BP NEWS: ಬಳ್ಳಾರಿ: ಜುಲೈ.05: ಬಳ್ಳಾರಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಜಿಪಂ ಸಿಇಒ ಜಿ.ಲಿಂಗಮೂರ್ತಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳ್ಳಾರಿ ತಾಲೂಕಿನ ಕಪ್ಪಗಲ್ಲು, ಸಿರಿವಾರ, ಮೋಕಾ, ಕಾರೇಕಲ್ಲು, ಎಂ.ಗೋನಾಳು ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿದ ಜಿಪಂ ಸಿಇಒ ಜಿ.ಲಿಂಗಮೂರ್ತಿ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾಗೊಂಡ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಕಪ್ಪಗಲ್ಲು ಗ್ರಾಮ ಪಂಚಾಯಿತಿಯಲ್ಲಿ ಭಾರತ್ ನಿರ್ಮಾಣ ಸೇವಾ ಕೇಂದ್ರ ನಿರ್ಮಾಣ, ಸಿರವಾರ ಗ್ರಾಮ ಪಂಚಾಯಿತಿಯಲ್ಲಿ ಕೂಲಿಕಾರರು ಕೆಲಸ ಮಾಡುವ ಸ್ಥಳ,ಎಸ್.ಎಲ್. ಡಬ್ಲು.ಎಮ್ ಘಟಕ, ಮೋಕಾ ಗ್ರಾಮ ಪಂಚಾಯಿತಿಯಲ್ಲಿ ರೂರ್ಬನ್ ಯೋಜನೆಯಡಿ ಸಾರ್ವಜನಿಕ ಆಸ್ಪತ್ರೆಗೆ ಸೋಲಾರ್ ಅಳವಡಿಕೆ ಮತ್ತು ಅಮ್ಲಜನಕ್ಕೆ ಕಟ್ಟಡ ನಿರ್ಮಾಣ. ಬಾಲಕರ ವಸತಿ ನಿಲಯ ಮತ್ತು ಎಸ್.ಎಲ್. ಡಬ್ಲು.ಎಮ್ ಘಟಕ, ಪ್ರೌಢ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್,
ಕಾರೇಕಲ್ಲು ಗ್ರಾಮ ಪಂಚಾಯತಿಯ ತಂಬ್ರಹಳ್ಳಿ ಗ್ರಾಮದಲ್ಲಿ ಅಮೃತ ಸರೋವರ ಯೋಜನೆ ಅಡಿ ಹೊಸ ಕೆರೆ ನಿರ್ಮಾಣ,ಎಂ.ಗೋನಾಳು ಗ್ರಾಮ ಪಂಚಾಯತಿಯ ಸಿಂದುವಾಳ ಗ್ರಾಮದಲ್ಲಿ ಕಲ್ಯಾಣಿ ಕಾಮಗಾರಿ,ಎಕೋ ಪಾರ್ಕ್ ಕಾಮಗಾರಿಗಳನ್ನು ಜಿಪಂ ಸಿಇಒ ಜಿ.ಲಿಂಗಮೂರ್ತಿ ಅವರು ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ ಸಹಾಯಕ ನಿರ್ದೇಶಕರು(ಗ್ರಾ.ಉ), ಟಿಸಿ, ಟಿಐಇಸಿ, ಟಿಎಮ್ ಐಎಸ್, ಟಿಎಇ, ಬಿಎಫ್ಟಿ, ಪಿಡಿಓ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.