ನಮ್ಮ ಬೇಡಿಕೆ ಈಡೇರಿಸಿ-ಬಿಸಿಯೂಟ ನೌಕರರಿಂದ ಜಿಪಂ ಕಚೇರಿ ಎದುರು ಪ್ರತಿಭಟನೆ
BP News ಬಳ್ಳಾರಿ,ಜು.23-ಬಿಸಿಯೂಟ ಕಾರ್ಮಿಕರಿಗೆ, ಇಲಾಖೆ ನೀಡಿರುವ ಕೆಲಸವನ್ನು ಮಾಡಲು ಮಾತ್ರ ಅವಕಾಶ ನೀಡಬೇಕು. ಹೆಚ್ಚಿನ ಕೆಲಸದ ಹೊರೆ ನೀಡದೇ ಅಕ್ಷರ ದಾಸೋಹ ಕಾರ್ಮಿಕರು ಗೌರವಯುತ ಜೀವನ ನಡೆಸಲು ಯೋಗ್ಯವಾದ ವೇತನ ನಿಗದಿ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘವು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‍ನೊಂದಿಗೆ ಬಿಸಿಯೂಟ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
—–
ರೈತ ಸಾಲಗಾರನಲ್ಲ-ಸರ್ಕಾರವೇ ಹೊಣೆ;ಆರ್.ಮಾಧವರೆಡ್ಡಿ ಕರೂರು
BP News ಬಳ್ಳಾರಿ,ಜು.23-ರೈತ ಸಾಲಗಾರನಲ್ಲ. ರೈತರಿಗೆ ಯಾವುದೇ ಸೌಲಭ್ಯ ನೀಡದೇ ಇರುವುದರಿಂದ ರೈತರ ಜೀವನ ಹಾಳಾಗಲು ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಕರೂರು ಅವರು ತಿಳಿಸಿದ್ದಾರೆ.
ಕಳೆದ 26 ದಿನಗಳಿಂದ ಇಲ್ಲಿನ ಗಾಂಧಿನಗರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು ಕಳೆದ 26 ದಿನಗಳಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡಿದರು.
——-
ಬಳ್ಳರಿಯಲ್ಲಿ ಶ್ರೀ ಕುಮಾರಸ್ವಾಮಿ ದೇವಸ್ಥಾನದ ಆಡಿ ಕೃತಿಕ ಮಹೋತ್ಸವ
BP News ಬಳ್ಳಾರಿ,ಜು.23-ನಗರದ ಕನಕದಾಸ ವೃತ್ತದ ಅಗ್ನಿಶಾಮಕ ಠಾಣೆ ಬಳಿ ಇರುವ ಶ್ರೀ ಕುಮಾರಸ್ವಾಮಿ ದೇವಸ್ಥಾನದಲ್ಲಿ ಆಡಿ ಕೃತಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. .
ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಮಹಾಪಂಚಾಮೃತ ಅಭಿμÉೀಕ ಪೂಜೆ ನಿಮಿತ್ತ ದೇವಸ್ಥಾನವನ್ನು ಹೂವಿನಿಂದ ಅಲಂಕೃತಗೊಳಿಸಲಾಗಿತ್ತು. ಭಕ್ತರ ಸಹಯೋಗದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ 35ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯ ವಿ ಶ್ರೀನಿವಾಸುಲು ಮಿಂಚು ಪಾಲ್ಗೊಂಡಿದ್ದರು. .
——-
ಶಾಲೆಗಳು ಸಬಲೀಕರಣವಾದರೆ ದೇಶ ಸದೃಢವಾಗುತ್ತದೆ-ಮೆಹತಾಬ್
BP News ಬಳ್ಳಾರಿ,ಜು.23-ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಮಾದಿರಯಲ್ಲಿಯೇ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿದರೆ ಸದೃಢ ದೇಶವನ್ನು ಕಟ್ಟಲು ಸಾಧ್ಯ ಎಂದು ಮುಖ್ಯ ಶಿಕ್ಷಕರಾದ ಮೆಹತಾಬ್ ತಿಳಿಸಿದರು
ಮೋಕಾದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 600 ಮಕ್ಕಳಿಗೆ ಟೈ ಮತ್ತು ಬೆಲ್ಟ್ ವಿತರಿಸಿದ ಅಭಯ ಫೌಂಡೇಶನ್ ಮೆಚ್ಚುಗೆಗೆ ಪಾತ್ರವಾಯಿತು ಎಂದರು.
