BP News Karnataka Super Fast 24-08-2022

0
151

ನೀರು ಸರಬರಾಜು,ಒಳಚರಂಡಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಚಾಲನೆ


BP News  ಬಳ್ಳಾರಿ,ಆ.24-ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಮುಂಡರಗಿ ಆಶ್ರಯ ಬಡಾವಣೆ(ದಕ್ಷಿಣ ವಲಯ)ಯಲ್ಲಿ 33 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಗೊಳ್ಳಲಾದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಒದಗಿಸುವ ಕಾಮಗಾರಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಭೂಮಿಪೂಜೆ ನೆರವೇರಿಸಿದರು.
ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಪಾಲನ್ನ,ಮಾಜಿ ಸಂಸದರಾದ ಜೆ.ಶಾಂತಾ,ಎಪಿಎಂಸಿ ಅಧ್ಯಕ್ಷ ಉಮೇಶ, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ,ಇಬ್ರಾಹಿಂ, ಮೋತ್ಕರ್ ಶ್ರೀನಿವಾಸ್, ರಾಬಕೋವಿ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ ಇದ್ದರು.
——-
ಕ್ಲಾಕ್ ಟವರ್ ಬಳ್ಳಾರಿಗೆ ಮೆರುಗು ನೀಡಲಿದೆ:ಶಾಸಕ ಜಿ.ಸೋಮಶೇಖರರೆಡ್ಡಿ


BP News  ಬಳ್ಳಾರಿ,ಆ.24-ನಗರದ ಮಧ್ಯಭಾಗವಾದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ 140ಅಡಿ ಎತ್ತರದ ನೂತನ ಗಡಿಯಾರ ಸ್ಥಂಭ(ಕ್ಲಾಕ್ ಟವರ್) ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದು ಬಳ್ಳಾರಿ ನಗರಕ್ಕೆ ಇನ್ನಷ್ಟು ಬೆಳವಣಿಗೆ ಮತ್ತು ಸುಂದರೀಕರಣಕ್ಕೆ ಸಾಕ್ಷಿಯಾಗಲಿದೆ ಎಂದು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಕಡೆಯಿಂದಲೂ ನಿರಾಪೇಕ್ಷಣಾ ಪತ್ರಗಳನ್ನು ಪಡೆಯಲಾಗಿದೆ; ಆದರೂ ಕೆಲವರು ರಾಜಕೀಯ ಉದ್ದೇಶದಿಂದ ವಿರೋಧಿಸುತ್ತಿದ್ದಾರೆ ಎಂದು ತಿಳಿಸಿದರು.
—–
ಗಡಿಯಾರ ಸ್ತಂಭ ತೆರವು-ಕಾಂಗ್ರೆಸ್ ನಿಂದ ಪ್ರತಿಭಟನೆ


BP News  ಬಳ್ಳಾರಿ,ಆ.24-ಬಳ್ಳಾರಿಯಲ್ಲಿ ಮತ್ತೊಮ್ಮೆ ರಾತ್ರೋರಾತ್ರಿ ಕ್ಲಾಕ್ ಟವರ್ ಅನ್ನು ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ಸಿಗರು ರಾತ್ರಿಯ ಹೊತ್ತು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ, ಬಳ್ಳಾರಿ ಮಹಾಪೌರರಾದ ಎಂ.ರಾಜೇಶ್ವರಿ ಹಾಗೂ ಬಳ್ಳಾರಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ರಫಿಕ್, ಕಾಂಗ್ರೆಸ್ ಮುಖಂಡರಾದ ಪಿ.ಜಗನ್ನಾಥ್, ಸುಬ್ಬಾರಾಯುಡು, ಹೊನ್ನಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
——-
ಆಗಸ್ಟ್ 28ರಂದು ಬಳ್ಳಾರಿಯಲ್ಲಿ ಕುರುಬರ ಸಾಂಸ್ಕøತಿಕ ದರ್ಶನ ಮಾಲಿಕೆ ಗ್ರಂಥಗಳ ಅನಾವರಣ


