ಶಿಥಿಲಗೊಂಡ ಎಂ.ಎ.ಕೆ.ಆಜಾದ್ ಪ್ರೌಢ ಶಾಲೆ ಬೇರೆಡೆ ಸ್ಥಳಾಂತರಿಸಲು ಸಚಿವ ಬಿ.ಶ್ರೀರಾಮುಲು ಚಿಂತನೆ
BP News ಬಳ್ಳಾರಿ,ಜೂ.29-ಕೋಟೆ ಪ್ರದೇಶದ ಎಂಎಕೆ ಆಜಾದ್ ಸರ್ಕಾರಿ ಪ್ರೌಢಶಾಲೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಸಾರಿಗೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಪರಿಶೀಲನೆ ನಡೆಸಿ, ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಸದರಿ ಶಾಲೆಯ ವಿದ್ಯಾರ್ಥಿಗಳನ್ನು ಬೇರೆಡೆ ಸ್ಥಳಾಂತರಿಸಲು ಚಿಂತನೆ ನಡೆಸಿದರು.
ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಮಾಜಿ ಸಂಸದೆ ಜೆ.ಶಾಂತಾ, ಅಪರ ಜಿಲ್ಲಾಧಿಕಾರಿ ಪಿಎಸ್ ಮಂಜುನಾಥ್, ತಹಶೀಲ್ದಾರ್ ವಿಶ್ವನಾಥ ಇದ್ದರು.
—–
ಬಿಐಟಿಎಂ ಕಾಲೇಜಿನಲ್ಲಿ ಎಕ್ಸ್‍ಪ್ಲೋರಿಕಾ 2ಕೆ22 ಟೆಕ್ನೋ-ಸಾಂಸ್ಕøತಿಕ ಉತ್ಸವ
BP News ಬಳ್ಳಾರಿ,ಜೂ.29-ಪ್ರತಿಷ್ಠಿತ ಬಳ್ಳಾರಿ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ “ಎಕ್ಸ್‍ಪ್ಲೋರಿಕಾ 2ಕೆ22” ಟೆಕ್ನೋ-ಸಾಂಸ್ಕøತಿಕ ಉತ್ಸವವನ್ನು ಆಚರಿಸಲಾಯಿತು.
ವಿಜೇತರಾದ ವಿದ್ಯಾರ್ಥಿಗಳಿಗೆ ಬಿಐಟಿಎಂ ನಿರ್ದೇಶಕರಾದ ಡಾ. ಯಶವಂತ್ ಭೂಪಾಲ್, ಉಪ ನಿರ್ದೇಶಕರಾದ ವೈ.ಜೆ.ಪೃಥ್ವಿರಾಜ್ ಭೂಪಾಲ್, ಪ್ರಾಚಾರ್ಯರಾದ ಡಾ.ಯಡವಳ್ಳಿ ಬಸವರಾಜ್ ಮತ್ತು ಎಲ್ಲಾ ಡೀನ್‍ಗಳು, ವಿಭಾಗ ಮುಖ್ಯಸ್ಥರು ಭಾಗವಹಿಸಿದ್ದರು. .
——
ಅಪೂರ್ವ ಸಂಗಮ ಅವಿಸ್ಮರಣೀಯ-ಡಾ.ವಿಶ್ವನಾಥ ಪಲ್ಲೇದ್
BP News ಬಳ್ಳಾರಿ,ಜೂ.29-ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಅವಿಸ್ಮರಣೀಯವಾಗಿದೆ ಎಂದು ಜಿಂದಾಲ್ ಫೌಂಡೇಶನ್ ಮುಖ್ಯಸ್ಥ ಡಾ.ವಿಶ್ವನಾಥ ಪಲ್ಲೇದ ಹೇಳಿದರು.
ಕಾಂಗ್ರೆಸ್ ಮುಖಂಡ, ರಕ್ಷಾ ಫೌಂಡೇಶನ್ ಅಧ್ಯಕ್ಷ ರಾವೂರ ಸುನೀಲ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಹೆಚ್‍ಎಂ ಕಿರಣ ಕುಮಾರ್ ಸೇರಿದಂತೆ ಪ್ರಾಚಾರ್ಯರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಇದ್ದರು.
