BP News Karnataka Super Fast 26-08-2022

0
97

371(ಜೆ) ಜಾರಿಯಿಂದ 10 ವರ್ಷಗಳಲ್ಲಿ ಸಾಕಷ್ಟು ಸುಧಾರಣೆ:ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ


BP News  ಬಳ್ಳಾರಿ,ಆ.26-ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಪ್ರಾದೇಶಿಕ ಅಸಮಾನತೆ ಹೊಗಲಾಡಿಸುವ ಹಾಗೂ ರಾಜ್ಯದ ಉಳಿದ ಜಿಲ್ಲೆಗಳಂತೆ ಈ ಜಿಲ್ಲೆಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸುವ ಆಶಯದೊಂದಿಗೆ ಜಾರಿಗೆ ತರಲಾದ 371(ಜೆ) ಸಂವಿಧಾನಿಕ ನಿಬಂಧನೆಯಿಂದ ಕಳೆದ 10 ವರ್ಷಗಳಲ್ಲಿ ಈ ಭಾಗದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಹೇಳಿದರು.
ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಕಲ್ಯಾಣ ಕರ್ನಾಟಕ ದಿನಾಚರಣೆ ನಿಮಿತ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಬಸವರಾಜೇಶ್ವರಿ ಪಬ್ಲಿಕ್ ಪದವಿಪೂರ್ವ ಕಾಲೇಜಿಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಅಸಮಾನತೆಗೆ 371(ಜೆ) ಸಂವಿಧಾನಿಕ ನಿಬಂಧನೆ ಅನುಕೂಲಕರವಾಗಿದೆಯೇ..?ವಿಷಯದ ಕುರಿತ ಚರ್ಚಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
—–
ಮಕ್ಕಳು ಗುಣ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಲಹೆ


BP News ಬಳ್ಳಾರಿ,ಆ.26-ಎಲ್ಲಾ ಮಕ್ಕಳು ಉತ್ತಮ ಗುಣಗಳನ್ನು ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಕನಸು ಮತ್ತು ಗುರಿಯನ್ನು ಹೊಂದಿ ಇದರ ಸಹಕಾರಕ್ಕಾಗಿ ಸತತ ಪ್ರಯತ್ನ ಪಡಬೇಕು ಎಂದು ಚೈಲ್ಡ್‍ಲೈನ್ ಸಹಯೋಗ ಸಂಸ್ಥೆ-ಬಿಡಿಡಿಎಸ್‍ನ ನಿರ್ದೇಶಕರಾದ ಫಾದರ್ ಯಾಗಪ್ಪ ತಿಳಿಸಿದರು.
ಮಕ್ಕಳ ಸಹಾಯವಾಣಿ ಕೇಂದ್ರ-ಬಿಡಿಡಿಎಸ್ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಮಕ್ಕಳ ಸಮಸ್ಯೆಗಳನ್ನು ಚರ್ಚಿಸಲು ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದÀ ನಾಗೇಶ್ ಶಾಸ್ತ್ರೀ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ‘ತೆರೆದ ಮನೆ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
——
ಮಿನಿ ಉದ್ಯೋಗ ಮೇಳ:92 ಅಭ್ಯರ್ಥಿಗಳು ಆಯ್ಕೆ


BP News  ಬಳ್ಳಾರಿ,ಆ.26-ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಮಿನಿ ಉದ್ಯೋಗ ಮೇಳ ನಡೆಯಿತು.
ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳಾದ ಪಿ.ಎಸ್.ಹಟ್ಟಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಿನಿ ಉದ್ಯೋಗಮೇಳದಲ್ಲಿ 453 ಅಭ್ಯರ್ಥಿಗ¼ ಪೈಕಿ, 92 ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಂಡರು. 89 ಅಭ್ಯರ್ಥಿಗಳನ್ನು ದ್ವಿತೀಯ ಹಂತಕ್ಕೆ ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳಾದ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ.
—–
ಯಾರ ಮರ್ಜಿಗಾಗಿ ಟವರ್ ಕ್ಲಾಕ್ ಕೆಡವಿದ್ದಾರೆ? ;ವಿಎಸ್ ಉಗ್ರಪ್ಪ


BP News  ಬಳ್ಳಾರಿ,ಆ.26-ರಾಜ್ಯದಲ್ಲಿ ಪ್ರವಾಹದಿಂದ 74 ಜನರು ಸಾವಿಗೀಡಾಗಿದ್ದು, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು, ಕೃಷಿಕರು ಸಂಕಟದಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಮಾಸಾಶನ ಬರುತ್ತಿಲ್ಲ. ಯಾರಿಗೂ ಪರಿಹಾರ ನೀಡುತ್ತಿಲ್ಲ. ಇದರ ನಡುವೆ ಟವರ್ ಕ್ಲಾಕ್ ಕೆಡವಿಹಾಕಿ ಯಾರ ಮರ್ಜಿಗಾಗಿ 7 ಕೋಟಿ ರೂ.ವೆಚ್ಚದಲ್ಲಿ ಮತ್ತೊಂದು ಟವರ್ ಕ್ಲಾಕ್ ನಿರ್ಮಾಣ ಮಾಡುತ್ತಿದ್ದಾರೆ? ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಪಬ್ಲಿಕ್ ಆಫ್ ಬಳ್ಳಾರಿಯ ನಾಯಕರು 2008ರಲ್ಲಿ ಹಳೆಯ ಟವರ್ ಕ್ಲಾಕ್ ತೆರವುಗೊಳಿಸಿದ್ದರು. ರಾಜ್ಯದ ಜನತೆ ಸಂಕಟದಲ್ಲಿದ್ದಾರೆ. ಆರ್ಥಿಕ ಮುಗ್ಗಟ್ಟು ಇದೆ. ಇಂಥ ಸಂದರ್ಭದಲ್ಲಿ ಟವರ್ ಕ್ಲಾಕ್ ಕೆಡಹುವ ಅಗತ್ಯ ಇತ್ತಾ? ಎಂದು ಪ್ರಶ್ನಿಸಿದರು.
——-
ವಿಠ್ಠಲ ಗೋಂಧಳಿ ಭಕ್ತಿಪಂಥದಿಂದ ಕುಮಾರಿ ಅವನಿ ಗಂಗಾವತಿ ಅವರಿಗೆ ಸನ್ಮಾನ


