BP News Karnataka Super Fast 01-07-2022

0
251

ಉಬ್ಬಳಗಂಡಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬೆಳ್ಳಿಯ ಆಭರಣ ಕಳ್ಳತನ


BP News ಬಳ್ಳಾರಿ,ಜು.1-ಜಿಲ್ಲೆಯ ಸಂಡೂರು ತಾಲೂಕಿನ ಉಬ್ಬಳಗಂಡಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬೆಳ್ಳಿಯ 6 ಲಕ್ಷ ಮೌಲ್ಯದ ಆಭರಣಗಳು ಕಳ್ಳತನವಾಗಿರುವ ಘಟನೆ ನಡೆದಿದೆ.
ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮೊನ್ನೆ ರಾತ್ರಿ ಈ ಘಟನೆ ನಡೆದಿದ್ದು ವೀರಭದ್ರೇಶ್ವರ ಸ್ವಾಮಿಯ ಬೆಳ್ಳಿಯ ವಿಗ್ರಹ ಮೂರ್ತಿ, ಬೆಳ್ಳಿಯ ಕವಚ, ಕಣ್ಣು, ಮೀಸೆ, ಮೂಗು, ಕಿರೀಟ ಸೇರಿದಂತೆ ಆಕರ್ಷಕ ಕವಚಗಳನ್ನು ಕಳ್ಳರು ದೋಚಿದ್ದಾರೆ.
——–
ಹ್ಯಾಮರ್ ಥ್ರೋ ನಲ್ಲಿ ಬಿಐಟಿಎಂ ಕಾಲೇಜಿಗೆ ಚಿನ್ನದ ಪದಕದ ಗರಿ


BP News ಬಳ್ಳಾರಿ,ಜು.1-23ನೇ ವಿತಾವಿ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಹ್ಯಾಮರ್ ಥ್ರೋನಲ್ಲಿ ಬಿಐಟಿಎಂ ಕಾಲೇಜಿಗೆ ಬಂಗಾರದ ಪದಕ ಲಭಿಸಿದೆ.
ಬಳ್ಳಾರಿ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‍ಮೆಂಟ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕಷನ್ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಕೆ.ಯಶವಂತ್ ಚಿಕ್ಕಬಳ್ಳಾಪುರದಲ್ಲಿ ನಡೆದ 23ನೇ ವಿತಾವಿ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟದ ಹ್ಯಾಮರ್ ಥ್ರೋನಲ್ಲಿ ಭಾಗವಹಿಸಿ, 38.89 ಮೀಟರ್ಸ್ ದೂರ ಎಸೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಆಡಳಿತ ಮಂಡಳಿ, ಶಿಕ್ಷಕ ಶಿಕ್ಷಕೇತರ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
——
ತಾರತಮ್ಯ ನೀತಿ ವಿರೋಧಿಸಿ ವಾಹನ ಚಾಲಕರ ಪ್ರತಿಭಟನಾ ಧರಣಿ


BP News ಬಳ್ಳಾರಿ,ಜು.1-ಮಹಾನಗರ ಪಾಲಿಕೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಚಾಲಕರಾಗಿ ಕೆಲಸ ನಿರ್ವಹಿಸುತ್ತಿರುವ 150ಕ್ಕೂ ಹೆಚ್ಚು ಸಿಬ್ಬಂದಿಗಳಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಡಿಸಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಗಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಉಮೇಶ್, ಗೌರವಾಧ್ಯಕ್ಷರಾದ ಈರೇಶ್, ಉಪಾಧ್ಯಕ್ಷರಾದ ಕೆ.ಬಸಪ್ಪ, ವಾಹನ ಚಾಲಕರಾದ ಜಬ್ಬರ್ ಸೇರಿದಂತೆ 150ಕ್ಕೂ ಹೆಚ್ಚು ಚಾಲಕರು ಹಾಗೂ ಕ್ಲೀನರ್‍ಗಳು ಇದ್ದರು.
——-
ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಜು.5 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ


BP News ಬಳ್ಳಾರಿ,ಜು.1-ನ್ಯಾಯಬೆಲೆ ಅಂಗಡಿ ಮಾಲೀಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಾಗೂ ದೆಹಲಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 2 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಡಿ.ತಾಯಣ್ಣ, ರಾಜ್ಯಾದ್ಯಂತ ಎಲ್ಲಾ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು, ಸೀಮೆಎಣ್ಣೆ ವಿತರಕರು, ಸೀಮೆ ಎಣ್ಣೆ ವಿತರಕರು, ಹಮಾಲಿ ಕಾರ್ಮಿಕರು ಮತ್ತು ಲಾರಿ ಮಾಲೀಕರು ಭಾಗವಹಿಸಿ ತಮ್ಮ ಹಕ್ಕುಗಳಿಗಾಗಿ ಈ ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದರು.
——–
ಬಳ್ಳಾರಿಯಲ್ಲಿ ಸಿಎ ದಿನಾಚರಣೆ

BP News ಬಳ್ಳಾರಿ,ಜು.1-ದಿ ಇನ್ಸ್‍ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯ ಬಳ್ಳಾರಿ ಶಾಖೆ ವತಿಯಿಂದ ಸಿಎ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಶಾಖೆಯ ಆಧ್ಯಕ್ಷರಾದ ಸಿಎ ವಿನೋದ್ ಕುಮಾರ್ ಬಾಗ್ರೇಚ ಹಾಗೂ ಜಿಲ್ಲೆಯ ಎಸ್‍ಪಿ ಸೈದುಲು ಅಡಾವತ್ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ, ಸಿಎ ಕೋರ್ಸ್‍ಗೆ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುವ ಬಗ್ಗೆ ಗಮನ ವಹಿಸಬೇಕೆಂದರಲ್ಲದೆ, ಸಿಎಗಳು ಹಣಕಾಸಿನ ವೈಧ್ಯರೆಂದು ಹೇಳಿದರು.
——–
ಸ್ಟೇಟ್ ಬ್ಯಾಂಕ್ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ


BP News ಬಳ್ಳಾರಿ,ಜು.1-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಛೇರಿ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಛೇರಿ, ಬಳ್ಳಾರಿ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಸ್ಪಂದನಾ ಚಾರಿಟೇಬಲ್ ಟ್ರಸ್ಟ್, ಬಳ್ಳಾರಿ ಮತ್ತು ವಿಮ್ಸ್, ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಅನೇಕರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
——-

 

 

 

LEAVE A REPLY

Please enter your comment!
Please enter your name here