ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆ ನಿಷೇಧಿಸಿ ಡಿಸಿ ಪವನ್‍ಕುಮಾರ್ ಮಾಲಪಾಟಿ ಆದೇಶ
BP News ಬಳ್ಳಾರಿ,ಆ.29-ಬಳ್ಳಾರಿ ಜಿಲ್ಲೆಯಲ್ಲಿ ಶ್ರೀ ಗೌರಿ ಗಣೇಶ ಹಬ್ಬದ ಆಚರಣೆ ಪ್ರಯುಕ್ತ ಜಿಲ್ಲೆಯಾದ್ಯಂತ ವಿವಿಧ ದಿನಗಳಂದು ಮದ್ಯಮಾರಾಟ ಮತ್ತು ಸಾಗಾಣಿಕೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಾದ್ಯಂತ ಆ.31ರಂದು ಬೆಳಗ್ಗೆ 06ರಿಂದ ಸೆ.01ರಂದು ಬೆಳಗ್ಗೆ 06ರವರೆಗೆ, ಸೆ.02ರಂದು ಬೆಳಗ್ಗೆ 06ರಿಂದ ಸೆ.03ರ ಬೆಳಗ್ಗೆ 06ರವರೆಗೆ, ಸೆ.04ರಂದು ಬೆಳಗ್ಗೆ 06ರಿಂದ ಸೆ.05ರ ಬೆಳಗ್ಗೆ 06ರವರೆಗೆ ನಿಷೇಧಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
—–
ಬಳ್ಳಾರಿಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆ
BP News ಬಳ್ಳಾರಿ,ಆ.29-ನೆಹರು ಯುವಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಂಗನಕಲ್ಲು ವೀಣಾಶ್ರೀ ಮಹಿಳಾ ಕಲಾ ಸಂಘ ಸಂಯುಕ್ತಾಶ್ರಯದಲ್ಲ್ಲಿ ಭಾರತದ ಖ್ಯಾತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಸಭಾಂಗಣದಲ್ಲಿ ಆಚರಿಸಲಾಯಿತು.
ಜಿಲ್ಲಾ ಕ್ರೀಡಾಂಗಣದ ತರಬೇತಿದಾರರಾದ ಜಾಕೀರ್, ಎಸ್.ಶಾಂತಿ, ರವಿ ಜಿ.ವೀಣಾಶ್ರೀ, ಮಹಿಳಾ ಕಲಾ ಸಂಘದ ಅಧ್ಯಕ್ಷರಾದ ಉಷಾ, ನೆಹರು ಯುವ ಕೇಂದ್ರದ ಸಿಬ್ಬಂದಿ ಅಮರೇಶ, ಸ್ವಯಂ ಸೇವಕರಾದ ವೀರೇಶ ದಳವಾಯಿ ಹಾಗೂ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.
——
ಆಗಸ್ಟ್ 31 ರಂದು ಬಳ್ಳಾರಿಯಲ್ಲಿ ಶ್ರೀ ಗಣೇಶ ರಥೋತ್ಸವ
BP News ಬಳ್ಳಾರಿ,ಆ.29- ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯಿಂದ ನಗರದ ಗೌಳೇರಹಟ್ಟಿಯ ಶ್ರೀ ಕೊಟ್ಟೂರು ಸ್ವಾಮಿ ಮಠದ ರಸ್ತೆಯ ಶ್ರೀ ಗಣೇಶ ಶ್ರೀನಿವಾಸ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಶ್ರೀ ಗಣೇಶನ ರಥೋತ್ಸವವು ಆ.31ರಂದು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿಸಲಾಗುವುದು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರು ತಿಳಿಸಿದ್ದಾರೆ.
———-
ಅಕ್ಷರ ದಾಸೋಹ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಮನವಿ
BP News ಬಳ್ಳಾರಿ,ಆ.29-ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ ಸಂಯೋಜಿತ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಬಳ್ಳಾರಿ ತಾಲೂಕು ಸಮಿತಿಯು ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ನೌಕರರ ಸಂಘ ತಾಲೂಕು ಅಧ್ಯಕ್ಷೆ ಮಂಜುಳಾ ಶ್ರೀಧರಗಡ್ಡೆ ಮತ್ತು ಕಾರ್ಯದರ್ಶಿ ನಾಗರತ್ನ, ಸಂಘದ ತಾಲೂಕು ಉಪಾಧ್ಯಕ್ಷೆ ಲಕ್ಷ್ಮಿ, ಗೌರವ ಸಲಹೆಗಾರರಾದ ನಾಗರತ್ನ ಎಸ್ ಜಿ., ಜಿಲ್ಲಾಧ್ಯಕ್ಷ ಎ.ದೇವದಾಸ್, ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಇನ್ನಿತರರು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. .
