ಟು ಪ್ರದೇಶವಾಗಿರುವ ಬೈಲೂರು,ಸಿಂಧಿಗೇರಿ, ಶಾನವಾಸಪುರ,ಡಿ.ಕಗ್ಗಲ್ಲು,ಕೊಂಚಿಗೇರಿ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಸುಮಾರು 3750 ಎಕರೆ ಜಮೀನು ಪ್ರದೇಶಕ್ಕೆ ಜುಲೈನಿಂದ ಡಿಸೆಂಬರ್‍ವರೆಗೆ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ಹೇಳಿದರು.
——
ವಿದ್ಯಾರ್ಥಿಗಳಿಂದ ಸೋಮ ಸಮುದ್ರ ಗ್ರಾಮದಲ್ಲಿ ಬಸ್ಸಿನ ಸೌಲಭ್ಯಕ್ಕಾಗಿ ಪ್ರತಿಭಟನೆ


BP News  ಬಳ್ಳಾರಿ,ಸೆ.1-ಸೋಮಸಮುದ್ರ ಗ್ರಾಮದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಬಸ್ಸಿನ ಸೌಲಭ್ಯಕ್ಕಾಗಿ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮಕ್ಕಳು ಪ್ರತಿದಿನ ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿರದೆ, ಇರೋ ಬಸ್‍ಗೆ ನೇತಾಡಿಕೊಂಡು ಹೋಗುವ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಪ್ರಾಣಾಪಾಯ ಆಗುವ ಸಂಭವವೂ ಎದುರಾಗಬಹುದು. ಹಾಗಾಗಿ ಅಧಿಕಾರಿಗಳು ಈ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ನಿಯಂತ್ರಣಾದಿಕಾರಿ ಹೇಮಲತಾ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
——-
ಶಾಂತಿಗಾಗಿ ಆಗ್ರಹಿಸಿ ಅಂತರಾಷ್ಟ್ರೀಯ ಕ್ರಿಯಾ ದಿನ ಆಚರಿಸಲು ಸಾಂಕೇತಿಕ ಪ್ರತಿಭಟನೆ


BP News ಬಳ್ಳಾರಿ,ಸೆ.1-ಜಗತ್ತಿನ ಶಾಂತಿಗೆ ಮಾರಕವಾಗಿರುವ ನ್ಯಾಟೋವನ್ನು ವಿಸರ್ಜಿಸಿ, ಸಾಮ್ರಾಜ್ಯಶಾಹಿ ರμÁ್ಯ ಉಕ್ರೇನ್‍ನಿಂದ ಕೈ ತೆಗೆದು ಮಾನವತೆಗೆ ದೊಡ್ಡ ಅಪಾಯವಾಗಿರುವ ಅಮೇರಿಕನ್ ಸಾಮ್ರಾಜ್ಯವಾದಕ್ಕೆ ಧಿಕ್ಕಾರವೆಂದು ಘೋಷಣೆ ಮೊಳಗಿಸಿರುವ ಎಐಯುಟಿಯುಸಿ ಸಂಘಟನೆಯು ಬಳ್ಳಾರಿಯ ಓಪಿಡಿ ಬಸ್ ನಿಲ್ದಾಣದಲ್ಲಿ ಶಾಂತಿಗಾಗಿ ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿತು.
ಈವೇಳೆ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಎ.ಶಾಂತಾ ವಹಿಸಿದ್ದರು. ಜಂಟಿ ಕಾರ್ಯದರ್ಶಿಗಳಾದ ಸುರೇಶ್.ಜಿ, ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕಾರ್ಮಿಕರಾದ ನಾಗಮ್ಮ, ಅಂಜಲಿ, ಇಂದಿರಮ್ಮ, ಪ್ರಸಾದ್, ಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.
——–
ಲೈಂಗಿಕ ದೌರ್ಜನ್ಯ-ಮುರುಘಾ ಸ್ವಾಮೀಜಿಯನ್ನು ಬಂಧಿಸುವಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಆಗ್ರಹ


