BP NEWS: ರಾಯಚೂರು: ಜುಲೈ.14: ಜಿಲ್ಲೆಯ ಮಾನವಿ ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂದುಗಡೆಯಲ್ಲಿನ ವೃತ್ತಕ್ಕೆ ‘ಪುನೀತ್ ರಾಜ್ಕುಮಾರ್ ವೃತ್ತ’ ಎಂದು ನಾಮಕರಣ ಮಾಡಲು ಉಲ್ಲೇಖದನ್ವಯ ದಿನಾಂಕ :21-03-2022 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಿ ಸದರಿ ಪಿ.ಎಲ್.ಡಿ ಬ್ಯಾಂಕ್ ಮುಂದುಗಡೆಯಲ್ಲಿನ ವೃತ್ತಕ್ಕೆ ‘ಪುನೀತ್ ರಾಜ್ ಕುಮಾರ್ ವೃತ್ತ’ ಎಂದು ನಾಮಕರಣ ಮಾಡಲು ಸಭೆಯು ಸರ್ವಾನುಮತದಿಂದ ಒಪ್ಪಿಗೆ ನೀಡಿರುತ್ತದೆ.
ಆದಕಾರಣ ಮಾನವಿ ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂದುಗಡೆಯಲ್ಲಿನ ವ್ಯಕ್ತ ‘ಪುನೀತ್ ರಾಜ್ಕುಮಾರ್ ವೃತ್ತ’ ಎಂದು ನಾಮಕರಣ ಮಾಡಲಾಗುತ್ತಿದ್ದು, ಇದಕ್ಕೆ ಪಟ್ಟಣದ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಇದ್ದಲ್ಲಿ ದಾಖಲಾತಿಗಳೊಂದಿಗೆ ಈ ಪತ್ರಿಕೆ ಪ್ರಕಟಣೆ ನೀಡಿದ 15 ದಿನದೊಳಗಾಗಿ ಈ ಕಾರ್ಯಾಲಯಕ್ಕೆ ಸಲ್ಲಿಸತ್ತಕ್ಕದ್ದು ಮಾನವಿ ಪುರಸಭೆಯ ಮುಖ್ಯಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.