ರಾಜಾಪುರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಈಶ್ವರ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಪುರಾಣ ಪ್ರವಚನ.

0
334

BP NEWS: ಬಳ್ಳಾರಿ: ಆಗಸ್ಟ್.16: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯು.ರಾಜಾಪುರ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶ್ರೀ ಈಶ್ವರ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಪುರಾಣ ಪ್ರವಚನ ಕಾರ್ಯಕ್ರಮವು ಸುಮಾರು 20 ದಿನಗಳ ಕಾಲ ನಡೆಯಲಿದ್ದು 15 /8/ 2022 ರಿಂದ ಪುರಾಣ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರಾವಣ ಮಾಸದಲ್ಲಿ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರಾವಣದಲ್ಲಿ ಪುರಾಣವನ್ನು ಹಮ್ಮಿಕೊಳ್ಳುವ ಕಾರಣವೇನೆಂದರೆ ಈ ಸಮಯದಲ್ಲಿ ರೈತರು ಮಳೆಗಾಲವಾದ್ದರಿಂದ ಹೊಲದ ಕೆಲಸಗಳು ಕಡಿಮೆ ಇರುತ್ತವೆ ಆದಕಾರಣ ಶರಣರ ಲೀಲಾಮೃತ ಸದ್ಭಕ್ತಿಯ ಕಾರ್ಯಕ್ರಮವನ್ನು ಈ ಪುರಾಣದ ಮೂಲಕ ಸದ್ವಿಚಾರಗಳನ್ನು ತಿಳಿದುಕೊಳ್ಳುವ ಕಾರಣ ಭಗವಂತನ ನಾಮಸ್ಮರಣೆ ಮಾಡುವಂತಾಗುತ್ತದೆ.

ಪುರಾಣ, ಬೈಲಾಟ, ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಗಾಯನ ಕ್ಷೇತ್ರದಲ್ಲಿ , ಚಿತ್ರಕಲೆ ಸ್ಪರ್ಧೆಯಲ್ಲಿ ಪರಿಣತಿಯನ್ನು ಹೊಂದಿದವರು ಇಲ್ಲಿ ಅನೇಕ ಯುವಕರಿದ್ದಾರೆ. ರಾಜ್ಯ ಪ್ರಶಸ್ತಿ ಪಡೆದವರು ಹಾಗೂ ಹರಿಜ್ಞಾನ ಸಂಸ್ಥೆಯ ಡಿ ಜಿ ತಿರುಮಲ ಯಾದವ್ ರವರು ಉದಾಹರಣೆಯಾಗಿ ನಿಂತಿದ್ದಾರೆ. ಇವರು ಚಿತ್ರಕಲಾ ಶಿಕ್ಷಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಇವರು ಕೂಡ ಎಲ್ಲ ಚಿತ್ರಕಲೆಗಳನ್ನು ಕರಗತಮಾಡಿಕೊಂಡಿದ್ದಾರೆ.ಇವರು ನಮ್ಮ ಗ್ರಾಮ ಗ್ರಾಮದಲ್ಲಿ ಇರುವುದು  ನಮಗೊಂದು ಹೆಮ್ಮೆಯ ವಿಷಯ ಎಂದು ಗ್ರಮದ ಹಿರಿಯರು ಬಿ ಪಿ ನ್ಯೂಸ್ಗೆ ತಿಳಿಸಿದರು.

ಇಟ್ಟಿಗಿ ವಿರೂಪಣ್ಣ ಸೇರಿದಂತೆ  ಇನ್ನೂ ಅನೇಕ ಗುರು ಹಿರಿಯರ ಮಾರ್ಗದರ್ಶನದಂತೆ ಈ ಗ್ರಾಮದ ಯುವಕರು ಕಲಾಕ್ಷೇತ್ರದಲ್ಲಿ ತಮ್ಮ ಪ್ರೌಢಮೆ ಮೆರೆದಿದ್ದಾರೆ.

ಇಲ್ಲಿ ನಾವು ಸಂತೋಷಪಡುವಂತ ಇನ್ನೊಂದು ವಿಷಯ ಏನೆಂದರೆ ಈ ಗ್ರಾಮದಲ್ಲಿ ಪುರಾಣ ಪಠಣ ಮಾಡುವರು ಮತ್ತು ಕಲೆಗಾರರು ಪುರಾಣಪ್ರವಚನ ಮಾಡತಕ್ಕಂಥವರು ಎಲ್ಲಾ ಕಲೆಗಳನ್ನು ಮೈಗೂಡಿಸಿಕೊಂಡಂತಹ ಕಲೆಗಾರರು ಈ ನಮ್ಮ ರಾಜಾಪುರದಲ್ಲಿದ್ದಾರೆ ಗ್ರಾಮದ(ದಿ)ಅಣ್ಣೆ ದೊಡ್ಡಬಸಪ್ಪ ಜಾನೆ ಕುಂಟೆ ವಿರುಪಾಕ್ಷಪ್ಪನವರು.

ಸದರಿ ಕಾರ್ಯಕ್ರಮದಲ್ಲಿ  ಪುರಾಣ ಪ್ರವಚನಕಾರರು ತಾಳೂರಿನ ಚನ್ನವೀರಪ್ಪ ಶಾಸ್ತ್ರಿಗಳು, ಪುರಾಣ ಪಠಣ ಕಾರರು ಐ. ಜೆ.ವೀರೇಶಪ್ಪ, ಅಣ್ಣೇ ಎರಿಸ್ವಾಮಿ, ಎಚ್. ಬಿ.ಲೋಕೇಶ ಸ್ವಾಮಿ  ಅವರು.

ಈ ಭಕ್ತಿಯ ಕಾರ್ಯಕ್ರಮಕ್ಕೆ ಸರ್ವ ಸದ್ಭಕ್ತರಿಗೂ ಆದರದ ಸ್ವಾಗತ ಸುಸ್ವಾಗತವನ್ನು ನಮ್ಮ ಬಿ ಪಿ ನ್ಯೂಸ್ ಮೂಲಕ ಕೋರಿದ್ದಾರೆ.

LEAVE A REPLY

Please enter your comment!
Please enter your name here