BP News Karnataka Super Fast 14-07-2022

0
155

ತುಂಗಾಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಪ್ರವಾಸೋದ್ಯಮ ಸಚಿನ ಆನಂದಸಿಂಗ್


BP News ಹೊಸಪೇಟೆ(ವಿಜಯನಗರ),ಜು.14-ತುಂಗಾಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್‍ಸಿಂಗ್ ಅವರು ಜಲಾಶಯದ ಬಳಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದಸಿಂಗ್ ಅವರು ಸುಮಾರು 40 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅವಧಿಗೆ ಮುಂಚೆ ಅಣೆಕಟ್ಟು ತುಂಬಿದ್ದು,ಸಂತಸದ ವಿಷಯ ಎಂದರು.
——-
ಕಂಪ್ಲಿ ಸುತ್ತಮುತ್ತಲಿನ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ ಪರಿಶೀಲನೆ


BP News ಬಳ್ಳಾರಿ,ಜು.14-ತುಂಗಭದ್ರಾ ಪ್ರವಾಹದಿಂದ ಕಂಪ್ಲಿ-ಗಂಗಾವತಿ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು, ಇದರ ಜೊತೆಗೆ ಕಂಪ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟು ಮಾಡಿದೆ. ಸೇತುವೆ ಸೇರಿದಂತೆ ಕಂಪ್ಲಿ ಸುತ್ತಮುತ್ತಲಿನ ನದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಮಾಜಿ ಶಾಸಕ ಟಿಎಚ್ ಸುರೇಶ್ ಬಾಬು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಇದ್ದರು.
—–
ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ವಿತರಿಸಿದ ಬಿಜೆಪಿ ಕಾರ್ಯಕರ್ತರು


BP News ಬಳ್ಳಾರಿ,ಜು.14-ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಚ ಬಳ್ಳಾರಿ ಜಿಲ್ಲೆ ಹಾಗೂ ನಗರ ವತಿಯಿಂದ ಎಸ್.ಸಿ ಮೋರ್ಚದ ಕಾರ್ಯ ಚಟುವಟಿಕೆಗಳ ಹಾಗೂ ಸಲಹೆ ಸೂಚನೆಗಳ ಬಗ್ಗೆ ಪದಾಧಿಕಾರಿಗಳ ಅಭಿಪ್ರಾಯವನ್ನು ಪಡೆದು ಚರ್ಚಿಸಲಾಯಿತು
ತದನಂತರ ನಗರದ ರಸ್ತೆಬದಿಯ ಹಣ್ಣಿನ ವ್ಯಾಪಾರಿಗಳಿಗೆ, ಅಂಗಡಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ, ಪ್ರಧಾನಿ ನರೇಂದ್ರ ಮೋದಿ ಜೀ ಯವರ 8 (ಎಂಟು)ವರ್ಷಗಳ ಅಧಿಕಾರದ ಅವಧಿಯಲ್ಲಿನ ಅಭಿವೃಧ್ಧಿಯ ಸಾಧನೆಗಳ ಕಾರ್ಯಚಟುವಟಿಕೆಗಳ ಬಗ್ಗೆ ಮುದ್ರಿಸಲ್ಪಟ್ಟ ಕರ ಪತ್ರಗಳನ್ನು ಹಂಚಿಕೆ ಮಾಡಿ ಪ್ರಚಾರವನ್ನು ಮಾಡಲಾಯಿತು.
——-
ಬಿಜೆಪಿ ಕಚೇರಿಯಲ್ಲಿ ಗ್ರಾಮೀಣ ಪ್ರಕೋಷ್ಟದ ಸಭೆ


BP News ಬಳ್ಳಾರಿ,ಜು.14-ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಟಕ್ಕೆ ಸಂಬಂಧಿಸಿದಂತೆ ಸಭೆ ನಡೆಯಿತು
ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳು ಮುರಹರಗೌಡ, ವಿಧಾನ ಪರಿಷತ್ ಸದಸ್ಯ ವೈ ಎಂ ಸತಿಶ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗುರು ಲಿಂಗನಗೌಡ, ಮಹಾನಗರ ಪಾಲಿಕೆ ಸದಸ್ಯ ಡಾ.ಕೆಎಸ್ ಅಶೋಕ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
——.
ಅವನತಿ ಹೊಂದುತ್ತಿರುವ ತೊಗಲುಗೊಂಬೆ ಕಲೆಗೆ ಎಲ್ಲರ ಪ್ರೋತ್ಸಾಹ ಅಗತ್ಯ-ಎಂ.ಇ.ಜೋಷಿ


BP News ಬಳ್ಳಾರಿ,ಜು.14-ಪುರಾಣ ಕಾಲದ ಐತಿಹ್ಯ ಹೊಂದಿರುವ ತೊಗಲುಗೊಂಬೆ ಕಲೆ ಇಂದು ಅವನತಿ ಹೊಂದುತ್ತಿದ್ದು ಸರ್ಕಾರ, ಸಂಘ ಸಂಸ್ಥೆಗಳು ಮತ್ತು ನಾಗರಿಕರು ಉಳಿಸಿ ಬೆಳೆಸುವುದು ಅಗತ್ಯವಿದೆ ಎಂದು ಪತ್ರಕರ್ತ ಎಂ.ಇ.ಜೋಷಿ ಹೇಳಿದರು.
ಹೊನ್ನಳ್ಳಿ ರಸ್ತೆಯ ಗುಗ್ಗರಹಟ್ಟಿ ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಳ್ಳಾರಿಯ ಹುಲಿಕುಂಟೇಶ್ವರ ತೊಗಲುಗೊಂಬೆ ಕಲಾ ತಂಡ ಹಾಗೂ ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ತೊಗಲುಗೊಂಬೆ ತರಬೇತಿ, ಪ್ರದರ್ಶನ, ವಿಚಾರ ಸಂಕಿರಣ ಮತ್ತು ದೇಶಭಕ್ತಿ ಗೀತೆ ಸಾಂಸ್ಕøತಿಕ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
——
ಕಾಂಗ್ರೆಸ್ ಮುಖಂಡ ಸುನಿಲ್ ರಾವೂರ ಹುಟ್ಟು ಹಬ್ಬ ಆಚರಣೆ


BP News ಬಳ್ಳಾರಿ,ಜು.14-ಬಳ್ಳಾರಿ ನಗರದ ಕಾಂಗ್ರೆಸ್ ಮುಖಂಡರು ಹಾಗೂ ರಕ್ಷಾ ಪೌಂಡೇಷನ್ ಅಧ್ಯಕ್ಷರಾದ ಸುನಿಲ್ ರಾವೂರ ಸ್ವಗೃಹದಲ್ಲಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಕೇಕ್ ಕಟ್ ಮಾಡಿ ಸಿಹಿ ಹಂಚಿ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಮಾಜಿ ವಿಧಾನಪರಿಷತ್ ಸದಸ್ಯರಾದ ಕೊಂಡಯ್ಯ, ನಿರಂಜನ ನಾಯ್ಡು ಮತ್ತು ಕಾಂಗ್ರೆಸ್ ಮುಖಂಡರಾದ ಕಾಂಡ್ರಾ ಸತೀಶ್, ಕೆ.ಪಿ.ಸಿ.ಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಕಾರ್ಯಕರ್ತರಿದ್ದರು.
——-

 

 

LEAVE A REPLY

Please enter your comment!
Please enter your name here