BP News Karnakata Super Fast 29-07-2022

0
113

ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರಿಂದ ಭೂಮಿಪೂಜೆ


BP News  ಬಳ್ಳಾರಿ,ಜು.29-ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ರಸ್ತೆ, ಒಳಚರಂಡಿ ಕಾಮಗಾರಿ, ಸ್ಟೀಲ್ ಬ್ರೀಡ್ಜ್ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಬೆಳಗಲ್ ರಸ್ತೆಯ ಎಚ್‍ಎಲ್‍ಸಿ ಕಾಲುವೆ ಹತ್ತಿರ 2.50 ಕೋಟಿ ರೂ.ವೆಚ್ಚದಲ್ಲಿ ಸ್ಟೀಲ್ ಬ್ರೀಡ್ಜ್ ನಿರ್ಮಾಣ, ಸೆಂಟ್ ಫಿಲೋಮಿನಾ ಶಾಲೆಯ ಹತ್ತಿರದ 1.70 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿ, ಈದ್ಗಾ ಮೈದಾನ ಹತ್ತಿರದ ರಸ್ತೆ ಕಾಮಗಾರಿ, ಕೋಟೆ ಪ್ರದೇಶದಲ್ಲಿ ರಸ್ತೆ ಸುಧಾರಣಾ ಕಾಮಗಾರಿ, ರೇಡಿಯೋ ಪಾರ್ಕ್‍ನ ಟಿಸಿಎಚ್ ತರಬೇತಿ ಶಾಲೆಯ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
—–
ಜಿಂದಾಲ್ ಕಾರ್ಖಾನೆಯಲ್ಲಿ ಕೋರೆಕ್ಸ್ ಅನಿಲ ಸೋರಿಕೆ ಅಣುಕು ಪ್ರದರ್ಶನ


BP News  ಬಳ್ಳಾರಿ,ಜು.29-ರಾಸಾಯನಿಕ ವಿಪತ್ತು ನಿರ್ವಹಣೆ ಅಂಗವಾಗಿ ಜಿಲ್ಲೆಯಲ್ಲಿರುವ ಅತಿ ಅಪಾಯಕಾರಿ ಕಾಖಾನೆಗಳಲ್ಲಿ ಸಂಭವಿಸಬಹುದಾದ ದುರಂತಗಳನ್ನು ತಡೆಗಟ್ಟಲು ಹಾಗೂ ಅಪಾಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜೆಎಸ್‍ಡಬ್ಲೂ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಕೋರೆಕ್ಸ್ (ಇಂಗಾಲದ ಮೋನಾಕ್ಸೈಡ್) ಸೋರಿಕೆಯ ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಬಳ್ಳಾರಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ,ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಹಾಗೂ ಮೆ.ಜೆಎಸ್‍ಡಬ್ಲೂ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
——
ಕಾರ್ಖಾನೆಯಿಂದ ಆಗುತ್ತಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಎಐಕೆಎಂಎಂಎಸ್ ಆಗ್ರಹ


BP News  ಬಳ್ಳಾರಿ,ಜು.29-ಪಿ.ಜಿ.ಎಂ ಮೆದು ಕಬ್ಬಿಣ ಕಾರ್ಖಾನೆಯ ಧೂಳಿನಿಂದ ಹರಗಿನಡೋಣಿ ಗ್ರಾಮದ ರೈತರ ಬೆಳೆಗಳಿಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರಕ್ಕಾಗಿ ಆಗ್ರಹಿಸಿ ಎಐಕೆಎಂಎಸ್‍ಎಸ್ ರೈತ ಸಂಘಟನೆಯಿಂದ ಕಾರ್ಖಾನೆಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ರೈತ-ಕೃಷಿ ಕಾರ್ಮಿಕ ಸಂಘಟನೆ ಬಳ್ಳಾರಿ ಜಿಲ್ಲಾ ಸಮಿತಿಯ ಗೋವಿಂದ್, ಗುರಳ್ಳಿ ರಾಜ ಇವರ ನೇತೃತ್ವದಲ್ಲಿ ಗ್ರಾಮದ ನಿವಾಸಿಗಳು, ರೈತರು ನೀರಾವರಿ ಭೂಮಿಗೆ ಒಂದು ಎಕರೆಗೆ ರೂ.10,000 ಹಾಗೂ ಒಣ ಭೂಮಿಗೆ ರೂ.5,000 ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
—-
ಹೆಣ್ಣು ಮಕ್ಕಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಎಐಎಂಎಸ್‍ಎಸ್ ಮನವಿ


