ಶಿಕ್ಷಕರ ದಿನಾಚರಣೆ ಅರ್ಥಪೂರ್ಣ ಆಚರಣೆಗೆ ಅಂಚೆ ಇಲಾಖೆ ಸಾಥ್

0
142

BP NEWS: ಬಳ್ಳಾರಿ: ಆಗಸ್ಟ್.30: ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆಯು ಕೈ ಜೋಡಿಸಿದ್ದು, ಗುರುವಂದನಾ ಗ್ರೀಟಿಂಗ್ ಪೇಸ್ಟ್‍ಗಳ ಮೂಲಕ ತಮ್ಮ ನೆಚ್ಚಿನ ಗುರುಗಳಿಗೆ ಶುಭಾಷಯಗಳನ್ನು ಕೋರಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಗುರುಗಳ ಮೇಲಿನ ಪ್ರೀತಿ,ಅಭಿಮಾನ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದೆ.
ಭಾರತೀಯ ಅಂಚೆ ಇಲಾಖೆಯಲ್ಲಿ ಗುರುವಂದನಾ ಗ್ರೀಟಿಂಗ್ ಪೆÇೀಸ್ಟ್‍ಗಳು ಈಗ ಲಭ್ಯವಿದ್ದು ಭಾರತದ ಯಾವುದೇ ಊರಿನಲ್ಲಿ ವಾಸವಾಗಿರುವ ನಿಮ್ಮ ನೆಚ್ಚಿನ ಗುರುಗಳಿಗೆ ನಿಮ್ಮ ಆಯ್ಕೆಯ ಶುಭಾಶಯ ಸಂದೇಶ ಹಾಗೂ ಒಂದು ಸಾಂಕೇತಿಕ ಉಡುಗೊರೆ (ನಿಮ್ಮ ಆಯ್ಕೆಯಂತೆ ಬೀಜಯುಕ್ತ ಪೆನ್ಸಿಲ್ (plantable seed pencil) ಅಥವಾ ಪೆನ್ ಅಥವಾ ಬುಕ್ ಮಾರ್ಕ್) ಕಳುಹಿಸಬಹುದಾಗಿದೆ ಎಂದು ಅಂಚೆ ಇಲಾಖೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸೇವೆಯ ಶುಲ್ಕ ರೂಪಾಯಿ 140 ಮಾತ್ರವಿದ್ದು, ನಿಮ್ಮ ಆಯ್ಕೆಯ ಸಂದೇಶ ಹಾಗೂ ಉಡುಗೊರೆಯನ್ನು ನಿಮ್ಮ ಶಿಕ್ಷಕರಿಗೆ ವಿಶೇಷ ಲಕೋಟೆಯಲ್ಲಿರಿಸಿ ಕಳುಹಿಸಲಾಗುವುದು. ಈ ಶುಭಾಶಯ ಸೇವೆಯನ್ನು ಪಡೆಯಲು www.karnatakapost.gov.in ನಲ್ಲಿ ಗುರುವಂದನಾ ಲಿಂಕ್ ಬಳಸಿಕೊಳ್ಳಬಹುದಾಗಿದೆ. ಈ ವೆಬ್‍ಸೈಟ್‍ನಲ್ಲಿ ಈ ಸೇವೆಯು ಸೆ.1ರವರೆಗೆ ಲಭ್ಯವಿರುತ್ತದೆ.
ಭಾರತದಲ್ಲಿರುವ ಮತ್ತು ಹೊರಗಿನ ಯಾವುದೇ ದೇಶದಲ್ಲಿ ಪ್ರಸಕ್ತ ವಾಸವಿರುವವರು ಭಾರತದ ನಿವಾಸಿಗಳಾದ ತಮ್ಮ ಶಿಕ್ಷಕರಿಗೆ ಈ ಸೇವೆಯ ಮೂಲಕ ಗುರುವಂದನೆ ಸಲ್ಲಿಸುವ ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here