BP News Karnataka Super Fast 11-07-2022

0
182

ಕಾರ್ಮಿಕ ಅದಾಲತ್ ಮೂಲಕ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ:ನ್ಯಾ.ಪುಷ್ಪಾಂಜಲಿದೇವಿ


BP News ಬಳ್ಳಾರಿ,ಜು.11-ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲು ಹಾಗೂ ಪರಿಹಾರ ಒದಗಿಸಲು ಜು.15ರಿಂದ ಆಗಸ್ಟ್ 15ರವರೆಗೆ ನಡೆಸಲಿರುವ ಕಾರ್ಮಿಕ ಅದಾಲತ್ 2.0 ಪ್ರಚಾರ ವಾಹನಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್.ಪುಷ್ಪಾಂಜಲಿ ದೇವಿ,ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸತೀಶ ಜೆ.ಬಾಳಿ ಅವರು ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಿದರು.
——-
ಸಾವಿಲ್ಲದ ಸಾಂಸ್ಕøತಿಕ ಪಳೆಯುಳಿಕೆಯೇ ಸಂಗೀತ – ಟಿ ಹೆಚ್ ಎಂ ಬಸವರಾಜ್


BP News ಬಳ್ಳಾರಿ,ಜು.11-ಸಾವಿಲ್ಲದ ಸಾಂಸ್ಕೃತಿಕ ಪಾಳೆಯುಳಿಕೆಯೇ ಸಂಗೀತ. ಈ ಸಂಗೀತದ ರಾಗಗಳಿಂದ ರೋಗಗಳನ್ನು ಗುಣಪಡಿಸಬಹುದೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ಟಿ ಹೆಚ್ ಎಂ ಬಸವರಾಜ ರವರು ಹೇಳಿದರು.
ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯಲ್ಲಿ 19ನೇ ಮಾಸಿಕ ರಾಗರಂಗ್ ಕಾರ್ಯಕ್ರಮವನ್ನು ಡೋಲಕ್ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
—–
ಎಫ್‍ಪಿಎಐವತಿಯಿಂದ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಭಾಷಣ ಸ್ಪರ್ಧೆ


BP News ಬಳ್ಳಾರಿ,ಜು.11-ನಗರದ ಶ್ರೀಮತಿ ಗಾಲಿ ರುಕ್ಮಿಣಮ್ಮ ಮತ್ತು ಚೆಂಗಾರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಾಹಣಾ ಕಾಲೇಜು ಹಾಗೂ ಐಕ್ಯೂಎಸಿ ಸಾಂಸ್ಕøತಿಕ ಸಮಿತಿ ಹಾಗೂ ಸಮಾಜ ಶಾಸ್ತ್ರ ವಿಭಾಗ ಮತ್ತು ಫ್ಯಾಮಿಲಿ ಪ್ಲಾನಿಂಗ್ ಆಸೋಸಿಯೆಷನ್ ಆಫ್ ಇಂಡಿಯಾ, ಜಿಲ್ಲಾ ಬ್ರಾಂಚ್ ಸಂಯುಕ್ತಾಶ್ರಯದಲ್ಲಿ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದ ಸುಮಾರು 25ಕ್ಕೂ ಅಧಿಕ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಫ್‍ಪಿಎಐನ ಅಧ್ಯಕ್ಷರಾದ ಟಿ.ಜಿ.ವಿಠಲ್ ಕಾರ್ಯಕ್ರಮದ ಉದ್ಘಾಟಿಸಿದರು.
——-
ಗೊಡ್ಡು ವರದಿ ಹಿಂಪಡೆಯುವಂತೆ ಎಐಡಿಎಸ್‍ಓ ಆಗ್ರಹ


BP News ಬಳ್ಳಾರಿ,ಜು.11-ಎನ್‍ಇಪಿ ಯಲ್ಲಿ ಹಲವು ವಿಷಯಗಳ ಸೇರ್ಪಡೆಗಾಗಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸಲ್ಲಿಸಲು ಸಿದ್ಧಪಡಿಸಿರುವ ವರದಿ ಅತ್ಯಂತ ಅವೈಜ್ಞಾನಿಕ. ಸತ್ಯಕ್ಕೆ ದೂರವಾದ, ಐತಿಹಾಸಿಕ ಘಟನೆಗಳನ್ನು ತಿರುಚಿರುವ, ಗೊಡ್ಡು ವಿಚಾರಗಳ ಹರಿಬಿಡುವ ಈ ವರದಿಯನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂಪಡೆಯಬೇಕು ಎಂದು ಎಐಡಿಎಸ್‍ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದ್ದಾರೆ.
ಎನ್‍ಇಪಿ ಪಠ್ಯಕ್ರಮದಲ್ಲಿ ಕೆಲವು ಅಂಶಗಳ ಸೇರ್ಪಡೆಗೆ ಕರ್ನಾಟಕ ರಾಜ್ಯ ನಿಯೋಜಿಸಿದ 26 ಸದಸ್ಯರ ಸಮಿತಿಯು ತನ್ನ ಶಿಫಾರಸ್ಸನ್ನು ಈಗ ಕೇಂದ್ರ ಸರ್ಕಾರಕ್ಕೆ ನೀಡಿದೆ ಎಂದು ತಿಳಿಸಿದ್ದಾರೆ.
——–
ಪ್ರೀತಿ ಗೆಹ್ಲೋಟ್ ಎತ್ತಂಗಡಿ


BP News ಬಳ್ಳಾರಿ,ಜು.11-ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಆಯುಕ್ತರಾಗಿ ಸೇವೆಯಲ್ಲಿದ್ದ ಪ್ರೀತಿ ಗೆಹ್ಲೋಟ್ ಅವರನ್ನು ರಾಜ್ಯ ಸರ್ಕಾರ ಬೇರೆಡೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮಹಾನಗರ ಪಾಲಿಕೆಗೆ ನೂತನ ಆಯುಕ್ತರಾಗಿ ಕೆಎಎಸ್ ಆಯ್ಕೆ ಶ್ರೇಣಿಯ ರುದ್ರೇಶ್ ಎಸ್‍ಎನ್ ಇವರು ತಕ್ಷಣದಿಂದ ಜಾರಿಗೆ ಬರುವಂತೆ ಬಳ್ಳಾರಿಗೆ ವರ್ಗಾಯಿಸಲಾಗಿದೆ.
——
ಮೀಸಲಾತಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಶಾಸಕದ್ವಯರ ಬಂಧನ-ಬಿಡುಗಡೆ


BP News ಬಳ್ಳಾರಿ,ಜು.11-ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವಂತೆ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್ ಒಳಗೊಂಡಂತೆ ಕರ್ನಾಟಕ ಸ್ವಾಭಿಮಾನಿ ಎಸ್‍ಸಿ, ಎಸ್‍ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಮುಖಂಡರು ಇಲ್ಲಿನ ನಾರಾಯಣರಾವ್ ಉದ್ಯಾನವನದಿಂದ ಡಿಸಿ ಕಚೇರಿವರೆಗೆ ಹಮ್ಮಕೊಂಡಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯ ವೇಳೆ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
—–

LEAVE A REPLY

Please enter your comment!
Please enter your name here