BP News  ಬಳ್ಳಾರಿ,ಆ.24- ಹಾಲು ಮತ ಸಮುದಾಯದ ಘನತೆ ಮತ್ತು ಗೌರವಗಳನ್ನು ಸಕಾರಾತ್ಮಕವಾಗಿ ದಾಖಲಿಸಿರುವ ಅಪರೂಪದ 13 ಗ್ರಂಥಗಳ ಅನಾವರಣ ಇದೇ 28 ರಂದು ಬಳ್ಳಾರಿಯಲ್ಲಿ ಜರುಗಲಿದೆ.
ಈ ಕುರಿತು ಬೆಂಗಳೂರಿನ ಕುರುಬರ ಸಾಂಸ್ಕøತಿಕ ಪರಿಷತ್ತು, ಬಳ್ಳಾರಿಯ ಜಿಲ್ಲಾ ಕುರುಬರ ಸಂಘ, ಜಿಲ್ಲಾ ಕನಕ ನೌಕರರ ಸಂಘ, ಕನಕ ಯುವ ಸೇನೆ, ಯುವ ಕುರುಬರ ಸಂಘ ಮತ್ತು ಬೆಂಗಳೂರಿನ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
—–
ಬೈಕ್ ಮೇಲೆ ನುಗ್ಗಿದ ಲಾರಿ-ಒಂದು ಮಗು ಸೇರಿ ಮೂವರ ದುರ್ಮರಣ


BP News  ಬಳ್ಳಾರಿ,ಆ.24-ಇಲ್ಲಿನ ಕೌಲ್ ಬಜಾರ್ ರೇಲ್ವೆ ಮೇಲ್ಸೇತುವೆ ಮೇಲೆ ಬೈಕ್ ನಲ್ಲಿ ತೆರಳುತ್ತಿದ್ದ ದಂಪತಿಯ ಮೇಲೆ ಟಿಪ್ಪರ್ ಲಾರಿಯೊಂದು ಹಿಂಬದಿಯಿಂದ ನುಗ್ಗಿ ಒಂದು ಮಗು ಸೇರಿದಂತೆ ಮೂವರನ್ನು ಬಲಿ ತೆಗೆದುಕೊಂಡ ದಾರುಣ ಘಟನೆ ನಡೆದಿದೆ.
ಇಂದು ಮುಂಜಾನೆ 9 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಮೃತರು ವೀರೇಶ್(35), ಅಂಜಲಿ(30) ಮತ್ತು ಮಗು ದಿನೇಶ್(5) ಎಂದು ಗುರುತಿಸಲಾಗಿದೆ. ಆದ್ಯ ಎನ್ನುವ 3 ವರ್ಷದ ಬಾಲಕಿಗೂ ತೀವ್ರ ಹಾಗೂ ಗಂಭೀರ ಸ್ಥಿತಿ ಇದ್ದು ಕೂಡಲೇ 108 ಅಂಬ್ಯುಲನ್ಸ್ ವಾಹನದಲ್ಲಿ ವಿಮ್ಸ್ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದೆ.
—-
ಕುಮಾರಸ್ವಾಮಿ ಗುಡಿ ಬಳಿ ರಸ್ತೆ ಅಪಘಾತ-ಮಹಿಳೆಗೆ ಗಾಯ


BP News ಬಳ್ಳಾರಿ,ಆ.24-ಕುಮಾರಸ್ವಾಮಿ ದೇವಸ್ಥಾನದ ಬಳಿ ಬೈಕ್ ವೊಂದು ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮಹಿಳೆ ಮತ್ತು ಬೈಕ್ ಸವಾರನಿಗೆ ಗಾಯವಾದ ಘಟನೆ ನಡೆದಿದೆ.
ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು ಕೆಲ ಸಮಯದವರೆಗೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಒಂದು ಗಂಟೆಯಲ್ಲಿ ನಗರದ ಎರಡು ಭಾಗದಲ್ಲಿ ಅಪಘಾತ ಉಂಟಾಗಿದ್ದು ಸಾರ್ವಜನಿಕರು ಸಹ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದಲೇ ವಾಹನ ಚಲಾಯಿಸುವಂತೆ ಪೊಲೀಸರು ಕೂಡ ಮನವಿ ಮಾಡಿದ್ದಾರೆ.
—–

 

LEAVE A REPLY

Please enter your comment!
Please enter your name here