ಬಿಐಟಿಎಂ ಅತ್ಯುತ್ತಮ ನಾಯಕತ್ವದ ಕಾಲೇಜು
BP News ಬಳ್ಳಾರಿ,ಜೂ.30-ಬಿಐಟಿಎಂ ಕಾಲೇಜಿಗೆ ಝೀ ಡಿಜಿಟಲ್ ನಿಂದ ಝೀ ಎಜುಫೂಚರ್ ಎಕ್ಸಲೆನ್ಸ್ ಅವಾರ್ಡ್ ವರ್ಗದಲ್ಲಿ ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ನಾಯಕತ್ವದ ಕಾಲೇಜು ಎಂಬ ಔಟ್ ಸ್ಟ್ಯಾಂಡಿಂಗ್ ಲೀಡರ್ ಇನ್ ಹೈಯರ್ ಎಜುಕೇಶನ್ ಪ್ರಶಸ್ತಿ ಲಭಿಸಿದೆ.
ಕಾಲೇಜಿನ ನಿರ್ದೇಶಕರಾದ ಡಾ.ಯಶವಂತ್ ಭೂಪಾಲ್ ಮಾಹಿತಿ ನೀಡಿದ್ದು, ಇದೇ 25 ರಂದು ಹರಿಯಾಣದ ಗುರುಗಾವ್ ನಲ್ಲಿ ಝೀ ಡಿಜಿಟಲ್ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಮನೀಶ್ ಸಿಸೋಡಿಯಾ ಅವರು ಈ ಪ್ರಶಸ್ತಿ ನೀಡಿದ್ದಾರೆ.
——
ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಅಭಿಮಾನದ ಚಿಂತನೆ-ಡಾ.ಗಿರೇಗೌಡ
BP News ಬಳ್ಳಾರಿ,ಜೂ.30-ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಕನ್ನಡ ನಾಡು ನುಡಿ ಬಗ್ಗೆ ಅಭಿಮಾನ ಮೂಡಿಸುವ ಚಿಂತನೆಗಳನ್ನು ಕಾಣಬಹುದಾಗಿದೆ ಎಂದು ವಿ. ಎಸ್.ಕೆ ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಗಿರೇಗೌಡ ಅರಳಿಹಳ್ಳಿ ತಿಳಿಸಿದರು.
ಬಳ್ಳಾರಿ ಜಿಲ್ಲಾ ಕಸಾಪ ನಗರದ ಶ್ರೀ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಾಜಿ ಸಂಸದರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ ಸಿ ಕೊಂಡಯ್ಯ ಅವರು ತಮ್ಮ ತಂದೆ ದಿ. ಕೆ.ವಿ. ತಿರುಪಾಲಪ್ಪ ಅವರ ಹೆಸರಿನಲ್ಲಿ ನೀಡಿದ ದತ್ತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
——
ಮೃತ ವ್ಯಕ್ತಿಯ ಪ್ರಕರಣ ನ್ಯಾಯಾಂಗ ತನಿಖೆಗೆ ನೀಡಲು ಮನವಿ
BP News ಬಳ್ಳಾರಿ,ಜೂ.30-ಸಂಡೂರು ತಾಲೂಕು ತೋರಣಗಲ್ಲು ಹೋಬಳಿಯ ಎಮ್. ಗಂಗಲಾಪುರ ಗ್ರಾಮದ ವ್ಯಕ್ತಿಯೊಬ್ಬ ಮೃತ ಪ್ರಕರಣ ನ್ಯಾಯಾಂಗ ತನಿಖೆಗೆ ನೀಡಲು ಒತ್ತಾಯಿಸಿ ಹಾಗೂ ಪರಿಶಿಷ್ಟ ಪಂಗಡದ ಮೇಲೆ ದೌರ್ಜನ್ಯ ನಡೆಸಿದವರನ್ನು ಬಂಧಿಸಲು ಒತ್ತಾಯಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳ ಒಕ್ಕೂಟದಿಂದ ಡಿಸಿಗೆ ಮನವಿ ಮಾಡÀಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಬಿ.ಜಯರಾಂ, ಎಂ.ಹನುಮಂತಪ್ಪ, ಗಡ್ಡಂ ತಿಮ್ಮಪ್ಪ, ಎನ್.ಮಲ್ಲಪ್ಪ, ಇನ್ನಿತರರು ಇದ್ದರು.
——-
ನಾಲ್ಕನೇ ದಿನಕ್ಕೆ ಮುಂದುವರಿದ ರೈತರ ಧರಣಿ ಸತ್ಯಾಗ್ರಹ
BP News ಬಳ್ಳಾರಿ,ಜೂ.30-ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರೈತರ ಪರವಾಗಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಇಂದು ನಾಲ್ಕನೇ ದಿನಕ್ಕೆ ಕಾಲಿರಿಸಿದೆ.
ಇಲ್ಲಿನ ಗಾಂಧಿನಗರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಾರ್ಯಾಲಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಕರೂರು, ಗೌರವಾಧ್ಯಕ್ಷರಾದ ಸ.ರಘುನಾಥ್ ನೇತೃತ್ವದಲ್ಲಿ ವಣೆನೂರು ಗ್ರಾಮದ ರೈತರು ಭಾಗವಹಿಸಿದ್ದರು.
—–
ಪುನರ್ ಮನನ ತರಬೇತಿ ಶಿಬಿರ
BP News ಬಳ್ಳಾರಿ,ಜೂ.30-ತಾಲೂಕಿನ ಮೀನಹಳ್ಳಿ ಗ್ರಾಮದಲ್ಲಿ ಗೃಹರಕ್ಷಕ ಹಾಗೂ ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಿಂದ ಪುನರ್ ಮನನ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ 15 ಜಿಲ್ಲೆಗಳಿಂದ ಒಟ್ಟು 59 ಜನ ಗೃಹರಕ್ಷಕರು ತರಬೇತಿಯಲ್ಲಿ ಹಾಜರಿದ್ದರು.
ತರಬೇತಿ ಶಿಬಿರದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರುನಾಥ್ ಮತ್ತೂರು, ಗೃಹರಕ್ಷಕ ದಳದ ಸಮಾದೇಷ್ಟ ಎಂ.ಎ.ಷಕೀಬ್ ಅಭಿನಂದಿಸಿ ಗೃಹರಕ್ಷಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. .
——-
ರಾಜ್ಯ ಸರ್ಕಾರದ ಸುತ್ತೋಲೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
BP News ಬಳ್ಳಾರಿ,ಜೂ.30-ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಹೈ ಕ ಭಾಗದ ಜನರಿಗೆ ಅನ್ಯಾಯವಾಗಲಿರುವ ಹಿನ್ನೆಲೆಯಲ್ಲಿ ಜೂ.30 ರಂದು ಪ್ರತಿಭಟನೆ ನಡೆಸಿ ಆದೇ ಹಿಂಪಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೈ ಕ ಹೋರಾಟ ಸಮಿತಿಯ ಸಿರಿಗೇರಿ ಪನ್ನಾರಾಜ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೈ.ಕ.ಹೋರಾಟ ಸಮಿತಿಯ ಉಪಾದ್ಯಕ್ಷ ಟಿಜಿ ವಿಠಲ್, ಕಾರ್ಯದರ್ಶಿ ರಿಜ್ವಾನ್ ಖಾನ್ ಸೇರಿದಂತೆ ವಿವಿಧ ಮುಖಂಡರು ಇದ್ದರು.
—-