ಬಳ್ಳಾರಿಯ ವಿಮ್ಸ್‍ನಲ್ಲಿ 14 ಹಾಸಿಗೆಗಳ ಮಕ್ಕಳ ಹೊಸ ತೀವ್ರ ನಿಗಾ ಘಟಕದ ಉದ್ಘಾಟನೆ

0
120

BP NEWS: ಬಳ್ಳಾರಿ: ಆಗಸ್ಟ್.30: ಬಳ್ಳಾರಿಯ ವಿಮ್ಸ್(ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ)ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ 14 ಹಾಸಿಗೆಗಳ ಹೊಸ ತೀವ್ರನಿಗಾ ಘಟಕವನ್ನು ವಿಮ್ಸ್‍ನ ನಿರ್ದೇಶಕರಾದ ಡಾ.ಗಂಗಾಧರಗೌಡ ಅವರು ಮಂಗಳವಾರ ಉದ್ಘಾಟಿಸಿದರು.
ಈ ಘಟಕದೊಂದಿಗೆ ಮಕ್ಕಳ ವಿಭಾಗದಲ್ಲಿ ಒಟ್ಟಾರೆ 54 ತೀವ್ರ ನಿಗಾ ಹಾಸಿಗೆಗಳು ಲಭ್ಯವಾದಂತಾಗವಲಿವೆ.
ಘಟಕವನ್ನು ಉಧ್ಘಾಟಿಸಿ ಮಾತನಾಡಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ವಿಮ್ಸ್‍ನ ಮಕ್ಕಳ ವಿಭಾಗಕ್ಕೆ ಬಳ್ಳಾರಿಯಲ್ಲದೆ ಸುತ್ತಮುತ್ತಲಿನ ನಾಲ್ಕು ಜಿಲ್ಲೆಗಳಿಂದ ಹಾಗೂ ಆಂಧ್ರಪ್ರದೇಶದ ಅನಂತಪುರ,ರಾಯದುರ್ಗದಿಂದಲೂ ಸಾವಿರಾರು ಮಕ್ಕಳು ತಪಾಸಣೆಗಾಗಿ ಬರುತ್ತಾರೆ.ಅದರಲ್ಲೂ ತೀವ್ರತರದ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳ ಹಾಗೂ ಡೇಂಘೀ ಜ್ವರದ ತೀವ್ರತೆ ಹೆಚ್ಚಾಗಿರುವುದರಿಂದ ತೀವ್ರ ನಿಗಾ ಹಾಸಿಗೆಗಳ ಕೊರತೆಯನ್ನು ನೀಗಿಸಲು ಈ ಘಟಕ ಆರಂಭಿಸಲಾಗಿದೆ ಎಂದರು.


ಈ ಸಂದರ್ಭದಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ದುರುಗಪ್ಪ,ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಗುರುಬಸವನಗೌಡ, ಕ್ಷಯ ಹಾಗೂ ಎದೆ ರೋಗಗಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸುರೇಶ್,ಮಕ್ಕಳ ವಿಭಾಗದ ಬೋಧಕ ಸಿಬ್ಬಂದಿಗಳಾದ ಡಾ.ಬಿ.ಕೆ.ಶ್ರೀಕಾಂತ್, ಡಾ.ವಿಶ್ವನಾಥ,ಡಾ.ರಾಜೇಶ,ಡಾ.ಸುವರ್ಣ,ಡಾ.ಮೋಹನಾ ಯಲವರ್ತಿ, ಡಾ.ರಿಯಾಜ್, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಶುಶ್ರೂಕರು ಉಪಸ್ಥಿತರಿದ್ದರು. ಮಕ್ಕಳ ವಿಭಾಗದಿಂದ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here