BP News Karnatka Super Fast 17-08-2022

0
256

ಕಾಂಗ್ರೆಸ್ ಮುಖಂಡ ಹೆಗಡೆ ಹುಟ್ಟು ಹಬ್ಬ ನಿಮಿತ್ತ ವೃದ್ಧಾಶ್ರಮವಾಸಿಗಳಿಗೆ ಅನ್ನದಾನ


BP News ಬಳ್ಳಾರಿ,ಆ.17-ಕಾಂಗ್ರೆಸ್ ಮುಖಂಡ ಅರ್ಜುನ್ ಹೆಗಡೆ ಇಹಲೋಕ ತ್ಯಜಿಸಿ 2 ವರ್ಷ ಗತಿಸಿದೆ. ಅವರಿಗೀಗ 52 ವಸಂತಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂಗನಕಲ್ಲು ಗ್ರಾಮದ ಆದರ್ಶ ವೃದ್ಧಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಅರ್ಜುನ ಹೆಗಡೆ ಅವರ ಅಭಿಮಾನಿಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದು ಕುಟುಂಬದ ಸದಸ್ಯರೊಂದಿಗೆ ಇಂದು ಅರ್ಜುನ್ ಹೆಗಡೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ವ್ಯಕ್ತಿತ್ವ ಸ್ಮರಣೆ ಮಾಡಿದರು. ಬಳಿಕ ವೃದ್ಧಾಶ್ರಮವಾಸಿಗಳಿಂದ ಆಶೀರ್ವಾದ ಪಡೆದು ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
—–
ಲೋಕಾರ್ಪಣೆಗೊಂಡ ಜಿಲ್ಲಾ ಕ್ರೀಡಾಂಗಣ ಕೆರೆ-ಪ್ರವಾಸಿ ತಾಣವಾಗಿ ರೂಪುಗೊಂಡ ಹೊಸಕೆರೆ


BP News ಬಳ್ಳಾರಿ,ಆ.17-ಜಿಲ್ಲಾ ಕ್ರೀಡಾಂಗಣ ಪ್ರದೇಶದಲ್ಲಿರುವ ಹೊಸ ಕೆರೆಗೆ ಕೋಟ್ಯಾಂತರ ರೂ.ವೆಚ್ಚ ಮಾಡಿ ಸುಂದರವಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದೀಗ ಪ್ರವಾಸಿ ತಾಣವಾಗಿ ರೂಪುಗೊಂಡಿದ್ದು ನಗರದ ಜನತೆ ಕೆರೆಯತ್ತ ದಾಪುಗಾಲು ಇಡುತ್ತಿದ್ದಾರೆ.
ಸಚಿವ ಬಿ.ಶ್ರೀರಾಮುಲು ಮತ್ತು ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರ ಇಚ್ಛಾಶಕ್ತಿ ಮೇರೆಗೆ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಕೆರೆ ನಿರ್ಮಾಣ ಮಾಡಿದ್ದು, ಈ ಕೆರೆಗೆ ಹೊಸ ಹೆಸರು ನಾಮಕರಣ ಮಾಡಲು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
—–
ಹನುಮಸಾಗರದಲ್ಲಿ ಸಂಪನ್ನಗೊಂಡ ರಾಘವೇಂದ್ರ ಸ್ವಾಮಿಗಳ ಆರಾಧನೆ


BP News ಕೊಪ್ಪಳ,ಆ.17-ರಾಘವೇಂದ್ರ ಸ್ವಾಮಿಗಳವರ 351ನೇ ಆರಾಧನಾ ಮಹೋತ್ಸವದ ನಿಮಿತ್ತ ಕುಷ್ಟಗಿ ತಾಲೂಕಿನ ಹನುಮಸಾಗರದ ರಾಯರ ಮಠದಲ್ಲಿ ಪೂರ್ವಾರಾಧನೆ ಮದ್ಯಾರಾಧನೆ ಮತ್ತು ಉತ್ತರ ಆರಾಧನೆಯ ಮೂರು ದಿನದ ಕಾರ್ಯಕ್ರಮಗಳು ಬಹಳ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿ ಸಂಪನ್ನಗೊಂಡವು.
ರಥೋತ್ಸವಕ್ಕೆ ಸುತ್ತಮುತ್ತಲಿನ ಹಳ್ಳಿಯ ಜನರು ಕೂಡ ಮೂರು ದಿನದ ಈ ಆರಾಧನೆಗೆ ಸಾಕ್ಷಿಯಾದರು.
ರಾಯರ ಆರಾಧನೆಯ ಮೂರು ದಿನಗಳ ಶ್ರೀಮಠದಲ್ಲಿ ಬೆಳಗ್ಗೆ ಸುಪ್ರಭಾತ, ಅμÉ್ಟೂೀತ್ತg,À ಪಂಚಾಮೃತ ಅಭಿμÉೀಕ, ಅಲಂಕಾರ ಸೇವೆ, ಅμÉ್ಟೂೀತಕ ಕುಂಕುಮ ಅರ್ಚನೆ, ಮತ್ತು ಮಹಾ ಮಂಗಳಾರತಿ ಜರುಗಿದವು.
——
ಪಿ.ಡಿ.ಹಳ್ಳಿ ಗ್ರಾಮದಲ್ಲಿ ಆದಾಯ ಕ್ರೋಢೀಕರಣ ಚಟುವಟಿಕೆ ತರಬೇತಿ


