ವಿಜಯನಗರ: ಡಾ.ಬಾಬು ಜಗಜೀವನ್ ರಾಮ್ ಅವರ 36ನೇ ಪುಣ್ಯಸ್ಮರಣೆ ಆಚರಣೆ

0
219

BP NEWS: ಹೊಸಪೇಟೆ(ವಿಜಯನಗರ): ಜುಲೈ.06: ವಿಜಯನಗರ ಜಿಲ್ಲಾಡಳಿತದ ವತಿಯಿಂದ ಹಸಿರು ಕ್ರಾಂತಿ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 36ನೇ ಪುಣ್ಯಸ್ಮರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಸರಳವಾಗಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಅಪರ ಜಿಲ್ಲಾಧಿಕಾರಿ ಎನ್.ಮಹೇಶ್ ಬಾಬು, ತಹಶೀಲ್ದಾರರಾದ ಕೆ.ಗುರುಬಸವರಾಜ್, ಕಾರ್ತಿಕ್, ಮೇಘ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ಉಮಾಪತಿ, ಗೌರವಾಧ್ಯಕ್ಷ ವೀರಯ್ಯಸ್ವಾಮಿ, ಕಾರ್ಯದರ್ಶಿ ವೇಮಕಟ್ಟೇಶ್ವರಲು, ಸದಸ್ಯ ಬಿ.ಮಾರಣ್ಣ ಮತ್ತು ಡಾ.ಬಾಬು ಜಗಜೀವನ್ ರಾಮ್ ಸಂಘದ ಗೌರವಾಧ್ಯಕ್ಷ ವೆಂಕಪ್ಪ, ಬಾಬು ಮತ್ತು ಉಪಾಧ್ಯಕ್ಷ ಪರಶುರಾಮ್ ಹಾಗೂ ಸಮಾಜದ ಮುಖಂಡರರು ಮತ್ತು ಕಚೇರಿಯ ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here