ಬೃಹತ್ ಧ್ವಜಸ್ತಂಭದ ಧ್ವಜಾರೋಹಣ:ಹರಿದುಬಂದ ವಿದ್ಯಾರ್ಥಿಸಮೂಹ
BP News ಬಳ್ಳಾರಿ,ಆ.13-ಅಜಾದಿ ಕಾ ಅಮೃತ್ ಮಹೋತ್ಸವದ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಳ್ಳಾರಿಯ ಎಚ್.ಆರ್.ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ಬೃಹತ್ ಧ್ವಜಸ್ತಂಭದ ಧ್ವಜಾರೋಹಣ ನಡೆಯಿತು.
ವಿಮ್ಸ್, ಮುನ್ಸಿಪಲ್ ಕಾಲೇಜು ಮೈದಾನ, ಬಸವಭವನ, ವಾಡ್ರ್ಲಾ ಕಾಲೇಜು ಸೇರಿದಂತೆ ನಗರದ 5 ಕಡೆಗಳಿಂದ ಸಾವಿರಾರು ವಿದ್ಯಾರ್ಥಿಗಳ ಗುಂಪು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಸಾಗಿಬಂದರು. ಜಾಥಾದಲ್ಲಿ ದೇಶಭಕ್ತಿ ಗೀತೆಗಳ ಹಾಡಿಗೆ ಕೆಲವೆಡೆ ಶ್ರೀರಾಮುಲು, ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಹೆಜ್ಜೆಹಾಕಿದ್ದು ವಿಶೇಷವಾಗಿತ್ತು. ಗಣ್ಯರ ಜತೆ ಅಧಿಕಾರಿಗಳು ಜಾಥಾದಲ್ಲಿ ಸಾಗಿಬಂದರು.
——-
ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ತಿರಂಗ ಧ್ವಜ ವಿತರಣೆ
BP News ಬಳ್ಳಾರಿ ಅ.13: ಇಲ್ಲಿನ ಹೊಸಪೇಟೆ ರಸ್ತೆಯ ಅಲ್ಲೀಪುರ ಭಾಗದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಪತ್ರಕರ್ತರ ಸಂಘದವತಿಯಿಂದ ತಿರಂಗ ಧ್ವಜವನ್ನು ವಿತರಣೆ ಮಾಡಲಾಯಿತು.
ಪತ್ರಕರ್ತರು ಜನತೆಗೆ ವರ್ತಮಾನದ ಸುದ್ದಿ ಮುಟ್ಟಿಸವುದರ ಜೊತೆಗೆ ಸ್ವಾತಂತ್ರ್ಯದ ಹೋರಾಟದ ತ್ಯಾಗ ಬಲಿದಾನಗಳ ಹಾಗೂ ಅಂದಿನ ಸ್ಥಿತಿಗತಿಗಳನ್ನು ಇಂದಿನ ತಲೆಮಾರಿಗೆ ತಿಳಿಸುವುದು ಅವಶ್ಯಕ ಎಂದು ಕರ್ನಾಟಕ ಪತ್ರಕರ್ತ ರ ಸಂಘದ ಜಿಲ್ಲಾಧ್ಯಕ್ಷರಾದ ಅರುಣ್ ಭೂಪಾಲ್ ತಿಳಿಸಿದರು. ಸಂಘದ ಸದಸ್ಯರಾದ ಬಿ. ನಾಗೇಂದ್ರ, ರತ್ನಯ್ಯ, ಸುನೀಲ್ ಯಾದವ್, ನವೀನ್ ಮತ್ತು ಪ್ರದೀಪ್ ಹರಪನಹಳ್ಳಿ ಮತ್ತಿತರು ಉಪಸ್ಥಿತರಿದ್ದರು.
——
ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯಿಂದ 60 ಅಡಿ ತಿರಂಗಾ ಧ್ವಜ ಮೆರವಣಿಗೆ
BP News ಬಳ್ಳಾರಿ,ಆ.13-75ನೇ ಭಾರತ ಸ್ವಾತಂತ್ರ್ಯೋತ್ಸವ ನಿಮಿತ್ತ ಅವಂಬಾವಿ ಪ್ರದೇಶದಲ್ಲಿರುವ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯಿಂದ 60 ಅಡಿ ಉದ್ದದ ತಿರಂಗಾ ಧ್ವಜದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ನಗರದೆಲ್ಲೆಡೆ ಪ್ರದರ್ಶಿಸಿ ವಾಲ್ಮೀಕಿ ವೃತ್ತದಲ್ಲಿ ನೆಲೆಗೊಂಡು ಅಮೃತ ಮಹೋತ್ಸವದ ಯಶಸ್ಸಿಗೆ ಪ್ರೇರಣೆ ನೀಡಿದರು.
ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ಎಜಿಎಂ ಹರಿಕೃಷ್ಣ, ಪ್ರಾಚಾರ್ಯರಾದ ಲಕ್ಷ್ಮಿ ಇವರ ನೇತೃತ್ವದಲ್ಲಿ ಶ್ರೀ ಚೈತನ್ಯ ಶಾಲೆ ಮತ್ತು ಕಾಲೇಜಿನ 600 ವಿದ್ಯಾರ್ಥಿಗಳು ಅವಂಬಾವಿಯ ಕಾಲೇಜು ಆವರಣದಿಂದ ಸಿರುಗುಪ್ಪ ರಸ್ತೆ ಮಾರ್ಗವಾಗಿ ಭವ್ಯ ಮೆರವಣಿಗೆ ನಡೆಸಿದರು.
