ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಗಲುವೇಷ ಕಲಾವಿದರಾದ ಅಶ್ವ ರಾಮಣ್ಣ ಅವರನ್ನು ಗೌರವಿಸಿದ ಜಾನಪದ ಅಕಾಡೆಮಿಯ ಅಧ್ಯಕ್ಷರು.

0
225

BP NEWS: ಬೆಂಗಳೂರು: ಜೂನ್.29:   ಇಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಿರಿಯ ಜಾನಪದ ಕಲಾವಿದರ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ  ಅಶ್ವ ರಾಮಣ್ಣ ಹಗಲುವೇಷ ಕಲಾವಿದರನ್ನು

ಸನ್ಮಾನಿಸಿ ಗೌರವಿಸಿದ ಅಕಾಡೆಮಿಯ ಅಧ್ಯಕ್ಷರಾದ ಪದ್ಮಶ್ರೀ ಮಾತ ಮಂಜಮ್ಮ ಜೋಗತಿ ಅವರು, ಡಾ ಅರವಿಂದ ಮಾಲಗತ್ತಿ ಸಾಹಿತಿಗಳು, ಡಾ ಮಂಜುಳಾ ಮೇಡಂ ಸರ್ಕಾರದ ಕಾರ್ಯದರ್ಶಿಗಳು, ಅಕಾಡೆಮಿ ರಿಜಿಸ್ಟ್ರಾರ್ ಶ್ರೀಮತಿ ನಮೃತ ಅವರು, ಸದಸ್ಯರಾದ ಜೋಗಿಲ ಸಿದ್ದರಾಜು,

ಸಿ ಎನ್ ನರಸಿಂಹ ಮೂರ್ತಿ ಅವರು ಇದ್ದರು. ಜೊತೆಗೆ ನಾಡಿನ ಖ್ಯಾತ ರಂಗಕರ್ಮಿ  ಶ್ರೀನಿವಾಸ ಜಿ ಕಪ್ಪಣ್ಣ ಅವರು, ರಂಗತಜ್ಞ ಡಾ ಗೋವಿಂದ ಸ್ವಾಮಿ, ಜೀ ಕನ್ನಡ ವಾಹಿನಿಯ ಖ್ಯಾತ ನಿರ್ದೇಶಕ  ಶರಣಯ್ಯ ಅವರು, ಅಲೆಮಾರಿ ಒಕ್ಕೂಟದ ಅಧ್ಯಕ್ಷರಾದ  ಶೇಷಪ್ಪ ಅಂದೋಳ್ ಅವರು,

ಹಿರಿಯರಾದ ಕುಳಾಯಪ್ಪ ಅವರು, ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷರಾದ ವೆಂಕಟರಮಣಪ್ಪ ಅವರು, ಪ್ರದಾನ ಕಾರ್ಯದರ್ಶಿಗಳಾದ ಕಿರಣ್ ಕುಮಾರ್ ಕೊತ್ತಗೆರೆ ಅವರು, ಶಿಳ್ಳೇಕ್ಯಾತ ಸಮುದಾಯದ ರಾಜ್ಯ ಅಧ್ಯಕ್ಷರಾದ ಮಂಜುನಾಥ ಅವರು, ಗೆಳೆಯ ಗಿರಿಶ್, ಚಿನ್ನರಾಜು ಇನ್ನೀತರ ಮುಖಂಡರು ಆಗಮಿಸಿ ನನ್ನ ತಂದೆಯವರನ್ನು ಸನ್ಮಾನಿಸಿ ಗೌರವಿಸಿದರು.

ಅವರೆಲ್ಲರ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಡಾ॥ ಅಶ್ವ ರಾಮು ದರೋಜಿ ಅವರು ಬಿ ಪಿ ನ್ಯೂಸ್ಗೆ ತಿಳಿಸಿದರು.

LEAVE A REPLY

Please enter your comment!
Please enter your name here