ಹೊಸಪೇಟೆಯ ಉಪ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು

0
112

BP NEWS: ಹೊಸಪೇಟೆ(ವಿಜಯನಗರ): ಆಗಸ್ಟ್.16: ವಿಜಯನಗರ ಜಿಲ್ಲೆಯ ಹೊಸಪೇಟೆಯ ಉಪ ಕಾರಾಗೃಹದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಬಂಧಿಗಳಿಗೆ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದಿಂದ ಮಾನಸಿಕ ಆರೊಗ್ಯ ತಪಾಸಣೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಉಪ ಕಾರಾಗೃಹದ ಅಧೀಕ್ಷಕರಾದ ಎಂ.ಹೆಚ್.ಕಲಾದಗಿ, 100 ಬೆಡ್ ಆಸ್ಪತ್ರೆಯ ವೈದ್ಯರಾದ ಡಾ.ಸೋಮಶೇಖರ್, ಡಾ.ಹರಿಪ್ರಸಾದ್ ಹಾಗೂ ಕೌನ್ಸರ್‍ಗಳಾದ ಮಾರೇಶ್.ಜಿ ಮತ್ತು ಸಹದೇವ್ ಸೇರಿದಂತೆ ಕಾರಾಗೃಹದ ಸಿಬ್ಬಂದಿಗಳು ಇದ್ದರು.


ಅಂಬೆ ಪ್ರಕಾಶನ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಜಾದಿ ಕಾ ಅಮೃತ್ ಮಹೊತ್ಸವ ನಿಮಿತ್ತ ಅಂಬೆ ಪ್ರಕಾಶನ ವತಿಯಿಂದ ಕಾರಾಗೃಹದ ಬಂಧಿಗಳಿಗೆ ದೇಶ ಭಕ್ತಿಗೀತೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕಾರಾಗೃಹದಲ್ಲಿ ಇತ್ತೀಚೆಗೆ ನಡೆಸಲಾಗಿತ್ತು.
ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಪಿ.ಡಿ.ಐ.ಟಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಂ.ಶಶಿಧರ್ ಅವರು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಉಪ ಕಾರಾಗೃಹದ ಅಧೀಕ್ಷಕರಾದ ಎಂ.ಹೆಚ್.ಕಲಾದಗಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕರು ಹಾಗೂ ಸಂಗೀತ ವಿದ್ವಾಂಸಕರಾದ ನಾಗರಾಜ ಪತ್ತಾರ್, ಗೃಹ ರಕ್ಷಕದಳದ ಸಮಾದೇಶ ಅಧಿಕಾರಿಗಳಾದ ಎಸ್.ಎಂ.ಗಿರೀಶ್, ಖ್ಯಾತ ಲೇಖಕಿ ಹಾಗೂ ಪ್ರಕಾಶಕರಾದ ಅಂಜಲಿ ಬೆಳಗಲ್, ಸಂಗೀತಕಲಾವಿದರಾದ ಸಂತೋಷ ಹೊಸಕೋಟೆ, ನೃತ್ಯಕಲಾವಿದರಾದ ಶ್ರೀ.ರಾಮಾಲಿ ಸೇರಿದಂತೆ ಕಾರಾಗೃಹದ ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here