BP NEWS: ರಾಯಚೂರು: ಜುಲೈ.19: ತಾಲೂಕಿನ ತಲಮಾರಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಳೆದ ವರ್ಷ 100ದಿನಗಳು ಪೂರೈಸಿದ 54 ಜನ ಕೂಲಿಕಾರರ ಕುಟುಂಬದವರಿಗೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಅವರು ಶರ್ಟ್ ಮತ್ತು ಕ್ಯಾಪ್‌ಗಳನ್ನು ವಿತರಣೆ ಮಾಡಿದರು.
ಈ ವೇಳೆ ಮಾತನಾಡಿ, ಅವರು ನರೇಗಾ ಯೋಜನೆಯನೆಯು ಗ್ರಾಮೀಣ ಸಮುದಾಯವನ್ನು ಅರ್ಥಿಕವಾಗಿ ಸದೃಡ ಪಡಿಸುವಲ್ಲಿ ಬಹು ಮುಖ್ಯವಾದ ಯೋಜನೆಯಾಗಿದೆ. ಇಂತಹ ಯೋಜನೆಯಲ್ಲಿ ಸ್ಥಳೀಯವಾಗಿ ಸ್ವ-ಗ್ರಾಮದಲ್ಲಿ 100ದಿನಗಳ ಉದ್ಯೋಗ ಪಡೆದುಕೊಳ್ಳುವ ವಿಫಲು ಅವಕಾಶಗಳಿವೆ. ಇದರ ಲಾಭ ಪಡೆದುಕೊಂಡು ನೆಲ, ಜಲ ಸಂರಕ್ಷಣೆ ಮಾಡಿ ಗ್ರಾಮಾಭಿವೃದ್ಧಿ ಪೂರಕವಾಗಿರಬೇಕೆಂದು ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರು, ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಒ, ಜಿಲ್ಲಾ ಹಾಗೂ ತಾಲೂಕ ಐಇಸಿ ಸಂಯೋಜಕರು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಡಿಇಒ, ಕರವಸೂಲಿಗಾರರು, ಗ್ರಾಮ ಕಾಯಕ ಮಿತ್ರ ಮತ್ತು ಇತರರು ಭಾಗವಹಿಸಿದ್ದರು.