——
ಹರ್ ಘರ್ ತಿರಂಗಾ ಅಭಿಯಾನಕ್ಕೆ ಶಾಸಕ ಜಿ.ಸೋಮಶೇಖರರೆಡ್ಡಿ ಅವರಿಂದ ಚಾಲನೆ
BP News ಬಳ್ಳಾರಿ, ಅ.13-ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ 15ನೇ ವಾರ್ಡಿನ ಸಿಂಧಿಗಿ ಕಾಂಪೌಂಡ್‍ನಲ್ಲಿ ಶಾಸಕರಾದ ಜಿ.ಸೋಮಶೇಖರರೆಡ್ಡಿ ಚಾಲನೆ ನೀಡಿದರು.
ಕಾಂಪೌಂಡಿನ ಹಿರಿಯ ನಾಗರಿಕರಾದ ಡಾ. ಶಂಕರ್ ಜೀರಂಕಲಿ, ಸಿದ್ದಲಿಂಗನಗೌಡ್ರು, ನಾಗರಾಜ್ ಹಾಗೂ ಸತ್ಯನಾರಾಯಣ ಮತ್ತು ರಾಜೀವ ತೊಗರಿ ಅವರಿಗೆ ತ್ರಿವರ್ಣ ಧ್ವಜವನ್ನು ನೀಡುವುದರ ಮೂಲಕ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವಕ್ಕೆ ಶುಭ ಕೋರಿದರು.
—–
ವಿಡಿಹೆಚ್‍ಎಲ್ ಶಾಲೆಯ ಮಕ್ಕಳಿಂದ ತಿರಂಗಾ ಮೆರವಣಿಗೆ
BP News ಬಳ್ಳಾರಿ,ಆ.13-ಇಲ್ಲಿನ ಅವಂಬಾವಿ ರಸ್ತೆಯಲ್ಲಿರುವ ವಿಡಿಹೆಚ್‍ಎಲ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಾದ ರಾಧಾ ಪಿ., ಮತ್ತು ಸಹ ಶಿಕ್ಷಕರು ರಾಷ್ಟ್ರಧ್ವಜವನ್ನು ಹಿಡಿದು ಕಾಲ್ನಡಿಗೆಯಲ್ಲಿ ಸಿರುಗುಪ್ಪ ರಸ್ತೆಯುದ್ದಕ್ಕೂ ಸಂಚರಿಸಿ ದೇಶಭಕ್ತಿ ಮೊಳಗಿಸಿದರು.
ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರ ನಿವಾಸದ ಮುಂಭಾಗದಿಂದ ಅವಂಬಾವಿ ಪ್ರದೇಶದಲ್ಲಿ ಸಂಚರಿಸಿದ ತಿರಂಗಾ ರ್ಯಾಲಿ ಮೂಲಕ ಅಮೃತ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ಸನ್ನದ್ಧರಾದರು. ಭಾರತ್ ಮಾತಾಕೀ ಜೈ,ವಂದೇ ಮಾತರಂ ಸೇರಿದಂತೆ ಅನೇಕ ದೇಶಭಕ್ತಿ ಘೋಷಣೆಗಳುÅ. ದೇಶಭಕ್ತಿ ಮೊಳಗಿತು. ಸಹ ಶಿಕ್ಷಕರಾದ ಎಸ್ ಬಿ ಸ್ವಾಮಿ, ಎಂ.ರತ್ನಮ್ಮ, ಜಿಕೆಸ್ ಪ್ರಸಾದ್, ಜಯಶ್ರೀ, ಬಿಆರ್ ಮಹೇಶ್, ಶಿವಕುಮಾರ್, ಎಂ.ಮಂಜುಳಾ ಮತ್ತು ಉಷಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಜಾಥಾದಲ್ಲಿದ್ದರು.
——
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
BP News ಬಳ್ಳಾರಿ,ಆ.13-ಕಲಿಯುಗದ ಕಾಮಧೇನು ಶ್ರೀಗುರುಸಾರ್ವಭೌಮ ಶ್ರೀರಾಘವೇಂದ್ರ ಸ್ವಾಮಿಗಳ 351ನೇಆರಾಧನೆ ಮೂರು ದಿನಗಳಕಾಲ ನಡೆಯಲಿದ್ದು ಮಹೋತ್ಸವದ ಅಂಗವಾಗಿ ಸತ್ಯನಾರಾಯಣ ಪೇಟೆಯ ಶ್ರೀರಾಘವೇಂದ್ರ ಸ್ವಾಮಿಗಳ ಮಠ ದಲ್ಲಿ ಹಲವಾರು ಧಾರ್ಮಿಕ ಮತ್ತು ಸಾಂಸ್ಕøತಿಕ ಗಳನ್ನು ಹಮ್ಮಿಕೊಳ್ಳಲಾಗಿದೆ.
ಆರಾಧನಾ ಅಂಗವಾಗಿ ಮಠದಲ್ಲಿ ದಿನಾಲೂ ಬೆಳಿಗ್ಗೆ ಸುಪ್ರಭಾತ, ವೇದಪಾರಾಯಣ, ಪಂಚಾಮೃತ ಅಭಿμÉೀಕ, ಕನಕಾಭಿμÉೀಕ, ಮಹಾಪೂಜೆಗಳು ಜರುಗುತ್ತಿವೆ. ರಾಘವೇಂದ್ರ ಸ್ವಾಮಿಗಳ ಪೂರ್ವಾರÁಧನಾ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ಎಂ.ವೈಷ್ಣವಿಕುಲಕರ್ಣಿ, ನಾಟ್ಯ ಕಲಾ ತಂಡದವರಿಂದ ಭರತ ನಾಟ್ಯ ಕಾರ್ಯಕ್ರಮ ಜರುಗಿದವು.
——