BP News Karnataka Super Fast 11-08-2022

0
146

75ನೇ ಅಮೃತ ಮಹೋತ್ಸವಕ್ಕೆ ಬಳ್ಳಾರಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ-ಪವನಕುಮಾರ್ ಮಾಲಪಾಟಿ


BP News  ಬಳ್ಳಾರಿ,ಆ.11-ಆಗಸ್ಟ್ 15 ರಂದು ಆಚರಿಸಲಿರುವ 75ನೇ ಅಮೃತ ಮಹೋತ್ಸವಕ್ಕೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಯ ಸಮಸ್ತ ನಾಗರಿಕರು ರಾಷ್ಟ್ರೀಯ ಹಬ್ಬದ ಈ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಹಕರಿಸುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮನವಿ ಮಾಡಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿ, ಆ.12ರಿಂದ 15ರವರೆಗೆ ಮನೆ ಮನೆಯಲ್ಲೂ ತಿರಂಗಾ ಧ್ವಜ ಹಾರಾಟ ಮಾಡಲು ಸ್ಥಳೀಯ ಆಡಳಿತಗಳು ವ್ಯವಸ್ಥೆ ಮಾಡಿದೆ. 13ರಂದು ಹೆಚ್‍ಆರ್ ಗವಿಯಪ್ಪ ವೃತ್ತದಲ್ಲಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, 12 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಆ.15ರವರೆಗೆ ಜಿಲ್ಲೆಯಾದ್ಯಂತ ವಿವಿಧ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
—–
ಆಗಸ್ಟ್ 14 ರಂದು ವಿಕಾಸ ಬ್ಯಾಂಕ್ ಬೆಳ್ಳಿ ಹಬ್ಬದ ಸಂಭ್ರಮಾಚರಣೆ


BP News  ಬಳ್ಳಾರಿ,ಆ.11-ಇಲ್ಲಿನ ತಾಳೂರು ರಸ್ತೆಯಲ್ಲಿರುವ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಆ.14 ರಂದು ಭಾನುವಾರ ಆಲ್ ದಿ ಬೆಸ್ಟ್ ಹಾಸ್ಯ ನಾಟಕ ನಡೆಯಲಿದೆ.
ರಾಘವ ಕಲಾಮಂದಿರದಲ್ಲಿ ಸಂಜೆ 6 ಗಂಟೆಗೆ ಈ ನಾಟಕ ಕಾರ್ಯಕ್ರಮ ಜರುಗಲಿದ್ದು, ನಟ, ಹಾಸ್ಯ ನಾಟಕಕಾರ ಯಶವಂತ ಸರ್‍ದೇಶಪಾಂಡೆ ನಿರ್ದೇಶಿಸಲಿದ್ದಾರೆ. ಎಮ್ಮಿಗನೂರು ಶ್ರೀಗುರು ಮಹಾಂತರ ಸಂಸ್ಥಾನಮಠದ ಶ್ರೀಗುರು ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.
—-
ಸಚಿವ ಬಿ.ಶ್ರೀರಾಮುಲು ಅವರಿಂದ ಬಳ್ಳಾರಿಯಿಂದ ಕಂಪ್ಲಿಗೆ ತಡೆರಹಿತ ಬಸ್ ಆರಂಭಕ್ಕೆ ಹಸಿರು ನಿಶಾನೆ


BP News  ಬಳ್ಳಾರಿ,ಆ.11-ನೂತನವಾಗಿ ಬಳ್ಳಾರಿಯಿಂದ ಹೊಸಪೇಟೆ, ಬಳ್ಳಾರಿಯಿಂದ ಕಂಪ್ಲಿ ತಡೆರಹಿತ ಬಸ್‍ಗಳನ್ನು ಸಿದ್ಧಪಡಿಸಲಾಗಿದ್ದು ಇಂದು ಸಾರಿಗೆ, ಪರಿಶಿಷ್ಟ ಪಂಗಡ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ಶ್ರೀರಾಮುಲು ಅವರು ಹಸಿರು ನಿಶಾನೆ ತೋರಿದರು. .
ಈ ಸಂದರ್ಭದಲ್ಲಿ ನಿಯಂತ್ರಣಾಧಿಕಾರಿ ದೇವರಾಜ್, ಅಧಿಕಾರಿಗಳಾದ ಹೇಮಲತಾ ಸೇರಿದಂತೆ ಸ್ಥಳೀಯ ಮುಖಂಡರು ಹಾಗು ಸಿಬ್ಬಂದಿ ವರ್ಗದವರು ಇದ್ದರು.
——
ರಾಜೀವ್ ಗಾಂಧಿ ಜ್ಯೋತಿಯಾತ್ರೆಯನ್ನು ಸ್ವಾಗತಿಸಿದ ಕಾಂಗ್ರೆಸ್ ಮುಖಂಡರು


