ಜು.14 ರಂದು ತುಂಗಾಭದ್ರಾ ಜಲಾಶಯಕ್ಕೆ ಸಚಿವ ಆನಂದಸಿಂಗ್ ಅವರಿಂದ ಬಾಗೀನ ಅರ್ಪಣೆ
BP News ಹೊಸಪೇಟೆ(ವಿಜಯನಗರ),ಜು.12-ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಅವರು ತುಂಗಾಭದ್ರಾ ಜಲಾಶಯಕ್ಕೆ ಜು.14ರಂದು ಬೆಳಗ್ಗೆ 9:30ಕ್ಕೆ ಬಾಗೀನ ಅರ್ಪಿಸಲಿದ್ದಾರೆ ಎಂದು ಮುನಿರಾಬಾದ್ ತುಂಗಾಭದ್ರಾ ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಎಂಜನಿಯರ್ ಅವರು ತಿಳಿಸಿದ್ದಾರೆ.
—–
ಜು.16ರಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಹಿನ್ನಲೆಯಲ್ಲಿ ಜನರ ಮನೆಬಾಗಿಲಿನತ್ತ ಸರಕಾರ
BP News ಹೊಸಪೇಟೆ(ವಿಜಯನಗರ),ಜು.12-ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್.ಪಿ ಅವರು ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಹೋಬಳಿಯ ಬನ್ನಿಗೋಳ ಗ್ರಾಮದಲ್ಲಿ ಜು.16ರಂದು ಗ್ರಾಮವಾಸ್ತವ್ಯ ನಡೆಸಿ ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಾಥ್ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿದ್ದಾರೆ
ಎಂದು ಅಪರ ಜಿಲ್ಲಾಧಿಕಾರಿ ಎನ್.ಮಹೇಶ್‍ಬಾಬು ಅವರು ತಿಳಿಸಿದ್ದಾರೆ.
—–
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರ ಬಿ.ಶ್ರೀರಾಮುಲು ಅವರ ಪ್ರವಾಸ ಕಾರ್ಯಕ್ರಮ
BP News ಬಳ್ಳಾರಿ,ಜು.12-ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಜು.13ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಜು.13ರಂದು ಮಧ್ಯಾಹ್ನ 2.50ಕ್ಕೆ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಭೂಮಿಪೂಜೆ, ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಜಿಪಂನ ನಜೀರ್‍ಸಾಬ್ ಸಭಾಂಗಣಲ್ಲಿ,ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಜೀಜಧನ ಸಹಾಯಧನ ವಿತರಣೆ, ಸಂಜೆ 06ಕ್ಕೆ ಸಿಂಧವಾಳ ಗ್ರಾಮದಲ್ಲಿ ಮೋಕಾ-ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ನೂತನ ಬಸ್‍ಗೆ ಚಾಲನೆ ನೀಡಲಿದ್ದಾರೆ.
——
ಹೊಸಪೇಟೆಯ ಹಳೆ ತಾಲೂಕು ಕಚೇರಿ ಕಟ್ಟಡ ಪರಿಶೀಲಿಸಿದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್.ಪಿ
BP News ಹೊಸಪೇಟೆ(ವಿಜಯನಗರ)ಜು.12-ಹೊಸಪೇಟೆಯ ಹಳೆ ತಾಲೂಕು ಕಚೇರಿ ಕಟ್ಟಡ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು ಮಂಗಳವಾರದಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಅವರು ತಹಶೀಲ್ದಾರ್ ವಿಶ್ವಜೀತ ಮೇಹತ ಅವರಿಂದ ಕಟ್ಟಡದ ಬಗ್ಗೆ ಮಾಹಿತಿ ಪಡೆದು ಅಲ್ಲಿನ ಅನುಪಯುಕ್ತ ಸಾಮಾಗ್ರಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಅವರಿಗೆ ಸೂಚಿಸಿದರು.
—–
ಸಕಾರತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಲು ಕರೆ
BP News ಬಳ್ಳಾರಿ,ಜು.12-ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೆಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಹಾಗೂ ಸಂಜಯ್‍ಗಾಂಧಿ ಪಾಲಿಟೆಕ್ನಿಕ್ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಬಿಐಟಿಎಂ ಕಾಲೇಜಿನ ಅಡಿಟೋರಿಯಮ್ ಹಾಲ್‍ನಲ್ಲಿ ವಿಶ್ವ ಜನಸಂಖ್ಯೆಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಲೈಂಗಿಕ ಮತ್ತು ಸಂತಾನೋತ್ಪತ್ತಿ, ಆರೋಗ್ಯ ಮತ್ತು ಹಕ್ಕುಗಳು ಹಾಗೂ ಕುಟುಂಬ ಯೋಜನೆಯ ವಿಧಾನಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವ್ಯವಸ್ಥಾಪಕಿ ವಿಜಯಲಕ್ಷ್ಮಿ ನಡೆಸಿಕೊಟ್ಟರು.
——
ಯಾವುದೇ ಕ್ಷೇತ್ರಕ್ಕೆ ಮನ್ನಣೆ ಲಭಿಸುತ್ತದೆ-ಗಂಗಾ ಶಿರೀಶಾ
BP News ಬಳ್ಳಾರಿ,ಜು.12-ಪ್ರಸ್ತುತ ಜಗತ್ತು ಯಾವುದೇ ಕ್ಷೇತ್ರಕ್ಕೆ ಅತ್ಯುತ್ತಮ ಶ್ರೇಣಿಗೆ ಮಾತ್ರ ಮನ್ನಣೆ ನೀಡುತ್ತದೆ. ಆದ್ದರಿಂದ ಐಟಿ ಕ್ಷೇತ್ರಕ್ಕೆ ಕಾಲಿಟ್ಟಿರುವ ಬಿಸಿಎ ವಿದ್ಯಾರ್ಥಿಗಳು ತಮ್ಮ ವಿಷಯದ ಮೇಲೆ ಪರಿಪೂರ್ಣತೆಗೆ ಗುರಿ ಇಟ್ಟಿರಬೇಕೆಂದು ಎಸ್‍ಎಸ್‍ಸಿಎ ಕಾಲೇಜು ಪ್ರಾಧ್ಯಾಪಕಿ ಗಂಗಾ ಶಿರೀಶಾ ಎಂ ಎಸ್ ಹೇಳಿದರು.
ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಬಿಸಿಎ ವಿದ್ಯಾರ್ಥಿಗಳು ಏರ್ಪಡಿಸಿದ್ದ ಐಟಿ ಮತ್ತು ಸಾಂಸ್ಕøತಿಕ ದಿನಾಚರಣೆ ‘ಆರುಷ್-2022” ಕಾರ್ಯಕ್ರಮದಲ್ಲಿ ಕರೆಕೊಟ್ಟರು.
——