ಬಳ್ಳಾರಿ ಜಿಲ್ಲಾ ನ್ಯಾಯಾಲಯದ ವಕೀಲರಿಗೆ ಕೋವಿಡ್ ಬೂಸ್ಟರ್ ಲಸಿಕೆ ನೀಡಿಕೆ

0
131

BP NEWS: ಬಳ್ಳಾರಿ: ಆಗಸ್ಟ್.20: ಬಳ್ಳಾರಿ ವಿಮ್ಸ್‍ನ ಲಸಿಕಾ ಕೇಂದ್ರದ ನೋಡಲ್ ಅಧಿಕಾರಿಗಳಾದ ಡಾ.ಬಿ.ರಾಘವೇಂದ್ರ, ಅನೀಶ್ ಉರ್ ರೆಹಮಾನ್ ಹಾಗೂ ತಂಡದಿಂದ ಬಳ್ಳಾರಿ ಜಿಲ್ಲಾ ನ್ಯಾಯಾಲಯದ ವಕೀಲರುಗಳಿಗೆ ವಕೀಲರ ನ್ಯಾಯಾಲಯದ ಆವರಣದಲ್ಲಿರುವ ಸಂಘದ ಸಭಾಂಗಣದಲ್ಲಿ ಕೋವಿ-ಶೀಲ್ಡ್ ಸೆಕೆಂಡ್ ಡೋಸ್ ಹಾಗೂ ಬೂಸ್ಟರ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಲಯದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಡಿ.ವಿನಯ್ ಅವರು ಶನಿವಾರದಂದು ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಲಯದ ಎಲ್ಲಾ ವಕೀಲರುಗಳಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ಈ ಲಸಿಕೆ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದರ ಸದುಪಯೋಗವನ್ನು ಎಲ್ಲಾ ವಕೀಲರು ಹಾಗೂ ಅವರ ಕುಟುಂಬ ವರ್ಗದವರು ಪಡೆದು ಸರ್ವರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಶಿಬಿರದಲ್ಲಿ ಭಾಗಿಯಾದ ವೈದ್ಯರುಗಳಿಗೆ ಸಂಘದಿಂದ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ವಕೀಲರುಗಳು ಹಾಗೂ ಅವರ ಕುಟುಂಬ ವರ್ಗದವರು ಲಸಿಕೆಯನ್ನು ಪಡೆದರು.
ಈ ಶಿಬಿರದಲ್ಲಿ ಬಳ್ಳಾರಿ ವಕೀಲ ಸಂಘದ ಅಧ್ಯಕ್ಷರಾದ ಎರ್ರಿಗೌಡ, ಉಪಾಧ್ಯಕ್ಷರಾದ ಎಂ.ನಾಗರಾಜ್ ನಾಯಕ, ಕಾರ್ಯದರ್ಶಿ ರವೀಂದ್ರ ನಾಥ, ಸಹ ಕಾರ್ಯದರ್ಶಿ ತ್ರಿವೇಣಿ ಪತ್ತಾರ್, ಖಜಾಂಚಿ ಕೆ.ಎನ್.ಈರೇಶ ಹಾಗೂ ಸಂಘದ ಕಾರ್ಯಕಾರಿ ಸಮಿತಿ ಎಲ್ಲಾ ಸದಸ್ಯರುಗಳು, ವಕೀಲರ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here