ಬಿಸಿಯೂಟ ನಿರ್ವಹಣೆಯ ಹಣಕಾಸಿನ ದುರುಪಯೋಗ ಮತ್ತು ಕರ್ತವ್ಯಲೋಪ ಎಸಗಿರುವ ಶಿಕ್ಷಕ ಅಮಾನತ್ತು

0
118

BP NEWS: ಬಳ್ಳಾರಿ: ಆಗಸ್ಟ್.25: ಬಳ್ಳಾರಿ ಜಿಲ್ಲೆಯ ಕುರುಗೋಡು ಪಶ್ಚಿಮ ವಲಯ ಕ್ಲಸ್ಟರ್ ಎಮ್ಮಿಗನೂರಿನ ರಾಜುಕ್ಯಾಂಪ್‍ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಈ.ತಿಮ್ಮಣ್ಣ ಎನ್ನುವವರು ಶಾಲಾ ಬಿಸಿಯೂಟ ಖಾತೆಯಲ್ಲಿ ರೂ.15ಸಾವಿರ ಡ್ರಾ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿರುವುದು ಮತ್ತು ರೂ.12,300 ಗಳನ್ನು ಸೆಲ್ಫ್ ಡ್ರಾ ಮಾಡಿಕೊಂಡು ಓಚರ್‍ಗಳನ್ನು ಹಾಗೂ ಖರ್ಚು ವೆಚ್ಚದ ರಸೀದಿಗಳನ್ನು ನಿರ್ವಹಿಸದೇ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಆ.23ರಂದು ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಸ್ತು ಪ್ರಾಧಿಕಾರಿ ಹಾಗೂ ಉಪನಿರ್ದೇಶಕ(ಆಡಳಿತ)ರಾದ ಅಂದಾನಪ್ಪ ಎಂ.ವಡಗೇರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.


ಅಮಾನಿತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ನಿಯಮ 98ರಂತೆ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಅಮಾನತ್ತಿನ ಅವಧಿಯಲ್ಲಿ ಇವರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here