BP News Karnataka Super Fast 20-07-2022

0
110

ವಿವಿಧ ಕಾಮಗಾರಿಗಳ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು


BP News ಬಳ್ಳಾರಿ,ಜು.20-ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ನಗರದ ನಲ್ಲಚೇರವು ಪ್ರದೇಶದ 13 ಎಕರೆ ಪ್ರದೇಶದಲ್ಲಿ 1.85 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನಲ್ಲಚೆರವು ಕೆರೆ ಕಾಮಗಾರಿ, 7.5 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನಡೆಯುತ್ತಿರುವ ಹಾಕಿ ಕ್ರೀಡಾಂಗಣ, ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅನೇಕ ಸಲಹೆಸ-ಸೂಚನೆಗಳನ್ನು ಸಂದರ್ಭದಲ್ಲಿ ನೀಡಿದರು.
——
ವಾಸ್ತುಶಿಲ್ದ ಹಂಪಿಯ ವಿವಿಧ ಸ್ಮಾರಕಗಳು ವೀಕ್ಷಿಸಿದ ಡಿಸಿ ಅನಿರುದ್ಧ ಶ್ರವಣ್


BP News  ಹೊಸಪೇಟೆ(ವಿಜಯನಗರ),ಜು.20-ಹಂಪಿ ವಿಶ್ವಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ ಇಂಟರ್ನ್‍ಶಿಫ್‍ಗೆ ಆಗಮಿಸಿದ್ದ ಮಧ್ಯಪ್ರದೇಶದ ಭೋಪಾಲ್ ವಿಶ್ವವಿದ್ಯಾಲಯದ ಸಂರಕ್ಷಣಾ ವಾಸ್ತುಶಿಲ್ಪ ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಹಂಪಿಯ ವಿಜಯ ವಿಠ್ಠಲ ಮಂದಿರ, ವಿರೂಪಾಕ್ಷೇಶ್ವರ ದೇವಸ್ಥಾನ,ರಾಮ-ಲಕ್ಷ್ಮಣ ದೇವಸ್ಥಾನ, ಕಮಲ ಮಹಲ್ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.
——
ಜನಸಂಖ್ಯಾ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ :ನ್ಯಾ.ಸತೀಶ್ ಜೆ.ಬಾಳಿ

ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
——-
ಬಳ್ಳಾರಿ ಬಿಸಿನೆಸ್ ಕಾಲೇಜಿಗೆ ಚಾಂಪಿಯನ್‍ಶಿಪ್ ಟ್ರೋಫೀ


BP News  ಬಳ್ಳಾರಿ,ಜು.20-ಇಲ್ಲಿನ ಪ್ರತಿಷ್ಠಿತ ಬಳ್ಳಾರಿ ಬಿಸಿನೆಸ್ ಕಾಲೇಜಿನ ವಿದ್ಯಾರ್ಥಿಗಳು ಜುಲೈ 15 ಮತ್ತು 16ರಂದು ದಾವಣಗೆರೆಯ ಬಾಪೂಜಿ ಬಿ ಸ್ಕೂಲ್ 25ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ “ಆಕ್ಟೋಗನ್ 2022” ಮ್ಯಾನೇಜ್‍ಮೆಂಟ್ ಫೆಸ್ಟ್ ನಲ್ಲಿ ಭಾಗವಹಿಸಿ ಚಾಂಪಿಯನ್‍ಶಿಪ್ ಟ್ರೋಫಿಯನ್ನು ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
——-
ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆ- ಎಸ್‍ಯುಸಿಐನಿಂದ ಪ್ರತಿಭಟನೆ


BP News  ಬಳ್ಳಾರಿ,ಜು.20-ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿರುವ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪ್ರತಿಭಟನೆ ನಡೆಸಿದೆ.
ಧಾನ್ಯಗಳ ಮೇಲಿನ ಜಿಎಸ್‍ಟಿಯಿಂದ ಬಡವರು ಮತ್ತು ಮಧ್ಯಮ ವರ್ಗದವರು ದಿವಾಳಿ ಯಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಎಸ್‍ಯುಸಿಐ ಮುಖಂಡರು ಹಳೆಯ ಬಸ್ ನಿಲ್ದಾಣದ ಬಳಿ ಪ್ರತಿಭಟನೆಯನ್ನು ನಡೆಸಿದರು.
——-
ಆಹಾರ ಪದಾರ್ಥಗಳ ಮೇಲೆ ತೆರಿಗೆ ಹಿನ್ನೆಲೆ-ಮಾರ್ಪಾಡು ಜಾಗೃತಿ ಶಿಬಿರ


BP News ಬಳ್ಳಾರಿ,ಜು.20-ವರ್ತಕರು, ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಆಹಾರ ಪದಾರ್ಥಗಳ ಮೇಲೆ ಆಗಿರುವ ತೆರಿಗೆ ಮಾರ್ಪಾಡು ಜಾಗೃತಿ ಶಿಬಿರ ಹಮ್ಮಿಕೊಳ್ಳುವುದು ತುಂಬ ಅವಶ್ಯಕವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸರಾವ್ ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಆಹಾರ ಪದಾರ್ಥಗಳ ಮೇಲೆ ಆಗಿರುವ ತೆರಿಗೆ ಮಾರ್ಪಾಡು ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯಗಾರದಲ್ಲಿ ಬರುವ ಸಂಶಯದ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಿತಿಳಿದು ಕೊಳ್ಳಬಹುದು ಎಂದು ತಿಳಿಸಿದರು.
——-

 

 

 

 

 

 

LEAVE A REPLY

Please enter your comment!
Please enter your name here