ರಾಯಚೂರು: ಅರಕೇರಾದಲ್ಲಿ ಮಳೆ ನೀರು ಕೊಯ್ಲು ಯೋಜನೆಗೆ ಸಚಿವರಿಂದ ಚಾಲನೆ

0
141

BP NEWS: ರಾಯಚೂರು: ಜುಲೈ.05: ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸುವ ಸಲುವಾಗಿ ಸರ್ಕಾರದಿಂದ 15 ಸಾವಿರ ಹೊಸ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಿಲಾಗುತ್ತಿದ್ದು, ಈ ಪೈಕಿ 5ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.ನಾಗೇಶ್ ಅವರು ಹೇಳಿದರು.

ಅವರು ಜು.05ರ ಮಂಗಳವಾರ ದಂದು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಿ ಗ್ರಾಮದಲ್ಲಿ IಅIಅI ಈouಟಿಜಚಿಣioಟಿ ವತಿಯಿಂದ ಆದರ್ಶ ವಿದ್ಯಾಲಯದಲ್ಲಿ ಅಳವಡಿಸಿರುವ ಮಳೆ ನೀರು ಕೊಯ್ಲು ಯೋಜನೆಗೆ ಚಾಲನೆ ನೀಡಿ, ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ. ಅದನ್ನು ನಿವಾರಿಸಲು ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಲಾಗಿದೆ. 371(ಜೆ) ಮೀಸಲಾತಿಯಡಿ ಸ್ಥಳೀಯರು ನೇಮಕಾತಿ ಆಗುವುದರಿಂದ ಪ್ರದೇಶ ಬಿಟ್ಟು ಶಿಕ್ಷಕರು ಬೇರೆಡೆ ವರ್ಗಾವಣೆ ಆಗುವುದಿಲ್ಲ ಎಂದು ಹೇಳಿದರು.

ಕೋವಿಡ್ ಕಾರಣದಿಂದ ಕಳೆದ ವರ್ಷ ಸರಿಯಾಗಿ ಶಾಲೆಗಳು ನಡೆಯದ ಕಾರಣ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಹೀಗಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕಲಿಕಾ ಚೇತರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಲಿಕಾ ಚೇತರಿಕೆ ಕೋರ್ಸ್ ಬೋಧಿಸಿದ ನಂತರವೇ ಪಠ್ಯ ಬೋಧನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರಕೃತಿ ಬಗ್ಗೆ ಮನುಷ್ಯರಲ್ಲಿ ತಿಳುವಳಿಕೆ ಅವಶ್ಯವಾಗಿದೆ. ಅಲ್ಲದೆ ಪ್ರಕೃತಿಯ ಪಂಚೇAದ್ರಿಯಗಳ ಬಗ್ಗೆ ಪರಿಚಯ ಆಗಬೇಕು. ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೆ ನೀರು ಉಪಯುಕ್ತವಾಗಿದ್ದು, ನೀರಿನ ಬಗ್ಗೆ ಐಸಿಐಸಿಐ ವತಿಯಿಂದ ಮಕ್ಕಳಿಗೆ ತಿಳಿಸುವ ಕಾರ್ಯ ಉತ್ತಮವಾಗಿದೆ ಎಂದು ಹೇಳಿದರು.

ಅರಕೇರದ ಆದರ್ಶ ವಿಶ್ವವಿದ್ಯಾಲಯದ ಶಾಲಾ ವಾತಾವರಣ ಹಾಗೂ ಶಿಕ್ಷಣದ ಗುಣಮಟ್ಟದ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ವೇಳೆ ಐಸಿಐಸಿಐ ವಲಯ ಮಟ್ಟದ ಅಧಿಕಾರಿ ವೆಂಕಟೇಶ ಅವರು ಮಾತನಾಡಿ, ಐಸಿಐಸಿಐ ಬ್ಯಾಂಕ್ ಹಾಗೂ ಐಸಿಐಸಿಐ ಫೌಂಡೇಶನ್ ವತಿಯಿಂದ ರಾಜ್ಯದಲ್ಲಿ ಒಟ್ಟು 100ಮಳೆ ನೀರು ಕೊಯ್ಲು ಘಟಕಗಳನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲಾಗಿದ್ದು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 58ಘಟಕಗಳು ನಿರ್ಮಾಣವಾಗಿದೆ ಎಂದರು.

ಸುಮಾರಿನಲ್ಲಿ 3000ರೈತರಿಗೆ ಸಿರಿದಾನ್ಯ ಹಾಗೂ ಸಮಗ್ರ ಕೃಷಿ ಬೆಳೆಗಳ ತರಬೇತಿ ನೀಡಲಾಗಿದೆ. ಜಿಲ್ಲೆಯ ಭೂಮನಗುಂಡ ಗ್ರಾಮದಲ್ಲಿ 1,200 ಎಕರೆ ಕಿರು ಜಲಾನಯನ ಪುದೇಶ ಅಭಿವೃದ್ಧಿ ಪಡಿಸಲಾಗಿದ್ದು, 16000 ಬದುಗಳು, 131 ಕೃಷಿಗೊಂಡಗಳು, 80 ಬೋರ್ವೆಲ್ ರಿಚಾರ್ಜ್ ಹಾಗೂ 350 ಕಲ್ಲು ಕೋಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ದೇವದುರ್ಗ ತಾಲೂಕಿನ ಆಲೋಡ್ ಗ್ರಾಮದಲ್ಲಿ 100ಎಕರೆ ಕೆರೆಯನ್ನು ಪುನರ್ಜೀವನಗೊಳಿಸಲಾಗಿದೆ. ಅಲ್ಲದೆ ಸುಮಾರು 1,235 ರೈತರಿಗೆ ಎರೆಹುಳ ಘಟಕಗಳನ್ನು ನಿರ್ಮಾಣ ಮಾಡಿಸಿ ಇದರಿಂದ 1,389 ಮೆಟ್ರಿಕ್ ಟೆನ್ ಎರೆಹುಳು ಗೊಬ್ಬರ ಉತ್ಪಾದಿಸಿ ರೈತರು ತಮ್ಮ ಜಮೀನುಗಳಿಗೆ ಉಪಯೋಗಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಬಗಮ್ಮ ಮುದುಕಪ್ಪ, ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರೀಮ ಪವಾರ್, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಬೇಂದ್ರಯ್ಯ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಇಂದಿರಾ, ತಹಸೀಲ್ದಾರ್ ಶ್ರೀನಿವಾಸ ಚಾಪೆಲ್, ಎಸ್.ಡಿ.ಎಮ್.ಸಿ ಅಧ್ಯಕ್ಷ ಸೂಗುರೇಶ್ ಎಸ್.ಗುಡಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.

LEAVE A REPLY

Please enter your comment!
Please enter your name here