——-
ಮೇಯರ್ ಇರೋ ಪ್ರದೇಶದಲ್ಲಿಯೇ ನಾಗರಿಕರ ಗೋಳು-ಸಮಸ್ಯೆ ಕೇಳುವವರಾರು?
BP News ಬಳ್ಳಾರಿ,ಆ.29-ಮಹಾನಗರ ಪಾಲಿಕೆ 30ನೇ ವಾರ್ಡಿನಲ್ಲಿರುವ ಹಲವಾರು ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಗೊಂಡು ದ್ವೀಪವಾಗಿ ಮಾರ್ಪಟ್ಟಿದ್ದು ಜನತೆ ತಲ್ಲಣಗೊಂಡಿದ್ದಾರೆ.
ತಿಲಕ್ ನಗರದ 5ನೇ ಅಡ್ಡ ರಸ್ತೆಯ 2ನೇ ಲಿಂಕ್‍ನಲ್ಲಿರುವ ಪ್ರದೇಶದÀಲ್ಲಿ ಸಾಕಷ್ಟು ಗಿಡಗಂಟಿಗಳು ಬೆಳೆದು ನಿಂತಿವೆ. ತ್ಯಾಜ್ಯ ಗಿಡಗಳ ಸಂಗ್ರಹಣೆಯಿಂದ ವಿಪರೀತ ಸೊಳ್ಳೆಗಳ ಹಾವಳಿ ಮಿತಿಮೀರಿದೆ. ಇದರಿಂದ ಜನರಿಗೆ ಅನಾರೋಗ್ಯ ಉಂಟಾಗಿದೆ. ಮಹಾನಗರ ಪಾಲಿಕೆ ಮೇಯರ್ ಅವರು ಇರುವ ಪ್ರದೇಶದಲ್ಲಿ ಈ ರೀತಿಯಾದರೆ ಇನ್ನು ಉಳಿದ ವಾರ್ಡುಗಳ ಪಾಡೇನು? ಎಂದು ನಾಗರಿಕರು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
——
ಗೋಪುರದ ರಾಜಕಾರಣ ಸಾಕು, ಜನರ ನೈಜ ಅಭಿವೃದ್ದಿಯತ್ತ ಗಮನ ಬೇಕು-ಸಿಪಿಐ(ಎಂ) ಆಗ್ರಹ
BP News ಬಳ್ಳಾರಿ,ಆ.29-ಗಡಿಗಿ ಚೆನ್ನಪ್ಪ ವೃತ ದಲ್ಲಿ ಭವ್ಯವಾದ ಹೊಸ ಗಡಿಯಾರ ಗೋಪುರವನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಸಚಿವ ಶ್ರೀರಾಮಲು ಅವರು ಬಳ್ಳಾರಿ ಜನತೆಗೆ ಮಂಕುಬೂದಿ ಹಚ್ಚುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ ವಾದಿ) ಬಳ್ಳಾರಿ ಜಿಲ್ಲಾ ಸಮಿತಿಯು ಟೀಕಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪಕ್ಷದ ವಿಎಸ್ ಶಿವಶಂಕರ್, ಜೆ.ಸತ್ಯಬಾಬು, ಜೆ.ಚಂದ್ರಕುಮಾರಿ ಇನ್ನಿತರರು, ಜನ ಸಾಮಾನ್ಯರ ತೆರಿಗೆಯ ಹಣವನ್ನು ಜನಸಾಮಾನ್ಯರ ಅಭಿವೃದ್ಧಿ ಗೆ ವೆಚ್ಚ ಮಾಡಲು ಕ್ರಮ ವಹಿಸಬೇಕು. ಇಂತಹ ಜನಪರ ಪರ ಹೋರಾಟಗಳಿಗೆ ಬೆಂಬಲ ನೀಡಬೇಕೆಂದು ಜನತೆಯಲ್ಲಿ ಸಿಪಿಎಂ ಪಕ್ಷವು ಮನವಿ ಮಾಡುತ್ತದೆ ಎಂದು ತಿಳಿಸಿದ್ದಾರೆ.
—–