BP News  ಬಳ್ಳಾರಿ,ಜು.29-ಈಶ್ವರಚಂದ್ರ ವಿದ್ಯಾಸಾಗರ್‍ಅವರ 131ನೇ ಸ್ಮರಣ ದಿನದ ಅಂಗವಾಗಿ ಹೆಣ್ಣು ಮಕ್ಕಳ ವಿವಿಧ ಬೇಡಿಕೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಹೆಣ್ಣುಮಕ್ಕಳ ಘನತೆ ಎತ್ತಿಹಿಡಿದ ಈಶ್ವರಚಂದ್ರ ವಿದ್ಯಾಸಾಗರ್ ಅವರ 131ನೇ ಸ್ಮರಣ ದಿನದ ಸಂದರ್ಭದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ(ಎ.ಐ.ಎಂ.ಎಸ್.ಎಸ್)ಯ ಜಿಲ್ಲಾಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವ ಸಲ್ಲಿಸಿದ ಪದಾಧಿಕಾರಿಗಳು ಬಳಿಕ ಡಿಸಿ ಅವರನ್ನು ಭೇಟಿಯಾಗಿ ಮಹಿಳೆಯರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
—-
ಶಿಕ್ಷಣ ಉಳಿಸಿ ದಿನವಾಗಿಸಲು ಬೃಹತ್ ಪ್ರತಿಭಟನಾ ಮೆರವಣಿಗೆ


BP News  ಬಳ್ಳಾರಿ,ಜು.29-ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ಸ್ಮರಣ ದಿನ ಅಂಗವಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ದಿನವನ್ನಾಗಿ ಇಂದು ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿಭವನದಿಂಯಂದ ಬೃಹತ್ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಈಡಿಗಾ ಕಾಂಪ್ಲೇಕ್ಸ್ ದಿಂದ ರಾಯಲ್ ಸರ್ಕಲ್, ಮಿನಾಕ್ಷಿ ವೃತ್ತ, ಸಿಟಿ ಬಸ್ ನಿಲ್ದಾಣದಿಂದ ಮುಖಾಂತರ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಯಿತು.
—–
ಕಂಪ್ಲಿಯಲ್ಲಿ ಬಿಇಓ ಕಚೇರಿ ಸ್ಥಾಪಿಸುವಂತೆ ಮೋಹನ್ ಕುಮಾರ್ ದಾನಪ್ಪ ಮನವಿ


BP News ಬಳ್ಳಾರಿ,ಮು.29-ಬೆಂಗಳೂರಿನ ವಿಧಾನ ಸೌಧದಲ್ಲಿ ಬಳ್ಳಾರಿ ಜಿಲ್ಲೆಯ ನೂತನ ಕಂಪ್ಲಿ ತಾಲೂಕು ಕೇಂದ್ರ ಸ್ಥಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಓ) ಕಚೇರಿಯನ್ನ ಸ್ಥಾಪಿಸುವಂತೆ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಬಿ.ಸಿ.ನಾಗೇಶ್ ರವರಿಗೆ ಕಂಪ್ಲಿ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ನಿನ್ನೆಯ ದಿನ ಮನವಿ ಸಲ್ಲಿಸಿದರು.
ನೂತನ ತಾಲೂಕು ಕೇಂದ್ರವಾದ ಕಂಪ್ಲಿ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸಬೇಕು. ಕಛೇರಿ ಸ್ಥಾಪನೆಗೆ ಸರ್ಕಾರಿ ಸ್ಥಳ, ಸರ್ಕಾರಿ ಕಟ್ಟಡಗಳು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಕಟ್ಟಡವನ್ನು ಬಾಡಿಗೆ ರೀತಿ ಪಡೆದುಕೊಂಡು ಕಛೇರಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
—–

LEAVE A REPLY

Please enter your comment!
Please enter your name here