ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಅರುಣ್ ಭೂಪಾಲ್ ಆಯ್ಕೆ
BP News ಬಳ್ಳಾರಿ,ಜು.27- ಕರ್ನಾಟಕ ಪತ್ರಕರ್ತರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಅರುಣ್ ಭೂಪಾಲ್ ಆಯ್ಕೆಯಾಗಿದ್ದಾರೆ.
ಸ್ನೇಹ ಸಂಪುಟದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಒಮ್ಮತದಿಂದ ಅರುಣ್ ಭೂಪಾಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹೊಸಪೇಟೆ, ಕುರುಗೋಡು, ಸಂಡೂರು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಸಂಘದ ಸದಸ್ಯರು ಇದ್ದರು.
——
ಕಾರ್ಗಿಲ್ ವಿಜಯೋತ್ಸವ ದಿನಾಚರಣೆ-ಕ್ಯಾಂಡಲ್ ಹಿಡಿದು ವೀರಯೋಧರ ಸ್ಮರಣೆ
BP News ಬಳ್ಳಾರಿ,ಜು.27-ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನಗರ ಘಟಕದ ವತಿಯಿಂದ ಕಾರ್ಗಿಲï ವಿಜಯೋತ್ಸವ ನಿಮಿತ್ತ ಅಮರ್ ಜವಾನ್ ಪುತ್ತಳಿ ಬಳಿ ವೀರಯೋಧರನ್ನು ಸ್ಮರಿಸುವ ಮೇಣದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಕ್ಯಾಂಡಲ್ ಮಾರ್ಚ್ ಮೆರವಣಿಗೆಯಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಯುವಕರು ಒಳಗೊಂಡಂತೆ ಕಾರ್ಗಿಲ್ ವಿಜಯೋತ್ಸವ ಹಾಗೂ ಯೋಧರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ವೀರಶೇಖರ್ ರೆಡ್ಡಿ, ಬಳ್ಳಾರಿ ನಗರ ಅಧ್ಯಕ್ಷರಾದ ಕೆಬಿ ವೆಂಕಟೇಶ್ವರಲು ಇದ್ದರು.
—–
ಶ್ರೀ ಕೊಲ್ಲಾಪುರಮ್ಮ ದೇವಿಯ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ 1 ಲಕ್ಷ ದೇಣೀಗೆ
BP News ಬಳ್ಳಾರಿ,ಜು.27-ಗ್ರಾಮಾಂತರ ಕ್ಷೇತ್ರದ ಹೊಸ ಎರ್ರಗುಡಿಯಲ್ಲಿ ಕೊಲ್ಲಾಪುರದಮ್ಮ ದೇವಿ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಶಾಸಕ ಬಿ.ನಾಗೇಂದ್ರ ಅವರು 1 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದರು.
ಶಾಸಕರ ಆಪ್ತರಾದ ಅಣ್ಣ ನಾಗರಾಜ್, ಹೊಸ ಯರ್ರಗುಡಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಎನ್.ಚಂದ್ರಪ್ಪ, ಹೊಸೂರ್ ರವೀಂದ್ರನಾಥ್, ಜಾನಪ್ಪ, ಗಾದಿಲಿಂಗ, ತಿರುಮಲ, ಗಡಂ ಗೋವಿಂದರಾಜುಲು, ಗಡಂ ಶ್ರೀಧರ್, ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ನಾಗರಾಜ್, ಎ.ಸುರೇಶ್ ಇನ್ನು ಅನೇಕ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
—–
3ನೇ ದಿನಕ್ಕೆ ಕಾಲಿರಿಸಿದ ಮಾದಿಗ ದಂಡೋರ ಹೋರಾಟ-ನ್ಯಾ.ಸದಾಶಿವ ಆಯೋಗ ವರದಿ ಜಾರಿಗೊಳಿಸಲು ಆಗ್ರಹ
BP News ಬಳ್ಳಾರಿ,ಜು.27-ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರ ಆದ್ಯತೆ ಮೇರೆಗೆ ಜಾರಿಗೊಳಿಸುವುದು ಹಾಗೂ ಬೇಡ ಜಂಗಮರನ್ನು ಯಾವುದೇ ಕಾರಣಕ್ಕೂ ಎಸ್‍ಸಿ ಜಾತಿ ಪಟ್ಟಿಗೆ ಸೇರಿಸಕೂಡದು ಎಂದು ಆಗ್ರಹಿಸಿ ಹಮ್ಮಿಕೊಂಡಿರುವ ಮಾದಿಗ ಹೋರಾಟ ಸಮಿತಿಯ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದಿಗೆ ಮೂರನೇ ದಿನಕ್ಕೆ ಕಾಲಿರಿಸಿದೆ.
ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಗೌರವಾಧ್ಯಕ್ಷ ಗಿರಿಮಲ್ಲಪ್ಪ, ರಾಜ್ಯ ಖಜಾಂಚಿ ಎಕೆ ಹುಲುಗಪ್ಪ ನೇತೃತ್ವದಲ್ಲಿ ಈ ಧರಣಿ ಸತ್ಯಾಗ್ರಹ ಮುಂದುವರಿದಿದೆ..
——-
ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಶಾಂತಿಯುತ ಸತ್ಯಾಗ್ರಹ
BP News ಬಳ್ಳಾರಿ,ಜು.27-ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣವನ್ನು ವಿರೋಧಿಸಿ ಇಂದು ಕಂಟೋನ್ಮೆಂಟ್ ನ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಾಂತಿಯುತ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಅನುμÁ್ಠನ ನಿರ್ದೇಶನಾಲಯವು ಸಮನ್ಸ್ ಜಾರಿ ಮಾಡಿರುವುದನ್ನು ಖಂಡಿಸಿ ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷ ಜಿಎಸ್ ಮಹಮ್ಮದ್ ರಫೀಕ್ ಅವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿದ ಕಾಂಗ್ರೆಸ್ ಬಿಜೆಪಿ ಸರ್ಕಾರದ ನಿಲುವನ್ನು ಬಲವಾಗಿ ವಿರೋಧಿಸಲಾಯಿತು.
—-
ಹೆಚ್ಚುವರಿ ಬಸ್ ಗಾಗಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
BP News ಬಳ್ಳಾರಿ,ಜು.27-ತಾಲೂಕಿನ ಮೋಕಾ ಶಾಲೆಗಳ ವಿದ್ಯಾರ್ಥಿಗಳು ಶಾಲಾ-ಕಾಲೇಜು ವೇಳೆ ಹೆಚ್ಚುವರಿ ಬಸ್‍ಗಳನ್ನು ಓಡಿಸುವಂತೆ ಒತ್ತಾಯಿಸಿ ಬಸ್ ತಡೆದ ಪ್ರತಿಭಟನೆ ನಡೆಸಿದರು.
ಮೋಕಾದ ರಸ್ತೆಯಲ್ಲಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಒಳಗೊಂಡಂತೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಈ ಪ್ರತಿಭಟನೆ ನಡೆಸಿದ್ದರಿಂದ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಆಗಿತ್ತು. ಬಳಿಕ ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿಗಳು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
——