——
ಕೊಂಡನಾಯಕನ ಹಳ್ಳಿಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ
BP News ವಿಜಯನಗರ,ಜೂ.29-ಹೊಸಪೇಟೆಯ ಕೊಂಡನಾಯಕನಹಳ್ಳಿಯ ಗ್ರಾಮದಲ್ಲಿ ಮೆಣ್ಣತ್ತಿನ ಅಮವಾಸ್ಯೆ ಪ್ರಯುಕ್ತ ಜೋಡು ಎತ್ತುಗಳ ಮೆರವಣಿಗೆಯನ್ನು ಹಮ್ಮಿಕೊಂದ್ದು ಹೊಸಪೇಟೆಯ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಂಖಡರಾದ ಹೆಚ್.ಎನ್.ಎಫ್.ಇಮಾಮ್ ನಿಯಾಜಿ ಅವರು ಶುಭಾಶಯ ಕೋರಿ ರೈತರಿಗೆ ಹಾರೈಸಿದರು.
—–
ಸಂಡೂರಿನ ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ನಾಯಕರ ಸಮಾಗಮ
BP News ಸಂಡೂರು,ಜೂ.29-ಸಂಡೂರು ತಾಲ್ಲೂಕಿನ ತಾರಾನಗರ ನಾರಿಹಳ್ಳದ ಎದುರಿನ ವಂಡರ್ ಮೌಂಟೇನ್ ವ್ಯಾಲಿ ರೆಸಾಟ್ರ್ಸ್ ನಲ್ಲಿ ಬಳ್ಳಾರಿ ನಗರದ ಹಾಗೂ ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ನವ ಸಂಕಲ್ಪ ಶಿಬಿರದಲ್ಲಿ ಕಾಂಗ್ರೆಸ್ ಮುಖಂಡರ ಸಮಾಗಮ ನಡೆಯಿತು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು, ನವ ಸಂಕಲ್ಪ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಡಿಸಿಸಿ ಜಿಲ್ಲಾಧ್ಯಕ್ಷ ಜಿಎಸ್ ಮಹಮ್ಮದ್ ರಫೀಕ್ ಇನ್ನಿತರರು ಇದ್ದರು.
——–
ನೂತನ ಬೈಪಾಸ್ ರೈಲ್ವೆ ನಿಲ್ದಾಣ ಆರಂಭಿಸಲು ಸಚಿವರಲ್ಲಿ ಮನವಿ
BP News ಬಳ್ಳಾರಿ,ಜೂ.29-ನಗರದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಬೈಪಾಸ್ ರೈಲ್ವೆ ನಿಲ್ದಾಣ ಆರಂಭಿಸುವಂತೆ ರೇಲ್ವೆ ಕ್ರಿಯಾ ಸಮಿತಿಯು ಸಚಿವ ಬಿ.ಶ್ರೀರಾಮುಲು ಅವರಲ್ಲಿ ಮನವಿ ಮಾಡಿದೆ.
ಸಮಿತಿಯ ರಾಜ್ಯಾಧ್ಯಕ್ಷ ಕೆಎಂ ಮಹೇಶ್ವರಸ್ವಾಮಿ ಮತ್ತು ನಿಯೋಗದ ಸದಸ್ಯರು ಸಚಿವರನ್ನು ಭೇಟಿಯಾಗಿ, ಸ್ವತಂತ್ರ ಪೂರ್ವದಿಂದಲೂ ಬಳ್ಳಾರಿ ರೈಲು ನಿಲ್ದಾಣ ಹಾಗೂ ಕಂಟೋನ್‍ಮೆಂಟ್, ರೈಲು ನಿಲ್ದಾಣಗಳು ರೈಲ್ವೆ ಸೌಲಭ್ಯಗಳನ್ನು ಜನತೆಗೆ ನೀಡುತ್ತಿವೆ. ಬಳ್ಳಾರಿ ನಗರಕ್ಕೆ ಮತ್ತೊಂದು ಬೈಪಾಸ್ ರೈಲ್ವೆ ನಿಲ್ದಾಣ ಆಗಬೇಕೆಂಬುದು ಈ ಭಾಗದ ಜನರ ಕನಸಾಗಿದೆ ಎಂದು ತಿಳಿಸಿದ್ದಾರೆ.
—-