BP News Karnataka Super Fast 19-07-2022

0
175

ಆ.15 ರಂದು ಹೊಸಪೇಟೆಯಲ್ಲಿ ಬೃಹತ್ ಸಾಂಸ್ಕøತಿಕ ಕಾರ್ಯಕ್ರಮ


BP News ಹೊಸಪೇಟೆ(ವಿಜಯನಗರ),ಜು.19-ಅಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ದೇಶದ ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಬೃಹತ್ ಸಾಂಸ್ಕøತಿಕ ಕಾರ್ಯಕ್ರಮ ಆ.15ರಂದು ಸಂಜೆ 6ಕ್ಕೆ ವಿಜಯನಗರದ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
——
8 ವರ್ಷದ ಹಿಂದೆ ಗಲಾಟಿ ಮಾಡಿಕೊಂಡಿದ್ದು ಸಾಕು-ನಮಗೆ ಮೊಹರಂ ಹಬ್ಬದ ಆಚರಣೆ ಬೇಕು


BP News ಬಳ್ಳಾರಿ,ಜು.19-ಸಿರುಗುಪ್ಪದ ಕರೂರು ಗ್ರಾಮದಲ್ಲಿ ಮೊಹರಂ ಹಬ್ಬದ ದಿನದಂದು ಹೊಡೆದಾಡಿಕೊಂಡು ಪೊಲೀಸ್ ಮತ್ತು ಕೋರ್ಟ್‍ಗೆ ಸುತ್ತಾಡಿಕೊಂಡಿದ್ದ ಜನರು ಇದೀಗ ತಮ್ಮ ತಪ್ಪಿನ ಅರಿವಾಗಿ ಮತ್ತೆ ಮೊಹರಂ ಹಬ್ಬ ಆಚರಣೆಗೆ ಅನುಮತಿ ನೀಡುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕರೂರು ಗ್ರಾಮದ ಹಲವಾರು ಮುಖಂಡರು ಜಿಲ್ಲಾಡಳಿತ ಸೂಚಿಸುವ ಎಲ್ಲ ನಿಯಮಗಳನ್ನೂ ಬದ್ಧತೆಯಿಂದ ಪಾಲಿಸುತ್ತೇವೆ. ಹೀಗಾಗಿ, ಮೊಹರಂ ಹಬ್ಬ ಆಚರಣೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದರು.
——-
ಸೇವೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ: ಡಿಎಚ್‍ಒ ಡಾ.ಜರ್ನಾಧನ


BP News ಬಳ್ಳಾರಿ,ಜು.19-ಇಪ್ಸಿಲಾನ್ ಕಾರ್ಬನ್ ಕಾರ್ಖಾನೆಯು ಸಾಂಸ್ಥಿಕ ಪರಿಸರ ಜವಾಬ್ದಾರಿ (ಸಿಇಆರ್) ಅಡಿಯಲ್ಲಿ ಒದಗಿಸಿರುವ ಸಂಚಾರಿ ಆರೋಗ್ಯ ಘಟಕದ ಮೂಲಕ ಸಮುದಾಯದ ಆರೋಗ್ಯಕ್ಕಾಗಿ ಒದಗಿಸುವ ಸೇವೆಗಳನ್ನು ಸುಲ್ತಾನಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ತಿಳಿಸಿದರು.
ಇಪ್ಸಿಲಾನ್ ಕಾರ್ಬನ್ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆಯ ಸಿ.ಎಸ್.ಆರ್ ಅನುದಾನದ ಅಡಿಯಲ್ಲಿ ಒದಗಿಸಲ್ಪಟ್ಟ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
——-
ಬಳ್ಳಾರಿ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಕಲಬೆರಕೆ ಧಾನ್ಯ ವಿತರಣೆ-ಜನರಲ್ಲಿ ಅಸಮಾಧಾನ


BP News ಬಳ್ಳಾರಿ,ಜು.19-ಇಲ್ಲಿನ ಕೌಲ್ ಬಜಾರ್ ರೇಡಿಯೋ ಪಾರ್ಕ್‍ನ ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯಗಳನ್ನು ಕಲಬೆರಕೆ ಮಾಡಿ ವಿತರಿಸಲಾಗುತ್ತಿದ್ದು, ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯವೈಖರಿ ಗಮನಿಸಿದರೆ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಯಾವುದೇ ಭಯವಿಲ್ಲದಂತಾಗಿದೆ. ಬೇಕಾಬಿಟ್ಟಿಯಾಗಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದಾರೆ ಎಂದು ನಾಗರಿಕರು ಮಾತನಾಡಿಕೊಳ್ಳುತ್ತಿದ್ದಾರೆ.
——-
ಬಳ್ಳಾರಿ ರೇಲ್ವೆ ನಿಲ್ದಾಣ ನಿರ್ವಹಣೆಗೆ ಉತ್ತಮ ಪ್ರಶಸ್ತಿ


BP News ಬಳ್ಳಾರಿ,ಜು.19-ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ನಿಲ್ದಾಣಗಳ ಉತ್ತಮ ನಿರ್ವಹಣೆಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಬಳ್ಳಾರಿ ರೈಲ್ವೆ ನಿಲ್ದಾಣ 2021-22 ನೇ ಸಾಲಿಗೆ ಈ ಪ್ರಶಸ್ತಿಗೆ ಅರ್ಹತೆ ಪಡೆದಿದೆ.
ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಶೇμÁದ್ರಿ ಅವರಿಗೆ ಪ್ರಶಸ್ತಿ ನೀಡಿರುವುದು ಸಂತಸದ ವಿಷಯವಾಗಿದೆ ಎಂದು ರೇಲ್ವೆ ಕ್ರಿಯಾ ಸಮಿತಿ ಪ್ರತಿಕ್ರಿಯೆ ವ್ಯಕ್ತಪಡಿಸಿ ಶೇಷಾದ್ರಿ ಅವರನ್ನು ಅಭಿನಂದಿಸಿದೆ.
——-

LEAVE A REPLY

Please enter your comment!
Please enter your name here