ಪಾಲಿಕೆ ಸದಸ್ಯ ಡಾ.ಕೆಎಸ್ ಅಶೋಕ್ ಕುಮಾರ್ ಅವರಿಂದ ಹರ್ ಘರ್ ತಿರಂಗಾ ವಿತರಣೆ
BP News ಬಳ್ಳಾರಿ,ಆ.9-ಮಹಾನಗರ ಪಾಲಿಕೆಯ 19ನೇ ವಾರ್ಡಿನ ಸದಸ್ಯ ಡಾ.ಕೆ.ಎಸ್.ಅಶೋಕ್ ಕುಮಾರ್ ಅವರು ಇಂದು ಭಾರತದ ಐಕ್ಯತೆ ಸಾರುವ ತ್ರಿವರ್ಣ ಧ್ವಜವನ್ನು ಹರ್ ಘರ್ ತಿರಂಗಾ ಕಾರ್ಯಕ್ರಮದಡಿ ಮನೆ ಮನೆಗೂ ತೆರಳಿ ವಿತರಣೆ ಮಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ಇಡೀ ದೇಶವೇ ಅಮೃತ ಮಹೋತ್ಸವ ಆಚರಿಸಲು ನಿರ್ಧರಿಸಿದೆ. ಈ ಕಾರಣಕ್ಕಾಗಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಹರ್ ಘರ್ ತಿರಂಗಾ ವಿತರಣೆಯನ್ನು ಎಲ್ಲೆಡೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
——-
ಮೇಯರ್ ರಾಜೇಶ್ವರಿ ನಗರ ಸಂಚಾರ-9ನೇ ವಾರ್ಡ್ ಯುಜಿಡಿ ಸಮಸ್ಯೆಗೆ ಪರಿಹಾರ
BP News ಬಳ್ಳಾರಿ,ಆ.9-ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸುಬ್ಬಾರಾಯುಡು ಅವರು ಪ್ರತಿದಿನ ವಾರ್ಡುಗಳಲ್ಲಿ ಸಂಚಾರ ಮಾಡುತ್ತಿದ್ದು ಇಂದು 9ನೇ ವಾರ್ಡಿನ ಒಳಚರಂಡಿ ಹಾಗೂ ರಸ್ತೆಗಳ ಸಮಸ್ಯೆ ಕುರಿತು ಆಯುಕ್ತರೊಂದಿಗೆ ಚರ್ಚಿಸಿದರು.
ರೂಪನಗುಡಿಯಿಂದ ವೆಂಕಟರಮಣ ನಗರದವರೆಗೂ ಪಾದಯಾತ್ರೆ ನಡೆಸಿದ ಮೇಯರ್ ಅವರು, ಲಕ್ಷಾಂತರ ರೂ.ವೆಚ್ಚದ ಕಾಮಗಾರಿಯನ್ನು ತುರ್ತಾಗಿ ಕೈಗೊಂಡು ಒಳ ಚರಂಡಿ ಸಮಸ್ಯೆ ಹಾಗೂ ರಸ್ತೆ ಅಭಿವೃದ್ಧಿ ಕೈಗೊಳ್ಳಲು ಸ್ಥಳದಲ್ಲಿದ್ದ ಇಂಜಿನಿಯರುಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿದರು.
——-
ಹೊನ್ನಳ್ಳಿ ತಾಂಡಾ ಅಜ್ಜಯ್ಯ ಗೋಪುರ ನಿರ್ಮಾಣಕ್ಕೆ ಟಿ.ಶ್ರೀನಿವಾಸ್ ರಾವ್ ಭರವಸೆ
BP News ಬಳ್ಳಾರಿ,ಆ.9-ಹೊನ್ನಳ್ಳಿ ತಾಂಡಾದಲ್ಲಿರುವ ಉಕ್ಕಡಗಾತ್ರಿ ಅಜ್ಜಯ್ಯ ದೇವಸ್ಥಾನ ಗೋಪುರ ನಿರ್ಮಾಣಕ್ಕೆ ಕರ್ನಾಟಕ ಸ್ಪಾಂಜ್ ಐರನ್ ಘಟಕಗಳ(ದಕ್ಷಿಣ ರಾಜ್ಯಗಳ) ಗೌರವಾಧ್ಯಕ್ಷ ಟಿ.ಶ್ರೀನಿವಾಸರಾವ್ ಇವರು ಭರವಸೆ ನೀಡಿದರು.
ನಿನ್ನೆಯ ದಿನ ಶ್ರಾವಣ ಮಾಸದ 2ನೇ ಸೋಮವಾರದ ಅಜ್ಜಯ್ಯನ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಅಜ್ಜಯ್ಯನ ಭಕ್ತರು ಮನವಿ ಪತ್ರವನ್ನು ನೀಡಿದ್ದರ ಹಿನ್ನೆಲೆಯಲ್ಲಿ ಈ ಭರವಸೆ ನೀಡಿದ್ದಾರೆ.
