ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ.

0
127

BP NEWS: ಕೊಪ್ಪಳ: ಜುಲೈ.27:  ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವರ ಅಧ್ಯಕ್ಷತೆಯಲ್ಲಿ ಪಶುಸಂಗೋಪನೆ ಇಲಾಖೆ ಯ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಗಿತ್ತು.

ಸದರಿ ಸಭೆಯಲ್ಲಿ ಸಂಜೀವಿನಿ ಯೋಜನೆಯ 2022-23ನೇ ಸಾಲಿನ ಕೃಷಿ ಜೀವನೋಪಾಯದ ಚಟುವಟಿಕೆಗಳ ತಾಲೂಕು ವಾರು ಗುರಿಯನ್ನು ಸಭೆಗೆ ಮಂಡಿಸಲಾಯಿತ್ತು, ಮಾನ್ಯರು ಎಲ್ಲಾ ತಾಲೂಕುಗಳ ಸಹಾಯಕ ನಿರ್ದೇಶಕರಗಳಿಗೆ ಸಂಜೀವಿನಿ ಯೋಜನೆಯಡಿಯಲ್ಲಿ ಆಯ್ಕೆಯಾಗಿರು ಎಲ್ಲಾ ಪಶು ಸಖಿಯರಿಗೆ ಇಲಾಖೆಯಲ್ಲಿ ಅನುಷ್ಠಾನಗೊಳ್ಳಿಸುತ್ತಿರುವಂತಹ ಎಲ್ಲಾ ಚಟುವಟಿಕೆಗಳಲ್ಲಿ ತೋಡಗಿಸಿ ಕೊಂಡು ಸ್ವ-ಸಹಾಯ ಗುಂಪಿನ ಸದಸ್ಯರುಗಳಿಗೆ ಹೈನುಗಾರಿಕೆ, ಕುರಿ ಹಾಗೂ ಕೋಳಿ ಸಾಕಾಣಿಕೆ ಸಹಕರಿಸಲು ತಿಳಿಸಿದರು.


ಹಾಗೂ ಪ್ರತಿ ತಾಲೂಕಿನಿಂದ ಆಯ್ಕೆ ಮಾಡಿದಂತಹ 2 ಸ್ವ-ಸಹಾಯ ಗುಂಪಿನ ಸದಸ್ಯರುಗಳಿಗೆ ಕೋಳಿ ಸಾಕಾಣಿಕೆ ತರಬೇತಿಯನ್ನು ನೀಡಿ ಇಲಾಖೆ, MGNREG ಹಾಗೂ NRLM ನ ಒಗ್ಗೂಡಿಸುವಿಕೆ ಮೂಲಕ ಮೊಟ್ಟೆ ಉತ್ಪಾದನೆ ಮಾಡಿಸಲು ಸೂಚಿಸಿದರು.

ಸದರಿ ಸಭೆಯಲ್ಲಿ ಯೋಜನಾ ನಿರ್ದೇಶಕರು ಕೊಪ್ಪಳ, ಉಪನಿರ್ದೇಶಕರು ಪಶುಸಂಗೋಪನೆ ಇಲಾಖೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ 7 ತಾಲೂಕಿನ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ & ತಾಲೂಕು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here