BP News ಬಳ್ಳಾರಿ,ಆ.11-ಭಾರತದ ಪ್ರಧಾನಮಂತ್ರಿ ದಿ.ರಾಜೀವ್ ಗಾಂಧಿ ಅವರಿಗೆ 78 ವರ್ಷಗಳು ಸಂದ ಸಂದರ್ಭದಲ್ಲಿ ತಮಿಳುನಾಡಿನಿಂದ ಬೆಂಗಳೂರು ಮೂಲಕ ಆಗಮಿಸಿದ ಸದ್ಭಾವನಾ ಜ್ಯೋತಿಯನ್ನು ನಿನ್ನೆ ರಾತ್ರಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಿಎಸ್ ಮಹಮ್ಮದ್ ರಫೀಕ್ ಅವರು ಸ್ವಾಗತಿಸಿಕೊಂಡರು.
31 ನೇಯ ರಾಜೀವ್ ಜ್ಯೋತಿ ಸದ್ಭಾವನ ಯಾತ್ರೆಯ ಕುರಿತು ಮಾತನಾಡಿದ ಮಹ್ಮದ್ ರಫೀಕ್ ಅವರು, ಸದ್ಭಾವನ ಯಾತ್ರೆಯ ನಾಯಕತ್ವವನ್ನು ವಹಿಸಿದಂತಹ ದೋರೈವೇಲು, ಅಯ್ಯರ್ ಗೋಮಾಧೀಶನ್, ಗೀತಾ, ಸುಶೀಲಾ, ಮಾಣಿಕ್ಯ ರೆಡ್ಡಿ, ಶ್ರೀಧರ, ಬೆಂಗಳೂರು ವಿಕ್ಕಿ ರವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
—-
ಗಾಲಿ ಶ್ರವಣ್ ಕುಮಾರ್ ರೆಡ್ಡಿ ಹುಟ್ಟು ಹಬ್ಬ ಪ್ರಯುಕ್ತ ರಕ್ತದಾನ ಶಿಬಿರ


BP News  ಬಳ್ಳಾರಿ,ಆ.11-ಭಾರತೀಯ ಜನತಾ ಪಾರ್ಟಿಯ ಯುವ ಮುಖಂಡ ಗಾಲಿ ಶ್ರವಣ್ ಕುಮಾರ್ ರೆಡ್ಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಂದು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರು ಹಾಗೂ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಹಾಲು ಒಕ್ಕೂಟದ ನಿರ್ದೇಶಕರೂ ಆಗಿರುವ ವೀರಶೇಖರರೆಡ್ಡಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಪಾಲಣ್ಣ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಬಿಜೆಪಿಯ ಮಹಿಳಾ ನಾಯಕಿಯರಾದ ಶಿವಾಕೃಷ್ಣಮ್ಮ, ವಿಜಯಲಕ್ಷ್ಮಿ, ಸುಗುಣ, ಸುಮಾರೆಡ್ಡಿ, ಬಿಜೆಪಿಯ ಮುಖಂಡರಾದ ಎಸ್.ಮಲ್ಲನಗೌಡ, ವೇಮಣ್ಣ ಕೆ., ಕೃಷ್ಣರೆಡ್ಡಿ, ಯುವ ಘಟಕದ ರಾಜ್ಯ ಕಾರ್ಯದರ್ಶಿ ಸುಧಾಕರ್ ರೆಡ್ಡಿ, ಇನ್ನಿತರರು ಇದ್ದ ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ಗುಡಿಗಂಟಿ ಹನುಮಂತ ಸೇರಿದಂತೆ ಅನೇಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
——
ರಾಜೀವ್‍ಗಾಂಧಿ ಜ್ಯೋತಿ ಯಾತ್ರೆ ಬೀಳ್ಕೊಟ್ಟ ಡಿಸಿಸಿ ಅಧ್ಯಕ್ಷ ಜಿಎಸ್ ಮಹಮ್ಮದ್ ರಫೀಕ್


BP News ಬಳ್ಳಾರಿ,ಆ.11-ರಾಜೀವ್ ಗಾಂಧಿ ಜ್ಯೋತಿ ಯಾತ್ರೆಗೆ ಇಂದು ಬೆಳಿಗ್ಗೆ ಡಿಸಿಸಿ ಅಧ್ಯಕ್ಷ ಜಿಎಸ್ ಮಹಮ್ಮದ್ ರಫೀಕ್ ಅವರು ಬೀಳ್ಕೊಟ್ಟರು.
ಇಲ್ಲಿನ ರಾಯಲ್ ವೃತ್ತದಲ್ಲಿ ತುಮಕೂರಿನಿಂದ ನಿನ್ನೆ ರಾತ್ರಿ ಬಳ್ಳಾರಿಗೆ ಆಗಮಿಸಿದ್ದ ಜ್ಯೋತಿಯಾತ್ರೆ ಸಮಿತಿಯನ್ನು ಆಹ್ವಾನಿಸಿ ಇಂದು ಬೆಳಿಗ್ಗೆ ಮತ್ತೆ ಬೀಳ್ಕೊಡಲಾಯಿತು. ಅಯ್ಯರ್, ರಾಲ್ಫ್, ಮಾಣಿಕ್ಯ ರೆಡ್ಡಿ, ಗೀತಾ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾಂತಿನೋವ ವಿಲ್ಸನ್, ಮಹಾನಗರ ಪಾಲಿಕೆ ಸದಸ್ಯರಾದ ವಿಕ್ಕಿ, ಪ್ರಭಂಜನ್ ಕುಮಾರ್, ಮಾಜಿ ಸದಸ್ಯೆ ಪರ್ವಿನ್ ಭಾನು, ಕುಮಾರಮ್ಮ, ಮುಖಂಡರಾದ ಅಲವೇಲು ಸುರೇಶ್ ಇನ್ನಿತರರು ಇದ್ದರು.
——-

LEAVE A REPLY

Please enter your comment!
Please enter your name here