BP News Karnataka Super Fast 15-07-2022

0
196

ಸೇವಾ ಮನೋಭಾವನೆಯ ಇನ್ನೊಂದು ಹೆಸರೇ ಸ್ಕೌಟ್ಸ್ ಮತ್ತು ಗೈಡ್ಸ್: ಆಯುಕ್ತ ಪಿ.ಜಿ.ಆರ್.ಸಿಂಧ್ಯಾ


BP News ಬಳ್ಳಾರಿ,ಜು.15-ಸೇವಾ ಮನೋಭಾವನೆಯಿಂದ ಶ್ರಮಿಸುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತ್ಯಾಗದ ಮತ್ತೊಂದು ಶಬ್ಧವಾಗಿದೆ. ಸೇವಾ ಮನೋಭಾವನೆಯನ್ನು ರೂಪಿಸುವುದೇ ಸ್ಕೌಟ್ಸ್ ಮತ್ತು ಗೈಡ್ಸ್‍ನ ಮುಖ್ಯ ಉದ್ದೇಶವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯ ಅವರು ಹೇಳಿದರು.
ನಗರದ ಜಿಪಂನ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
——
3 ತಿಂಗಳೊಳಗೆ ಅನುಷ್ಠಾನವಾಗದಿದ್ದರೆ ಕ್ರಮ: ಪ್ರವಾಸೋದ್ಯಮ ಸಚಿವ ಆನಂದಸಿಂಗ್


BP News ಹೊಸಪೇಟೆ(ವಿಜಯನಗರ),ಜು.15-ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 10 ಗ್ರಾಮ ಪಂಚಾಯತಿಗಳ ಮೂಲಭೂತ ಸೌಕರ್ಯ ಪೂರೈಕೆಯಲ್ಲಿ ಕುಂದುಕೊರತೆಗಳ ಕುರಿತ ಸಮಾಲೋಚನಾ ಸಭೆಯು ಸಚಿವರಾದ ಆನಂದ್‍ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು 3 ತಿಂಗಳೊಳಗೆ ಅನುಷ್ಠಾನ ಮಾಡಿ ವರದಿ ಸಲ್ಲಿಸಬೇಕು;ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
——-
ರೇಲ್ವೆ ಇಲಾಖೆಯಲ್ಲಿ ರದ್ದುಪಡಿಸಿರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಎಐಯುವೈಎಸ್‍ಸಿ ಆಗ್ರಹ


BP News ಬಳ್ಳಾರಿ,ಜು.15-ರೈಲ್ವೇ ಇಲಾಖೆಯಲ್ಲಿ 90,000 ಹುದ್ದೆಗಳನ್ನು ರದ್ದುಪಡಿಸುವ ನಿರ್ಧಾರವನ್ನು ತಕ್ಷಣವೇ ಹಿಂಪಡೆದು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಲಾಯಿತು.
ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ವತಿಯಿಂದ ಕೇಂದ್ರ ಸರ್ಕಾರ ರೈಲ್ವೇ ಇಲಾಖೆಯಲ್ಲಿನ 90,000 ಹುದ್ದೆಗಳನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಬಳ್ಳಾರಿ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿ ಕೇಂದ್ರದ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಲಾಯಿತು.
——-
ಜನರು ನಾಟಕ ನÉೂೀಡಲು ಬರುತ್ತಿರುವುದು ಸಂತಸದ ವಿಷಯ-ಜಯಪ್ರಕಾಶ್ ಗುಪ್ತ


BP News ಬಳ್ಳಾರಿ,ಜು.15-ಇತ್ತೀಚೆಗೆ ಜನರು ಕಲೆಯ ಬಗ್ಗೆ ಆಸಕ್ತಿ ವಹಿಸಿ ನಾಟಕ ನೋಡಲು ಬರುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹಿರಿಯ ಲೆಕ್ಕ ಪರಿಶೋಧಕರಾದ ಜಯಪ್ರಕಾಸ್ ಗುಪ್ತ ಹೇಳಿದರು.
ರಾಘವ ಕಲಾ ಮಂದಿರದಲ್ಲಿ ಅಲಾಪ್ ಸಂಗೀತ ಕಲಾ ಟ್ರಸ್ಟ್, ಬಳ್ಳಾರಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದ ವಿಶೇಷ ಘಟಕ ಯೋಜನೆಯಡಿಯಲ್ಲಿ ಜಾನಪದ ಗೀತೆ ಗಾಯನ, ಸಮೂಹ ನೃತ್ಯ,ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
——
ಆಹಾರ ಧಾನ್ಯಗಳ ಮೇಲೆ ಜಿ.ಎಸ್.ಟಿ. ವಿಧಿಸುವಿಕೆ-ಚೇಂಬರ್ ಆಫ್ ಕಾಮರ್ಸ್ ವಿರೋ


BP News ಬಳ್ಳಾರಿ,ಜು.15-ಆಹಾರ ಧಾನ್ಯಗಳ ಮೇಲೆ ಜಿಎಸ್‍ಟಿ ವಿಧಿಸುವುದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ತೆರಿಗೆ ಮತ್ತು ಟೆಂಟ್ರಲ್ ಅಬಕಾರಿ ಅಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಅಧ್ಯಕ್ಷ ಸಿ.ಶ್ರೀನಿವಾಸರಾವ್ ಮತ್ತು ಗೌರವಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರ ನೇತೃತ್ವದ ನಿಯೋಗವು ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಜಿಎಸ್‍ಟಿ ಹಿಂಪಡೆಯುವಂತೆ ಒತ್ತಾಯಿಸಿದರು.
——
ಸಿದ್ದರಾಮಯ್ಯ – 75 ಅಮೃತ ಮಹೋತ್ಸವ ಸಮಿತಿಗೆ ಬಿಎಂ ಪಾಟೀಲ್


BP News ಬಳ್ಳಾರಿ,ಜು.15-ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 75 ನೇ ವರ್ಷದ ಅಂಗವಾಗಿ ಸಿದ್ಧರಾಮಯ್ಯ-75 ಅಮೃತ ಮಹೋತ್ಸವ ಸಮಿತಿಗೆ ಸಂಘಟನಾ ಕಾರ್ಯದರ್ಶಿಯನ್ನಾಗಿ ಬಳ್ಳಾರಿಯ ಬಿಎಂ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ದಾವಣಗೆರೆಯಲ್ಲಿ ಆಗಸ್ಟ್ 3 ರಂದು ಜನ್ಮ ದಿನೋತ್ಸವ-ಅಮೃತ ಮಹೋತ್ಸವವನ್ನು ಬೆಳಗ್ಗೆ 11 ಗಂಟೆಗೆ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಪದಾಧಿಕಾರಿಯನ್ನಾಗಿ ಬಿಎಂ ಪಾಟೀಲ್ ಅವರನ್ನು ನೇಮಿಸಲಾಗಿದೆ.
——

LEAVE A REPLY

Please enter your comment!
Please enter your name here