—–
ಮೊಹರಂ ಹಬ್ಬ-ಪೀರಲು ದೇವರಿಗೆ ಪ್ರಾರ್ಥಿಸಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ
BP News ಬಳ್ಳಾರಿ,ಆ.9-ಮೊಹರಂ ಹಬ್ಬವನ್ನು ನಗರದಲ್ಲಿ ಶ್ರದ್ಧಾ ಭಕ್ತಿ ಹಾಗೂ ಶಾಂತಿಯುತವಾಗಿ ಆಚರಿಸಲಾಗುತ್ತಿದ್ದು ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಪೀರಲು ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಭಾರತೀಯ ಜನತಾ ಪಾರ್ಟಿ ಜಿಲ್ಲಾ ಉಪಾದ್ಯಕ್ಷರು ಹಾಗೂ ಬರಾಕೊ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್ ಸೇರಿದಂತೆ ಹಲವು ಮುಖಂಡರು ಈವೇಳೆ ಇದ್ದರು.
——
ಸುಂಕ ವಸೂಲಾತಿಯಿಂದ ಬಡ ವ್ಯಾಪಾರಿಗೆ ಅನ್ಯಾಯ-ಮೇಯರ್ ಆರೋಪ
BP News ಬಳ್ಳಾರಿ, ಆ.9-ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ವ್ಯಾಪಾರಿಗಳ ಮೇಲೆ ರೂ.8 ರಂತೆ ಸುಂಕ ವಿಧಿಸುವ ಮೂಲಕ ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ ಸುಬ್ಬಾರಾಯುಡು ಆರೋಪಿಸಿದ್ದಾರೆ.
ಬಡ ವ್ಯಾಪಾರಿಗಳ ಮೇಲೆ ನಮಗೆ ಅನುಕಂಪ ಇದೆ. ಕಾಂಗ್ರೆಸ್ ಪಕ್ಷ ಎಂದಿಗೂ ಬಡವರನ್ನು ಶೋಷಿಸುವ ಗೊಡವೆಗೆ ಹೋಗುವುದಿಲ್ಲ. ಆದರೆ, ಬಿಜೆಪಿ ಸರ್ಕಾರ ಇರುವುದರಿಂದ ಇಲ್ಲಿನ ಸುಂಕ ವಿಧಿಸುತ್ತಿದ್ದಾರೆ. ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಆಡಳಿತದ ಬಗ್ಗೆ ಜನರಲ್ಲಿ ತಪ್ಪು ಭಾವನೆಗಳನ್ನು ಮೂಡಿಸುತ್ತಿದ್ದಾರೆ ಎಂದರು.
—–
ಕೇಂದ್ರ ಸರ್ಕಾರದಿಂದ ಖಾಸಗಿ ಸಂಸ್ಥೆಗಳಿಗೆ ಬಂಪರ್ ಕೊಡುಗೆ-ಜೆ.ಸತ್ಯಬಾಬು
BP News ಬಳ್ಳಾರಿ,ಆ.9-ದೇಶದಲ್ಲಿ ಕಾಪೆರ್Çರೇಟ್ ಕಂಪನಿಗಳಿಗೆ ಬಂಪರ್ ಕೊಡುಗೆ ನೀಡಲು ಬಡವರನ್ನು, ಮಧ್ಯಮ ವರ್ಗದವರನ್ನು ಒಕ್ಕಲೆಬ್ಬಿಸಿ ಎಲ್ಲ ಸ್ವತ್ತುಗಳು ಶ್ರೀಮಂತರ ಪಾಲು ಮಾಡಲು ಬಿಜೆಪಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಪ್ರಧಾನ ಕಾರ್ಯದರ್ಶಿ ಜೆ.ಸತ್ಯ¨ಬು ಹೇಳಿದರು.
ಬಳ್ಳಾರಿ ತಾಲೂಕ ಸಮಿತಿವತಿಯಿಂದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಸಿಐಟಿಯು 5ನೇ ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿ, ಒಂದು ಕಡೆ ಯುವ ಜನತೆಗೆ ಉದ್ಯೋಗ ಸಿಗದೇ ಪರದಾಡುತ್ತಿದ್ದಾರೆ. ಕೋಮುವಾದಿ ಬಿಜೆಪಿ ಪಕ್ಸ ಧರ್ಮ, ಜಾತಿ ಹೆಸರಿನಲ್ಲಿ ಜನರ ಒಗ್ಗಟ್ಟು ಮುರಿಯಲು ಪ್ರಯತ್ನಸಿಸುತ್ತಿದೆ ಎಂದು ಹರಿಯಾಯ್ದರು.
—–
ಕರ್ನಾಟಕ ಇತಿಹಾಸ ಅಕಾಡೆಮಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾಗಿ ಟಿ.ಹೆಚ್.ಎಂ. ಬಸವರಾಜ
BP News ಬಳ್ಳಾರಿ,ಆ.9-ಬಳ್ಳಾರಿ ಜಿಲ್ಲಾ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷರನ್ನಾಗಿ ಸಾಹಿತಿ, ಜಾನಪದ ಕಲಾವಿದ ಮತ್ತು ಇತಿಹಾಸ ಸಂಶೋದಕರಾದ ಟಿ.ಹೆಚ್.ಎಂ. ಬಸವರಾಜ ಅವರು ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಕರ್ನಾಟಕ ಇತಿಹಾಸ ಅಕಾಡೆಮಿ ರಾಜ್ಯಾಧ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿ ಅವರು, ಕಳೆದ 50 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
——