ಬಳ್ಳಾರಿ ರಾಘವರ 142ನೇ ಜಯಂತಿಯ ಮೊದಲನೇ ದಿನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ನಾಟಕೋತ್ಸವ

0
341

BP NEWS: ಬಳ್ಳಾರಿ: ಆಗಸ್ಟ್.02:  ಬಳ್ಳಾರಿ ರಾಘವರ 142ನೇ ಜಯಂತಿಯ ಮೊದಲನೇ ದಿನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ನಾಟಕೋತ್ಸವದ ಪ್ರಾರಂಭದಲ್ಲಿ ವೀರಗಾಸೆ ನೃತ್ಯ ಮತ್ತು ಸಮೇಳದೊಂದಿಗೆ ಗಡಗಿ ಚನ್ನಪ್ಪ ವೃತ್ತದಲ್ಲಿರುವ ಬಳ್ಳಾರಿ ರಾಘವ ಪುತ್ಥಳಿಗೆ ರಾಘವ ಕಲಾ ಮಂದಿರದಿಂದ ಮೆರವಣಿಗೆ ಮೂಲಕ ತೆರಳಿ ಮಾಲಾರ್ಪಣೆ ಮಾಡಲಾಯಿತು. ರಾಘವ ಮೆಮೋರಿಯಲ್ ಅಸೋಶಿಯೇಶನ್ ಬಳ್ಳಾರಿ ಆಯೋಜಿಸಿರುವ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವ ರ 142ನೇ ಜಯಂತಿ, ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನಾಟಕೋತ್ಸವ-2022 ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು ಮೊದಲನೇ ದಿನ ಕಾರ್ಯಕ್ರಮ ವೇದಿಕೆ ಮೇಲೆ ಅತಿಥಿಗಳು ಆಗಮಿಸಿದರು.

ಅತಿಥಿಗಳೊಂದಿಗೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತರಾದ ಡಾ.ಆಕಾಶ್ ಶಂಕರ್ ಭಾ.ಆ.ಸೆ ಬಳ್ಳಾರಿ ಜಿಲ್ಲೆಯಲ್ಲಿ ಇತಿಹಾಸವುಳ್ಳ ರಾಘವ ಕಲಾ ಮಂದಿರ ಇರುವುದು ನಮ್ಮೆಲ್ಲರ ಪುಣ್ಯ, ಕೇವಲ ವಿದ್ಯಾಬ್ಯಾಸವೊಂದೆ ಅಲ್ಲ ಓದಿನ ಜೊತೆಗೆ ನಾಟಕ, ಸಂಗೀತ, ಚಿತ್ರಕಲೆ ಮುಂತಾದವು ವ್ಯಕ್ತಿತ್ವವನ್ನು ಬೆಳೆಸಿ ಮನುಷ್ಯರನ್ನು ಪರಿಪೂರ್ಣ ಗೊಳಿಸುತ್ತದೆ.

ಕಲೆಗಳನ್ನು ಬೆಳೆಸಲು ಕಲಾಮಂದಿರಗಳ ಪಾತ್ರ ದೊಡ್ಡದು ಐತಿಹಾಸಿಕ ಹಿನ್ನೆಲೆಯುಳ್ಳ ಬಳ್ಳಾರಿ ರಾಘವ ಕಲಾ ಮಂದಿರವು ಸತತ ಇಂತಹ ಕಾರ್ಯದಲ್ಲಿ ತೊಡಗಿ ಕೊಂಡಿರುವುದು ಶ್ಲಾಘನೀಯ, ಕಲೆಯಲ್ಲಿ ನನಗೆ ಬಹಳ ಆಸಕ್ತಿ ನಾನು ಬಹುಶಃ ಅಧಿಕಾರಿ ಆಗದಿದ್ದರೆ ಕಲಾವಿದನಾಗುತ್ತಿದ್ದೆ ನನಗೆ ನಾಟಕ ಸಂಗೀತ ಮತ್ತು ಚಿತ್ರಕಲೆಯಲ್ಲಿ ಬಹಳಷ್ಟು ಆಸಕ್ತಿ ಇದೆ ಕಾಲೇಜು ಹಂತದಲ್ಲಿ ನಾಟಕ ಸ್ಪರ್ಧೆಯನ್ನು ನಡೆಸುವ ಒಂದು ಯೋಚನೆಯಲ್ಲಿ ನಾವಿದ್ದೇವೆ ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ನುಡಿದರು.
ನಾವು ಪ್ರತಿ ವರ್ಷವು ರಾಜ್ಯದಲ್ಲಿ ಹೆಸರು ಮಾಡಿರುವಂತಹ ಕಲಾವಿದರಿಗೆ ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತೇವೆ ರಂಗಭೂಮಿ ದಿಗ್ಗಜರಲ್ಲಿ ಬಳ್ಳಾರಿ ರಾಘವರ ಹೆಸರು ಮೊದಲು ಕೇಳಿ ಬರುತ್ತದೆ ಇಂಥವರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಎಲ್ಲಾ ಕಲಾವಿದರಿಗೆ ಒಳ್ಳೆಯದಾಗುತ್ತದೆ ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶ್ರೀ ಕೆ.ಚನ್ನಪ್ಪನವರು ಹೇಳಿದರು.