BP Newsಬಳ್ಳಾರಿ,ಆ.167-ನಗರದ ಆಶಾಕಿರಣ ಸ್ತ್ರೀಶಕ್ತಿ ಎನ್‍ಜಿಓ ಮತ್ತು ನಬಾರ್ಡ್ ಸಹಯೋಗದಲ್ಲಿ ಮಹಿಳೆಯರ ಸಬಲೀಕರಣಗೊಳಿಸಲು ಪರಮದೇವನಹಳ್ಳಿಯಲ್ಲಿ ಆದಾಯ ಕ್ರೋಢೀಕರಣ ಚಟುವಟಿಕೆ ತರಬೇತಿ ನಡೆಯಿತು.
ನಿನ್ನೆ ಸಂಜೆಯ ಹೊತ್ತು ಪರಮದೇವನಹಳ್ಳಿಯಲ್ಲಿ ಆಯೋಜಿಸಿದ್ದ ಆದಾಯ ಕ್ರೋಢೀಕರಣಕ್ಕೆ ಪೂರಕವಾದ ಚಟುವಟಿಕೆಗಳಿಗಾಗಿ ತರಬೇತಿಯನ್ನು ನಡೆಸಿದ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಭಾರತಿ ಮತ್ತಿತರರು ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳನ್ನು ವೃದ್ಧಿಸಿಕೊಳ್ಳುವುದು ಹೇಗೆ? ಇದರಿಂದ ಹಣ ಕ್ರೋಢೀಕರಣಗೊಳಿಸಿಕೊಂಡು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸಬಲರಾಗುವುದು ಹೇಗೆ? ಎನ್ನುವುದರ ಕುರಿತು ತರಬೇತಿ ನೀಡಿದರು.
——
ಲಕ್ಷಾಂತರ ಜನರ ತ್ಯಾಗ ಬಲಿದಾನವೇ ಸ್ವಾತಂತ್ರ್ಯ ಲಭಿಸಲು ಕಾರಣವಾಗಿದೆ-ಸಿದ್ಧರಾಮ ಕಲ್ಮಠ


BP News ಕೊಟ್ಟೂರು,ದಿ.17-ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ದೇಶಪ್ರೇಮಿ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿಕೊಂಡು ದೇಶ ಕಟ್ಟಬೇಕಾದ ಹೊಣೆಗಾರಿಕೆ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಎಂದು ಕೊಟ್ಟೂರಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.
ಕಾಲೇಜಿನಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯವು ಲಕ್ಷ ಲಕ್ಷ ಜನರ ಹೋರಾಟದ ಫಲವಾಗಿದೆ. ಮಹಾತ್ಮ ಗಾಂಧೀಜಿ, ವೀರ ಸಾವರ್ಕರ್, ನೇತಾಜಿ, ಚಂದ್ರಶೇಖರ ಅಜಾದ್, ಭಗತ್ ಸಿಂಗ್, ವಲ್ಲಭ ಭಾಯಿ ಪಟೇಲ್ ಹೀಗೆ ಅನೇಕರ ಅವಿರತ ಹೋರಾಟದಿಂದ ಬ್ರಿಟಿಷರು ಭಾರತದ ನೆಲದಿಂದ ಕಾಲ್ಕಿತ್ತಿಲು ಕಾರಣವಾಯಿತು ಎಂದರು.
———-
ಹೊಸಪೇಟೆಯ ಇಪ್ಪಿತ್ತೇರಿ ಮಾಗಾಣಿಯಲ್ಲಿ ಕರಿಬಸವೇಶ್ವರ ಸ್ವಾಮಿಗಳ ವಾರ್ಷಿಕ ಜಾತ್ರೆ


BP News ಹೊಸಪೇಟೆ,ಆ.17-ಇಲ್ಲಿನ ಇಪ್ಪಿತ್ತೇರಿ ಮಾಗಾಣಿಯಲ್ಲಿರುವ ಕರಿಬಸವೇಶ್ವರ ಸ್ವಾಮಿಗಳ 15ನೇ ವರ್ಷದ ಶ್ರಾವಣ ಮಾಸದ ಪ್ರಯುಕ್ತ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಿತು.
ಅನುರಾಧೇಶ್ವರಿ ಮಾತೆಯವರ ದಿವ್ಯ ಸಾನಿಧ್ಯದಲ್ಲಿ ಗುರು ಕರಿಬಸವೇಶ್ವರಸ್ವಾಮಿಗಳವರಿಗೆ ಕುಂಭಾಭಿμÉೀಕ, ರುದ್ರಾಭಿμÉೀಕ, ಬಿಲ್ವಾರ್ಚನೆ, ಮಹಾಮಂಗಲ ಕಾರ್ಯಕ್ರಮ, ಗಂಗ ಸ್ಥಳಕ್ಕೆ ತೆರಳಿ ವೀರಗಾಸೆ ಪುರವಂತರಿಂದ ಮಂಡಾಳು ರಾಶಿ ತಂದು ನಂದಿಕೋಲು, ಸಮಾಳ ಮೇಳ, ಕುಂಭ-ಕಳಸ ಭಜನೆ, ಕುಂಭಾಭಿμÉೀಕ, ರುದ್ರಾಭಿμÉೀಕ, ಬಿಲ್ವಾರ್ಚನೆ ಹಾಗೂ ಸಕಲ ಸದ್ಭಕ್ತರಿಂದ ಅಗ್ನಿಪ್ರವೇಶ, ಧ್ವಜದ ಸವಾಲು, ಮಹಾಮಂಗಳಾರತಿ, ಮಹಾಪ್ರಸಾದ ಜರುಗಿದವು.
——–

LEAVE A REPLY

Please enter your comment!
Please enter your name here