ಬಳ್ಳಾರಿ: ಸಂಗೀತ ನಾಟಕಗಳಿಂದ ಸಹೃದಯರ ಮನಸ್ಸಿಗೆ ಉಲ್ಲಾಸ- ಸಿದ್ದಲಿಂಗೇಶ ರಂಗಣ್ಣನವರ್

0
221

BP NEWS: ಬಳ್ಳಾರಿ: ಜುಲೈ.31:  ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗುತ್ತಾವೆ ಎಂದು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ತಿಳಿಸಿದರು.


ಶುಕ್ರವಾರದಂದು ಸಂಜೆ ಸ್ಥಳೀಯ ರಾಜಕುಮಾರ್ ರಸ್ತೆಯಲ್ಲಿರುವ ಸಾಂಸ್ಕೃತಿಕ ಸಮುಚ್ಚಯ ಹೊಂಗಿರಣ ಭವನದಲ್ಲಿ ಸಂಡೂರು ತಾಲೂಕಿನ ಎಂ ಬಸಾಪುರ ಗ್ರಾಮದ ರಂಗ ನೇಸರ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ -2022 ಮೀಳಾವು ನುಡಿಸುವುದ ಮೂಲಕ ಉದ್ಘಾಟಿಸಿ ಮಾತನಾಡಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರಲದೇವಿ ಕಾಲೇಜಿನ ಉಪನ್ಯಾಸಕರಾದ ಡಾ. ಟಿ ದುರುಗಪ್ಪ ಅವರು ಈಗಿನ ಜನರು ಮೊಬೈಲ್ ಮತ್ತು ಟಿ. ವಿ. ಗಳಿಗೆ ಮಾರುಹೋಗಿದ್ದರೆ. ಆದರೆ ಈ ಕಲೆ ಗ್ರಾಮೀಣ ಭಾಗದಲ್ಲಿ ಈಗಲೂ ಕಲೆಯನ್ನು ಮುಂದುವರೆಸುತ್ತಾ ಬಂದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗ ನೇಸರ ಸಂಸ್ಥೆಯ ಅಧ್ಯಕ್ಷ ಡಾ. ಕೆ. ಬಸಪ್ಪ ಅವರು ಮಾತನಾಡಿ ನಮ್ಮ ಸಂಸ್ಥೆಯು ಸಂಡೂರು ತಾಲೂಕಿನ ಅತ್ಯಂತ ಹಿಂದುಳಿದ ಗ್ರಾಮವಾದ ಎಂ.ಬಸಾಪುರದಲ್ಲಿದ್ದು ಇದು ಗ್ರಾಮೀಣ ಭಾಗದಲ್ಲಿ ದೇಶೀಯ ಕಲೆಯನ್ನು ಕಲಿಸುವ ಕೆಲಸ ಮಾಡುತ್ತಿದೆ. ಯುವಕರಲ್ಲಿ ಮತ್ತು ಮಕ್ಕಳಲ್ಲಿ ಕಲೆಗಳ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸುತ್ತದೆ ಎಂದು ತಿಳಿಸಿದರು.


ಅತಿಥಿಗಳಾಗಿ ಚಿತ್ರ ಕಲಾವಿದರಾದ ಮಂಜುನಾಥ್ ಗೋವಿಂದವಾಡ, ರಂಗ ನಿರ್ದೇಶಕರು ಮತ್ತು ಸಂಘಟಕರಾದ ಮಂಜು ಸಿರಿಗೆರಿ, ದಳವಾಯಿ ಶಂಕರಗಿರಿ ಇದ್ದರು.
ಸುಗಮ ಸಂಗೀತವನ್ನೂ ಪುರುಷೋತ್ತಮ್ ಚಿಕ್ಕಾಜಾಯಿಗನುರು. ಮತ್ತು ದೊಡ್ಡಬಸಪ್ಪ ಸೋಮಾಸಮುದ್ರ ತಂಡದವರಿಂದ ವಾಲಿ ನಾಟಕವನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಡಿ.ಜಿ.ತಿರುಮಲ ರಾಜಾಪುರ ಅವರು ಸ್ವಾಗತಿಸಿದರು. ಹುಲಿಯಪ್ಪ ದಮ್ಮೂರ್ ವಂದಿಸಿದರು ಇದರ ನಿರೂಪಣೆ ನಾಗರಾಜ್ ಸಂಜಿವರಯನಕೊಟೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಚಂದ್ರು ಬಸಾಪುರ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here