ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಬಳಸಿ: ಹರ್ಷಲ್ ಭೋಯರ್ ನಾರಾಯಣರಾವ್
BP News ಹೊಸಪೇಟೆ(ವಿಜಯನಗರ)ಆ.25-ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಗಣೇಶ ಹಬ್ಬವನ್ನು ಆಚರಿಸುತ್ತಿದ್ದು, ಪರಿಸರ ಸ್ನೇಹಿ ಗಣೇಶಮೂರ್ತಿ ಬಳಸಿ ಸಂಭ್ರಮದಿಂದ ಮತ್ತು ಶಾಂತಿ-ಸೌಹಾರ್ದತೆಯಿಂದ ಆಚರಿಸೋಣ ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಆಗಿರುವ ಜಿ.ಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಹೇಳಿದ್ದಾರೆ.
ಮನೆಗಳಲ್ಲಿ ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವವರು ಮುಂಚಿತವಾಗಿಯೇ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
—–
ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
BP News ಬಳ್ಳಾರಿ,ಆ.25-ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಎನ್‍ಪಿಸಿಐಎಲ್ ನ ಕೈಗಾ ಪರಮಾಣು ವಿದ್ಯುತ್ ಸ್ಥಾವರ ಕೇಂದ್ರದಿಂದ ಬಳ್ಳಾರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಗರ ವ್ಯಾಪ್ತಿಯ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಭಂದ ಮತ್ತು ರಸಪ್ರಶ್ನೆ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು. ಎನ್‍ಪಿಸಿಐಎಲ್ ನ ಅಧಿಕಾರಿಗಳಾದ ಶ್ರೀನಿವಾಸ ಎನ್ ಪಂಚಮುಖಿ, ರವೀಂದ್ರ ಪಿ ಬಿಳಗಿ, ಗುರುರಾಜ್ ಮುನ್ನಲ್ಲಿ, ವಿಜ್ಞಾನ ಕೇಂದ್ರದ ಕ್ಯುರೇಟರ್ ಜಿ.ವಿ. ಶಿವರಾಜ್ ರವರು ವಿಜ್ಞಾನ ಕೇಂದ್ರದಲ್ಲಿ ಗಿಡವನ್ನು ನೆಡುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
——
ಉಚಿತ ನೇತ್ರ ಹಾಗೂ ದಂತ ಚಿಕಿತ್ಸಾ ಶಿಬಿರ
BP News ಬಳ್ಳಾರಿ,ಆ.25-ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಳ್ಳಾರಿ ಮಹಿಳಾ ಜಿಲ್ಲಾ ಘಟಕ ಮತ್ತು ಗಡಿಗಿ ಅಕ್ಕ ನಾಗಮ್ಮ ಚಾರಿಟಬಲ್ ಟ್ರಸ್ಟ್ ಇವರು ಕೊಟ್ಟೂರು ಸ್ವಾಮಿ ಮಠದಲ್ಲಿ ನಾಗರಿಕರಿಗಾಗಿ ಉಚಿತ ನೇತ್ರ ಶಿಬಿರ ಮತ್ತು ದಂತ ಚಿಕಿತ್ಸೆ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾನಾಳ್ ಶೇಖರ ಮತ್ತು ಉದ್ಘಾಟನೆಯನ್ನು ಆರ್‍ವೈಎಂಸಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತ ಸೊನೊಳಿ ಚಿತ್ರಕಿ ನೆರವೇರಿಸಿದರು. ಸುಮಾರು 300ಕ್ಕೂ ದಂತ ಚಿಕಿತ್ಸೆ ಮತ್ತು 600ಕ್ಕೂ ಹೆಚ್ಚು ನೇತ್ರ ಪರೀಕ್ಷೆ ಪಡೆದುಕೊಂಡರು.
——
ಸೆ.7ರಂದು ಬಗರ್ ಹುಕುಂ ಸಾಗುವಳಿದಾರರ ಹಕ್ಕು ಪತ್ರಕ್ಕಾಗಿ ಬೃಹತ್ ಹೋರಾಟ
BP News ಬಳ್ಳಾರಿ,ಆ.25-ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಸೆಪ್ಟೆಂಬರ್ 7 ರಂದು ನಗರದಲ್ಲಿ ಬಗರ್ ಹುಕುಂ ಸಾಗುವಳಿದಾರರ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ತಿಳಿಸಿದೆ.
ಸಮಿತಿಯ ಸಂಚಾಲಕ ಗುರಳ್ಳಿ ರಾಜ ನೇತೃತ್ವದಲ್ಲಿ ಈಗಾಗಲೇ ಈ ಕುರಿತು ತಾಲೂಕಿನಾದ್ಯಂತ ಕರಪತ್ರಗಳನ್ನು ವಿತರಿಸಲಾಗುತ್ತಿದ್ದು, ತ್ವರಿತವಾಗಿ ಬಳ್ಳಾರಿ ತಾಲೂಕು ಭೂ ಮಂಜೂರಾತಿ ಸಮಿತಿ ರಚಿಸಬೇಕು ಮತ್ತು ಅದರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಆಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
——-
ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರಿಂದ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ
BP News ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಬಳಸಿ: ಹರ್ಷಲ್ ಭೋಯರ್ ನಾರಾಯಣರಾವ್
ಹೊಸಪೇಟೆ(ವಿಜಯನಗರ)ಆ.25-ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಗಣೇಶ ಹಬ್ಬವನ್ನು ಆಚರಿಸುತ್ತಿದ್ದು, ಪರಿಸರ ಸ್ನೇಹಿ ಗಣೇಶಮೂರ್ತಿ ಬಳಸಿ ಸಂಭ್ರಮದಿಂದ ಮತ್ತು ಶಾಂತಿ-ಸೌಹಾರ್ದತೆಯಿಂದ ಆಚರಿಸೋಣ ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಆಗಿರುವ ಜಿ.ಪಂ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಹೇಳಿದ್ದಾರೆ.
ಮನೆಗಳಲ್ಲಿ ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವವರು ಮುಂಚಿತವಾಗಿಯೇ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
—–
ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಪಕ್ಷ ಬಲವರ್ಧನೆಗೆ ಶ್ರೀಕಾರ
BP News ಬಳ್ಳಾರಿ,ಆ.25-ಸಾರಿಗೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ಶ್ರೀರಾಮುಲು ನೇತೃತ್ವದಲ್ಲಿ ನಿನ್ನೆ ಸಂಜೆ ಭಾರತೀಯ ಜನತಾ ಪಾರ್ಟಿಯ ಬಲವರ್ಧನೆಗಾಗಿ ಶ್ರೀಕಾರ ಹಾಕಲಾಯಿತು.
ಭಾರತೀಯ ಜನರಾ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಮುರಹರಿ ಗೌಡ, ವಿಭಾಗ ಪ್ರಭಾರಿಗಳಾದ ಅನಿಲ್ ನಾಯ್ಡು, ಜಿಲ್ಲಾ ಪ್ರಭಾರಿ, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಇನ್ನಿತರರು ಇದ್ದರು.
——