BP News ಬಳ್ಳಾರಿ,ಸೆ.1-ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿ ಇವರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿರುವ ಕುರಿತು ಪ್ರಕರಣ ದಾಖಲಾಗಿದ್ದು ಕೂಡಲೇ ಸ್ವಾಮೀಜಿಯನ್ನು ಬಂಧಿಸುವಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ನಿಯೋಗದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜಯರಾಮ, ಸಿ.ಮಾನಯ್ಯ, ಸಿ.ಚಂದ್ರಶೇಖರ, ಮಧುರಾಜ್, ರಾಜಶೇಖರ, ಸಿ.ಮಲ್ಲಿಕಾರ್ಜುನ, ಮಹೇಶ ಇನ್ನಿತರರು ಇದ್ದರು.
——
ಬಿಲ್ಕೀಸ್ ಭಾನು ಪ್ರಕರಣ-ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸೆ.2ರಂದು ಪ್ರತಿಭಟನೆ


BP News ಬಳ್ಳಾರಿ,ಸೆ.1-ಇಡೀ ದೇಶವೇ ಬೆಚ್ಚಿ ಬೀಳಿಸಿದ್ದ ಬಿಲ್ಕೀಸ್ ಭಾನು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಆರೋಪಿಗಳನ್ನು ಬಿಡುಗಡೆಗೊಳಿಸಿದ್ದು ಅವರನ್ನು ಮತ್ತೆ ಬಂಧಿಸಬೇಕೆಂದು ಒತ್ತಾಯಿಸಿ ನಾಳೆ ರಾಜ್ಯದಾದ್ಯಂತ ಕೈಗೊಂಡಿರುವ ಪ್ರತಿಭಟನಾ ರ್ಯಾಲಿಯಲ್ಲಿ ಬಳ್ಳಾರಿಯಲ್ಲಿಯೂ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿರುವುದಾಗಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಚಂದ್ರಕುಮಾರಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪರ್ವಿನ್ ಭಾನು, ಪ್ರಗತಿ ಸೇವಾ ಸಂಘದ ಸದಸ್ಯ ಉಮೇಶ್, ಉಪಾದ್ಯಕ್ಷ ಗಂಗಣ್ಣ, ಸಿಐಟಿಯು ಮುಖಂಡರಾದ ಜೆ.ಸತ್ಯಬಾಬು ಇನ್ನಿತರರು ಇದ್ದರು.
——-
ಲೈಂಗಿಕ ದೌರ್ಜನ್ಯ ಆರೋಪ-ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಪ್ರತಿಭಟನೆ


BP News ಬಳ್ಳಾರಿ,ಸೆ.1-ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮಿಯಿಂದ ಲೈಂಗಿಕ ದೌರ್ಜನ್ಯ ಆರೋಪ ಇದ್ದು ಮಠದ ಸ್ವಾಮೀಜಿ ಸೇರಿದಂತೆ ಸಹಕರಿಸಿದ ಎಲ್ಲ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ಡಿಜಿ ಸಾಗರ್ ಬಣದ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿರುವ ಈ ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಈ ಕುರಿತ ಮನವಿ ಪತ್ರವನ್ನು ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
——-
ಮಹಾದೇವತ ಕಲಾ ಸಂಘದ ಕಲಾಸೇವೆ ಶ್ಲಾಘನೀಯ-ಎಂ.ಶಿವಾಜಿರಾವ್


BP News ಬಳ್ಳಾರಿ,ಸೆ.1-ಕಳೆದ ಹಲವು ವರ್ಷಗಳಿಂದ ಕಲೆಯನ್ನು ಪೋಷಿಸಿ ಉಳಿಸಿ ಬೆಳೆಸುತ್ತಿರುವ ಶ್ರೀ ಮಹಾದೇವ ತಾತ ಕಲಾಸಂಘದ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಶಿವಾಜಿರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಇಲ್ಲಿನ ತಾಳೂರು ರಸ್ತೆಯ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಹಂದ್ಯಾಳಿನ ಶ್ರೀಮಹಾದೇವತಾತ ಕಲಾ ಸಂಘ ಇವರು ಆಯೋಜಿಸಿದ್ದ ಸಾಂಸ್ಕøತಿಕ ಸಂಭ್ರಮ 2022 ಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸಿರುಗುಪ್ಪ ಉಪ ಖಜಾನೆಯ ಮುಖ್ಯ ಲೆಕ್ಕಿಗರಾದ ಪಿ.ಅಲ್ಲಾಬಕಾಷ್, ಶಿಕ್ಷಕ ಮೆಹತಾಬ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.
—–

LEAVE A REPLY

Please enter your comment!
Please enter your name here