—–
ರಾಷ್ಟ್ರೀಯ ಫೆಸ್ಟ್ ಸ್ಪರ್ಧೆಯಲ್ಲಿ ಐಸ್ ಬ್ರೇಕಿಂಗ್ ಪಡೆದ ವಿದ್ಯಾರ್ಥಿಗಳು
BP News ಬಳ್ಳಾರಿ,ಜು.23-ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಅಲ್ಲಂ ಕರಿಬಸಪ್ಪ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್ ಎಂಬಿಎ ಕಾಲೇಜಿನಲ್ಲಿ— ಪಾಂಚಜನ್ಯ-2022 ಒಂದು ದಿನದ ರಾಷ್ಟ್ರೀಯ ಮಟ್ಟದ ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ಫೆಸ್ಟ್ ಆಯೋಜಿಸಲಾಗಿತ್ತು.
ಮ್ಯಾನೇಜ್ಮೇಂಟ್ ಪೆಸ್ಟ್ ಸ್ಪರ್ಧೆಯ ಐಸ್ ಬ್ರೇಕಿಂಗ್ ನಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನವನ್ನು ಬಳ್ಳಾರಿಯ ಶ್ರೀಗುರು ತಿಪ್ಪೇರುದ್ರ ಕಾಲೇಜ್ ವಿದ್ಯಾರ್ಥಿಗಳು, ದ್ವಿತೀಯ ಸ್ಥಾನವನ್ನು ಶ್ರೀ ಮೇಧ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.
——
ಜುಲೈ 26 ರಂದು ರೇಣುಕಾ ಎಲ್ಲಮ್ಮ ಪ್ರಥಮ ಜಾತ್ರಾ ಮಹೋತ್ಸವ
BP News ಬಳ್ಳಾರಿ,ಜು.23-ತಾಲೂಕಿನ ಸಂಗನಕಲ್ಲು ರಸ್ತೆಯಲ್ಲಿರುವ ಸುಬ್ಬಾರಾವ್ ಕ್ಯಾಂಪ್ ನಲ್ಲಿ ಶ್ರೀ ರೇಣುಕಾ ಎಲ್ಲಮ್ಮ ದೇವಿಯ ಪ್ರಥಮ ವಾರ್ಷಿಕ ಜಾತ್ರಾ ಮಹೋತ್ಸವ ಜುಲೈ 26 ರಂದು ಜರುಗಲಿದೆ.
ಶ್ರೀ ರಕ್ಷಾ ಸರ್ವಧರ್ಮ ಪೀಠದಿಂದ ಜು.25 ರಿಂದ 30ರವರೆಗೆ ಈ ಜಾತ್ರಾ ಮಹೋತ್ಸವ ಜರುಗಲಿದೆ. ಜು.25 ರಂದು ಬೆಳಿಗ್ಗೆ 11 ಗಂಟೆಗೆ ಸಾಮೂಹಿಕ ಲಲಿತ ಸಹಸ್ರ ನಾಮ, ಸಂಜೆ 5 ಗಂಟೆಗೆ ಉಚ್ಛಾಯ ಪಲ್ಲಕ್ಕಿ ಉತ್ಸವ ಜರುಗಲಿದೆ. ಜು.26 ರಂದು ಸಂಜೆ 5 ಗಂಟೆಗೆ ಆಷಾಢ 4ನೇ ಮಂಗಳವಾರ ರಥೋತ್ಸವ, ಪಲ್ಲಕ್ಕಿ ಉತ್ಸವ, ಕಳಸ ಹಾಗೂ ಕುಂಭ, ವಾದ್ಯ, ವೈಭವಗಳೊಂದಿಗೆ ಜರುಗಲಿದೆ. ಬಳಿಕ ಸಾಂಸ್ಕøತಿಕ ಹಾಗೂ ಕೋಲಾಟಗಳು ನಡೆಯಲಿವೆ.
——