ರಾಘವರು ತಮ್ಮ ಚಿಕ್ಕ ವಯಸ್ಸಿನಿಂದಲೇ ರಂಗಭೂಮಿಯನ್ನು ಕಟ್ಟಬೇಕು ಎನ್ನುವ ಛಲವನ್ನು ಹೊಂದಿದ್ದರು ಇವರು ಭಾರತದಲ್ಲಿ ಜನಿಸುವ ಬದಲು ಇಂಗ್ಲೆಂಡಿನಲ್ಲಿ ಎನಾದರು ಜನಿಸಿದ್ದರೆ ಬಹುಶಃ ಶೇಕ್ಸ್ಪಿಯರನ್ನು ಮೀರಿಸುವ ಕೆಲಸ ಮಾಡುತ್ತಿದ್ದರು ಎಂದು ಇಂಗ್ಲೆಂಡಿನ ಪತ್ರಿಕಾ ಮಾಧ್ಯಮದವರು ಹೇಳಿದ್ದರು
ಶ್ರಾವಣ ಮಾಸದ ಸಂಭ್ರಮದಂತೆ ಈ ಕಾರ್ಯಕ್ರಮವು ನಡೆಯುತ್ತಿದೆ ಎಂದು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಸಿದ್ದಲಿಂಗೇಶ ಕೆ.ರಂಗಣ್ಣನವರು ಹೇಳಿದರು.
ವೇದಿಕೆ ಮೇಲೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಕೆ.ಕೋಟೇಶ್ವರರಾವ್ ರವರು ಕಾರ್ಯದರ್ಶಿಗಳಾದ ಶ್ರೀ.ರಮೇಶ್ ಗೌಡ ಪಾಟೀಲ್ ರವರು ಉಪಾಧ್ಯಕ್ಷರಾದ ಕೆ.ರಾಮಾಂಜನೇಯಲು ಮತ್ತು ಎನ್.ಬಸವರಾಜ್ ಜಂಟಿ ಕಾರ್ಯದರ್ಶಿಯಾದ ಕೆ.ಪಂಪನಗೌಡರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಕೊಟ್ರೇಶ ಶಿವಪ್ಪ ಅಂಗಡಿ ಉಪಸ್ಥಿತರಿದ್ದರು
ನಂತರ ಬಳ್ಳಾರಿ ರಾಘವರ ರಾಜ್ಯ ಪ್ರಶಸ್ತಿಯನ್ನು ಶ್ರೀ ಕೊಟ್ರೇಶ್ ಶಿವಪ್ಪ ಅಂಗಡಿಯವರಿಗೆ ನೀಡಿ ಗೌರವಿಸಲಾಯಿತು. ರಾಘವರ ಜಿಲ್ಲಾ ಪ್ರಶಸ್ತಿಯನ್ನು ಶ್ರೀಮತಿ ಪಿ.ಪದ್ಮ ಕೂಡ್ಲಿಗಿ ಶ್ರೀ.ಮುದೇನೂರು ಉಮಾ ಮಹೇಶ್ವರ ಹೊಸಪೇಟೆ ಇವರಿಗೆ ನೀಡಿ ಗೌರವಿಸಲಾಯಿತು.


ನಂತರ ಕಿ, ರಂ, ನಾಗರಾಜ ರವರ ರಚನೆಯ ಸಿ.ಕೆ. ನಾಗರಾಜ ನಿರ್ದೇಶಿಸಿರುವ “ಕಾಲಜ್ಞಾನಿ ಕನಕ” ಎನ್ನುವ ಕನ್ನಡ ನಾಟಕವನ್ನು ಲಲಿತ ಕಲಾ ರಂಗ ಮರಿಯಮ್ಮನಹಳ್ಳಿ ಇವರು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ನಿರೂಪಣೆ ವಿಷ್ಣು ಹಡಪದ, ಪ್ರಾರ್ಥನೆ ನಂದಿನಿ ಮತ್ತು ನಾಗವೇಣಿ, ಪ್ರಾಸ್ತಾವಿಕ ನುಡಿ ಶ್ರೀ ಕೆ. ಕೋಟೇಶ್ವರರಾವ್, ಸ್ವಾಗತ ರಮೇಶ್ ಗೌಡ ಪಾಟೀಲ್ ವಂದನಾರ್ಪಣೆ ಕೆ.ಪಂಪನಗೌಡರು ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆ.ಕೃಷ್ಣ ,ಪಿ ಎಲ್ ಗಾದಿಲಿಂಗನ ಗೌಡ, ಚೆಲ್ಲಾ ಅಮರೆಂದ್ರ ನಾಥ ಚೌದರಿ, ಶ್ಯಾಮಸುಂದರ್, ಮೋಹನ್ ರೆಡ್ಡಿ,ಜಿ ಪ್ರಭಾಕರ್ ,ಎಂ. ರಾಮಾಂಜನೇಯಲು, ಸುರೇಂದ್ರ ಬಾಬು, ರಮಣಪ್ಪ ಭಜಂತ್ರಿ ಅನೇಕ ಕಲಾಭಿಮಾನಿಗಳು ಕಲಾಸಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here