ರಾಯಚೂರು: ಕೆರೆಗಳ ಪುನಶ್ಚೇತನಕ್ಕೆ ವಿಶೇಷ ಒತ್ತು: ಜಂಟಿ ಕಾರ್ಯದರ್ಶಿ ಸುಭೋದ್ ಯಾದವ್

0
100

BP NEWS: ರಾಯಚೂರು: ಜುಲೈ.16:  ರಾಜ್ಯದ ಎಲ್ಲ ಕೆರೆಗಳ ಪುನಶ್ಚೇತನ ಕೇಂದ್ರ ಸರಕಾರ ವಿಶೇಷ ಒತ್ತು ನೀಡಿ ಅನುದಾನ ನೀಡಿದ್ದು, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಎಂದು ಕೇಂದ್ರ ಜಲಶಕ್ತಿ ಇಲಾಖೆ ಜಂಟಿ ಕಾರ್ಯದರ್ಶಿ ಸುಭೋದ್ ಯಾದವ್ ಅವರು ಹೇಳಿದರು.

ಅವರು ಜು.16ರ ಶನಿವಾರ ದಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಸರಕಾರಿ ಶಾಲೆಯಲ್ಲಿ ನಿರ್ಮಾಣವಾದ ಸಾರ್ವಜನಿಕ ಗ್ರಂಥಾಲಯದ ಮುಂದೆ ಸಸಿಯನ್ನು ನೆಟ್ಟು ಗ್ರಂಥಾಲಯವನ್ನು ವಿಕ್ಷಣೆ ಮಾಡಿದರು, ನಂತರ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ವಿಕ್ಷೀಸಿದರು.

ತದನಂತರ ಮಸರಕಲ್ ಗ್ರಾಮದ ಕಿತ್ತೂರು ರಾಣಿ ವಸತಿ ಶಾಲೆ ಕಲ್ಯಾಣಿ, ಮಳೆ ನೀರು ಕೊಯ್ಲು ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ನೆನಪಿಗಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅಮೃತ ಸರೋವರ ಯೋಜನೆಯಡಿ ರಾಜ್ಯದಾದ್ಯಂತ ಕೆರೆಗಳ ಪುನಶ್ಚೇತನ ಕಾಮಗಾರಿಗಳು ನಡೆದಿದೆ. ಪುನಶ್ಚೇತನದಿಂದ ಅಂತರ್ಜಲಮಟ್ಟ ಹೆಚ್ಚುವುದಲ್ಲದೇ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ನಿವಾರಣೆಗಾಗಿ ಪ್ರಧಾನ ಮಂತ್ರಿಗಳು ವಿಶೇಷ ಆಸಕ್ತಿವಹಿಸಿದ್ದಾರೆ ಎಂದರು. ಪರಿಸರ ಮತ್ತು ಜಲಮೂಲ ಸಂರಕ್ಷಣೆಗೆ ಕೆರೆಗಳ ಪಾತ್ರ ಆಗಾಧವಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಜಹರಾ ಖಾನಂ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಅನುಷ್ಠಾನ ಇಲಾಖೆ ಅಧಿಕಾರಿಗಳು, ಪಂಚಾಯತ್ ರಾಜ್ ಅಭಿಯಂತರರು, ಜಿ.ಪಂ ನರೇಗಾ ಕಛೇರಿಯ ಎಡಿಪಿಸಿ, ಡಿ.ಎಮ್.ಐ.ಎಸ್, ಎ.ಫ್.ಇ ಸಂಸ್ಥೆ ಸಂಯೋಜಕರು ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು ಹಾಜರಿದ್ದರು.

LEAVE A REPLY

Please enter your comment!
Please enter your name here