BP News Karnataka Super Fast 01-08-2022

0
198

ಸಂಗೀತ ನಾಟಕಗಳಿಂದ ಸಹೃದಯರ ಮನಸ್ಸಿಗೆ ಉಲ್ಲಾಸ- ಸಿದ್ದಲಿಂಗೇಶ ರಂಗಣ್ಣನವರ್


BP News ಬಳ್ಳಾರಿ,ಆ.1-ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗುತ್ತೇವೆ ಎಂದು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ತಿಳಿಸಿದರು.
ವರನಟ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಚಯ ಹೊಂಗಿರಣ ಭವನದಲ್ಲಿ ಸಂಡೂರು ತಾಲೂಕಿನ ಎಂ ಬಸಾಪುರ ಗ್ರಾಮದ ರಂಗ ನೇಸರ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ -2022 ಉದ್ಘಾಟಿಸಿ ಮಾತನಾಡಿದರು.
—–
ಬಳ್ಳಾರಿ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಸಂವಾದ ಸಭೆ


BP News ಬಳ್ಳಾರಿ,ಆ.1-ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾ ಭವನದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್‍ರೊಂದಿಗೆ ಸಂವಾದ ಸಭೆಯನ್ನು ನಡೆಸಲಾಯಿತು.
ಈ ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಉಪ ಕಮಿಟಿಗಳು ಚೇರ್‍ಮನ್‍ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ನಗರದ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಉಪಸ್ಥಿತರಿದ್ದು ಸಮಸ್ಯೆಗಳನ್ನು ಹಂಚಿಕೊಂಡರು.
—–
ನಟನ ರಂಗಶಾಲೆಯಿಂದ ರಂಗ ತರಬೇತಿ


BP News ಬಳ್ಳಾರಿ,ಆ.1-ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ನಟನ ರಂಗಶಾಲೆಯಿಂದ ರಂಗಭೂಮಿ ಡಿಪೆÇ್ಲಮಾ 2022-23 ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ ನಡೆಯಲಿದೆ.
ಆಯ್ಕೆ ಪ್ರಕ್ರಿಯೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಸಂದರ್ಶನದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು. ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ(ಆಡಿಷನ್) ಆಗಸ್ಟ್ 07ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 01ರ ವರೆಗೆ ನಟನ ರಂಗಶಾಲೆಯಲ್ಲಿ ನಡೆಯಲಿದೆ. ಪ್ರವೇಶ ಶುಲ್ಕ ಮತ್ತು ಇತರ ಮಾಹಿತಿಗಳಿಗಾಗಿ ಸಂಪರ್ಕಿಸಿ: 7259537777, 9480468327, 9845595505.
——
ಓಬಿಸಿ ಪಟ್ಟಿಯಲ್ಲಿ ಸೇರಿಸಲು ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ


BP News ಬಳ್ಳಾರಿ,ಆ.1- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಎನ್.ತಿಪ್ಪಣ್ಣ, ಮಾಜಿ ಸಚಿವರು, ಸಮಾಜದ ಹಿರಿಯ ಮುಖಂಡರೂ ಆದ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹಾಗೂ ಉಪ ಪಂಗಡಗಳು ಒಳಗೊಂಡಂತೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಓಬಿಸಿ ಪಟ್ಟಿಯಿಂದ ಹೊರಗುಳಿದಿರುವುದರಿಂದ ಸಮುದಾಯದ ಜನರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಕಾರಣಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
——
ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಹಂಪಿಯಲ್ಲೀಗ ಎಲ್ಲೆಲ್ಲೂ ಸೊಬಗಿನ ವಾತಾವರಣ


BP News  ಹೊಸಪೇಟೆ,ಆ.1-ಐತಿಹಾಸಿಕ ಹಂಪಿ ಈಗ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಹಸಿರುಡುಗೆ ಹೊತ್ತು ಪ್ರಕೃತಿ ಪ್ರಿಯರ ಕಣ್ಣು ಕೋರೈಸುತ್ತಿರವ ಹಂಪಿ ನೋಡಲು ಇದೀಗ ಪ್ರವಾಸಿಗರ ದಂಡು ಹಂಪಿಯತ್ತ ದಾಪುಗಾಲು ಇಡುತ್ತಿದೆ.
ಸಂಜೆಯ ಹೊತ್ತು ಸೂರ್ಯಾಸ್ತ ನೋಡಲು ಹೇಮಕೂಟದ ಬಳಿ ತೆರಳಿದವರಿಗೆ ಅಚ್ಚರಿ ಮೂಡಿಸಿದೆ. ಸೂರ್ಯನ ಮುಳುಗುವ ಪಶ್ಚಿಮ ದಿಕ್ಕಿನ ಆಕಾಶದಲ್ಲಿ ಗೋಪುರ ಸ್ವರೂಪದ ಚಿತ್ರಾವಳಿ ದರ್ಶನ ಮಾಡಿ ಭಾವುಕರಾಗಿದ್ದಾರೆ. ಆ ಚಿತ್ರಾವಳಿಯನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ.
——
ಹೊಸಪೇಟೆಯಲ್ಲಿ ದೈವಸ್ವರೂಪ ತಾಳಿದ ಪುನೀತ್-ದರ್ಶನಕ್ಕೆ ಸಾವಿರಾರು ಅಭಿಮಾನಿಗಳ ಆಗಮನ


BP News ಹೊಸಪೇಟೆ,ಆ.1-ದೈವ ಸ್ವರೂಪ ತಾಳಿರುವ ಪುನೀತ್ ರಾಜಕುಮಾರ್ ಹೊಸಪೇಟೆಯ ಅಪ್ಪು ವೃತ್ತದಲ್ಲಿ ಅಭಿಮಾನಿ ದೇವರುಗಳು ಪುನೀತ್ ಪ್ರತಿಮೆಗೆ ಕೈಮುಗಿದು ಹೂ, ಹಣ್ಣು, ಕಾಯಿ, ದೀಪ, ಧೂಪ ಅರ್ಪಿಸುವ ಮೂಲಕ ತಮ್ಮ ಭಕ್ತಿ ಭಾವನೆಯನ್ನು ಮೆರೆಯುತ್ತಿದ್ದಾರೆ.
ಮಕ್ಕಳು, ಮಹಿಳೆಯರು ಮತ್ತು ಅನೇಕ ಜನ ಅಭಿಮಾನಿಗಳು ಪುನೀತ್ ಪುತ್ಥಳಿಗೆ ಬೃಹತ್ ಗಾತ್ರದ ಹೂಮಾಲೆ ಹಾಕಿ, ದೀಪ ಹಚ್ಚಿ ಕೈ ಮುಗಿದು ಅಭಿಮಾನ ತೋರಿಸುತ್ತಿರುವ ದೃಶ್ಯ ಇಲ್ಲಿ ಸರ್ವೇಸಾಮಾನ್ಯವಾಗಿದೆ.
—–

LEAVE A REPLY

Please enter your comment!
Please enter your name here