BP News  ಬಳ್ಳಾರಿ,ಆ.26-ಇಲ್ಲಿನ ಎಂ.ರಾಜೇಶ್ವರಿ ನಗರದಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದ 5ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡ ಸಪ್ತಾಹ ಧಾರ್ಮಿಕ ಆಚರಣೆಯಲ್ಲಿ ಪ್ರತಿಭಾನ್ವಿತ ಕಲಾವಿದೆ ಕುಮಾರಿ ಅವನಿ ಗಂಗಾವತಿ ಅವರು ಹರಿದಾಸರ ಕೀರ್ತನೆಗಳಿಗೆ ಭಕ್ತಿಭಾವಪರವಶರಾಗಿ ಶಾಸ್ತ್ರೀಯ ನೃತ್ಯ ಪ್ರದರ್ಶನ ಮಾಡಿದ್ದರ ಹಿನ್ನೆಲೆಯಲ್ಲಿ ವಿಠ್ಠಲ ಗೋಂಧಳಿ ಭಕ್ತಿಪಂಥದಿಂದ ಸನ್ಮಾನಿಸಲಾಯಿತು.
ಮೂರು ದಿನಗಳ ಕಾಲ ಅಖಂಡವಾಗಿ ಜರುಗಲಿರುವ ವಾರ್ಷಿಕ ಸಪ್ತಾಹ ಕಾರ್ಯಕ್ರಮದಲ್ಲಿ ಅರ್ಚಕರಾದ ವಿಜಯರಾವ್ ಕರಣಂ ಅವರು ವಿಠ್ಠಲ ರುಕ್ಮಿಣಿ ಮೂರ್ತಿಗಳ ಅಲಂಕಾರ ಸೇವೆ, ಪೂಜೆ, ಧೂಪ, ದೀಪ, ಮಹಾಮಂಗಳಾರತಿ, ಕಾಕಡಾರತಿ, ಕ್ಷೀರಾಪತಿ, ಭಜನೆ, ಅರ್ಚನೆ, ಪ್ರವಚನ, ಕೀರ್ತನಗಳು ನಡೆದವು.
——-
ಆಗಸ್ಟ್ 27 ರಂದು ಕೆರೆಹಳ್ಳಿಯ ತಿರುಗಲ್ ತಿಮ್ಮಪ್ಪ ಜಾತ್ರೆ


BP News ಕೊಪ್ಪಳ,ಆ.26-ತಾಲೂಕಿನ ಕೆರೆಹಳ್ಳಿ ಗ್ರಾಮದ ಬೆಟ್ಟದಲ್ಲಿರುವ ತಿರುಗಲ್ ತಿಮ್ಮಪ್ಪ ಜಾತ್ರಾ ಮಹೋತ್ಸವ ಆಗಸ್ಟ್ 27 ರಂದು ಜರುಗಲಿದ್ದು ಸದ್ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಗವಂತನ ಕೃಪಗೆ ಪಾತ್ರರಾಗುವಂತೆ ಕೆರೆಹಳ್ಳಿ ದೈವಸ್ತರು, ತಿರುಗಲ್ ತಿಮ್ಮಪ್ಪ, ಲಕ್ಷ್ಮೀದೇವಿ ಮತ್ತು ತೇರಿನ ಹನುಮಪ್ಪ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಾತಃಕಾಲದಿಂದಲೇ ಗ್ರಾಮದ ಪುರದೇವತೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ದೈವಸ್ತರುಗಳ ನೇತೃತ್ವದಲ್ಲಿ ಶ್ರೀ ತೇರಿನ ಹನುಮಂತರಾಯನ ಪಲ್ಲಕ್ಕಿ ಉತ್ಸವದೊಂದಿಗೆ ತಿರುಗಲ್ ತಿಮ್ಮಪ್ಪ ಬೆಟ್ಟಕ್ಕೆ ತೆರಳಲಾಗುತ್ತದೆ. ಬೆಳಿಗ್ಗೆ 7 ಗಂಟೆಯಿಂದ ತೇರಿನ ಹನುಮಂತರಾಯ, ತಿರುಗಲ್ ತಿರುಮಲರಾಯ ಮತ್ತು ಲಕ್ಷ್ಮೀದೇವಿಗೆ ಅಭಿಷೇಕ, ಅಲಂಕಾರ ಸೇವೆ, ಎಲೆ ಚೆಟ್ಟಿ ಸೇವೆ, ಪೂಜೆ, ಅರ್ಚನೆ, ಮಹಾಮಂಗಳಾರತಿ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ.
——-

 

LEAVE A REPLY

Please enter your comment!
Please enter your name here