BP News Karnataka Super Fast 30-08-2022

0
176

ವಿಜಯನಗರ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಡಿಸಿ ಅನಿರುದ್ಧ್ ಶ್ರವಣ್ ಆದೇಶ


BP News ಹೊಸಪೇಟೆ(ವಿಜಯನಗರ)ಆ.30-ಶ್ರೀ ಗಣೇಶ ಹಬ್ಬವನ್ನು ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆಯ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನೆರವೇರಿಸುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಆ.31ರಿಂದ ಸೆ.10ರವರೆಗೆ ಜಿಲ್ಲೆಯ ವಿವಿಧೆಡೆ ಅನ್ವಯವಾಗುವಂತೆ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ನಿಷೇಧಾಜ್ಞೆ ಜಾರಿಗೊಳಿಸಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಆದೇಶ ಹೊರಡಿಸಿದ್ದಾರೆ.
——
ನಗರದೊಳಗೆ ಭಾರೀ ವಾಹನಗಳ ಓಡಾಟ-ನಾಗರಿಕರಲ್ಲಿ ಆತಂಕ


BP News  ಬಳ್ಳಾರಿ,ಆ.30-ಕೌಲ್ ಬಜಾರ್ ಗೆ ತೆರಳುವ ರೇಲ್ವೆ ಮೇಲ್ಸೇತುವೆಯಲ್ಲಿ ಇತ್ತೀಚೆಗೆ ಭಾರೀ ಗಾತ್ರದ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವಿಗೀಡಾಗಿ, ಮತ್ತೊಂದು ಮಗು ತೀವ್ರತೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ಇನ್ನೂ ಮಾಸುವ ಮುನ್ನವೇ ಭಾರೀ ಗಾತ್ರದ ವಾಹನಗಳು, ಲಾರಿಗಳನ್ನು ನಗರದೊಳಗೆ ಸಂಚರಿಸಲು ಅನುವು ಮಾಡಿಕೊಟ್ಟಿರುವ ಸಂಚಾರಿ ಪೊಲೀಸ್ ಅಧಿಕಾರಿಗಳ ಕ್ರಮಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
—-
ದಲಿತ ನಾಯಕ ಮುಂಡ್ರಿಗಿ ನಾಗರಾಜ ಹುಟ್ಟು ಹಬ್ಬದಾಚರಣೆ


BP News  ಬಳ್ಳಾರಿ,ಆ.30-ದಲಿತ ನಾಯಕ, ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಶಿಕ್ಷಣ ಪ್ರೇಮಿ ಮುಂಡ್ರಿಗಿ ನಾಗರಾಜ ಅವರ ಹುಟ್ಟು ಹಬ್ಬಚಾರಣೆ ನಿಮಿತ್ತ ಇಂದು ಅವರ ಅಪಾರ ಅಭಿಮಾನಿಗಳು ಮುಂಡ್ರಿಗಿ ನಾಗರಾಜ ಅವರ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದರು.
ನಗರದ ಕೋಟೆ ಪ್ರದೇಶದಲ್ಲಿರುವ ಮುಂಡ್ರಿಗಿ ನಾಗರಾಜ ನಿವಾಸಕ್ಕೆ ತೆರಳಿದ ಹಲವಾರು ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ದಲಿತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮುಂಡ್ರಿಗಿ ನಾಗರಾಜ್ ಅವರ ನಿವಾಸಕ್ಕೆ ತೆರಳಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು.
——
ಶಂಕರಬಂಡೆಯಲ್ಲಿ ಅಸುನೀಗಿದ ಶಾಲೆ ವಿದ್ಯಾರ್ಥಿಗೆ ಪರಿಹಾರ ಕಲ್ಪಸಲು ಎಐಡಿಎಸ್‍ಓ ಆಗ್ರಹ


BP News  ಬಳ್ಳಾರಿ,ಆ.30-ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ದುರಸ್ತಿಗೊಳಿಸಲು ಆಗ್ರಹಿಸಿ ಮತ್ತು ಶಂಕರಬಂಡೆ ಗ್ರಾಮದಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು ಮೃತ ಪಟ್ಟ ವಿದ್ಯಾರ್ಥಿಯ ಕುಟುಂಬದವರಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಇಂದು ಎಐಡಿಎಸ್‍ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಐಡಿಎಸ್ಓ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ದುರಸ್ತಿಗೊಳಿಸಲು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಮತ್ತು ಭೋದಕೇತರ ಸಿಬ್ಬಂದಯನ್ನು ನೇಮಕ ಮಾಡಿಕೊಳ್ಳಬೇಕು. ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
——
ವೀರಶೈವ ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಡಿ-ಬೃಹತ್ ಪ್ರತಿಭಟನೆ


BP News  ಬಳ್ಳಾರಿ,ಆ.30-ವೀರಶೈವ ಲಿಂಗಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಈ ಬೃಹತ್ ಪ್ರತಿಭಟನೆಯಲ್ಲಿ ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು. ಒಂದುವೇಳೆ ನಕಲು ಜಾತಿ ಪ್ರಮಾಣ ಪತ್ರ ನೀಡಿದ್ದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳನ್ನು ಸೇವೆಯಿಂದ ವಜಾಮಾಡಬೇಕೆಂದೂ ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
——-
ಭಾದ್ರಪದ ಮಾಸಕ್ಕೆ ಅಡಿಯಿಟ್ಟ ಗೌರೀ ಗಣೇಶ-ಮೂರ್ತಿ ಖರೀದಿಯಲ್ಲಿ ತೊಡಗಿಸಿಕೊಂಡಿರುವ ಭಕ್ತರು


BP News ಬಳ್ಳಾರಿ,ಆ.30-ಶ್ರಾವಣ ಮಾಸ ಕಳೆದು ಭಾದ್ರಪದ ಮಾಸ ಅಡಿಯಿರಿಸುತ್ತಿದ್ದು ತನ್ನಿಮಿತ್ತ ಇದೀಗ ಹಬ್ಬಗಳ ಸಾಲು ಸಾಲು ಪರ್ವ ಆರಂಭವಾಗಿದೆ. ಹೀಗಾಗಿ ಗೌರಿ ಗಣೇಶ ಬುವಿಗೆ ಆಗಮಿಸಿದ್ದು ಭಕ್ತರು ಗೌರಿಯ ಜೊತೆ ಗಣಪತಿಯನ್ನೂ ಮತ್ತು ಪೂಜೋಪಚಾರಗಳಿಗಾಗಿ ಹಣ್ಣು-ಹಂಪಲು ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇದೀಗ ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆದಿದೆ. ರೈತರಿಗೆ ಕೊಂಚ ಬಿಡುವಿನ ಸಮಯವಾಗಿದ್ದರಿಂದ ಇದೀಗ ಎಲ್ಲ ಸಮುದಾಯದ ಜನರು ಗೌರೀ ಗಣೇಶನನ್ನು ಮನೆ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.
—–

 

LEAVE A REPLY

Please enter your comment!
Please enter your name here