ರಾಯಚೂರಿನಲ್ಲಿ ಜುಲೈ 3 ಮತ್ತು 4 ರಂದು ಕರ್ನಾಟಕ ಜನಶಕ್ತಿ ರಾಜ್ಯ ಸಮ್ಮೇಳನ
BP News ಬಳ್ಳಾರಿ,ಜೂ.28-ಅಲ್ಪ ಸಂಖ್ಯಾತರು ಮತ್ತು ದಲಿತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿರುವುದು ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳನ್ನು ಹೊತ್ತುಕೊಂಡು ನರಳುತ್ತಿರುವ ನಾಗರಿಕರಿಗಾಗಿ ರಾಯಚೂರಿನಲ್ಲಿ ಜುಲೈ 3 ಮತ್ತು 4 ರಂದು ಕರ್ನಾಟಕ ಜನಶಕ್ತಿ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕರಿಯಪ್ಪ ಗುಡಿ ಮನಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ಜಾತಿಯ ಸಂಕೋಲೆಯಲ್ಲಿ ದೇಶವಾಸಿಗಳು ನರಳುತ್ತಿದ್ದು ಈ ಸಮ್ಮೇಳನದ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದಿದ್ದಾರೆ. .
——-
ಪಿಹೆಚ್‍ಡಿ ಪದವಿ ಪಡೆದ ಕೆ.ರಾಘವೇಂದ್ರ ಪ್ರಸಾದ್
BP News ಬಳ್ಳಾರಿ,ಜೂ.28-ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕ ಕೆ ರಾಘವೇಂದ್ರ ಪ್ರಸಾದ್ ಅವರು ಪಿಹೆಚ್‍ಡಿ ಪದವಿ ಪಡೆದಿದ್ದಾರೆ.
ಆರ್ಟಿಫೀಷ್ಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ಪ್ರಸ್ತುತ ಸಾಕಷ್ಟು ಮಹತ್ವವನ್ನು ಹೊಂದಿರುವ “ದಿ ಡಿಸೈನ್ ಅಂಡ್ ಡೆವಲಪ್‍ಮೆಂಟ್ ಆಫ್ ಡೇಟಾ ಹೈಡಿಂಗ್” ಶೀರ್ಷಿಕೆಯಡಿಯಲ್ಲಿ ಸಲ್ಲಿಸಲಾದ ಪ್ರಬಂಧಕ್ಕಾಗಿ ಭೂಪಾಲ್ ನ ಸೆಹೋರ್ ಶ್ರೀ ಸತ್ಯ ಸಾಯಿ ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯ ಈ ಪಿಹೆಚ್‍ಡಿ ನೀಡಿದೆ.
—–
2ನೇ ದಿನಕ್ಕೆ ಮುಂದುವರಿದ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
BP News ಬಳ್ಳಾರಿ,ಜೂ.28-ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿರಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಾಯಕರಾದ ಸ.ರಘುನಾಥ ಮತ್ತು ಆರ್.ಮಾಧವರೆಡ್ಡಿ ಕರೂರು ಇವರು ನೇತೃತ್ವ ವಹಿಸಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕಿನವರು ಅನುಸರಿಸುತ್ತಿರುವ ನೀತಿಯೇ ಆಗಿದೆ ಎಂದು ಧರಣಿ ಸತ್ಯಾಗ್ರಹಿಗಳು ಹೇಳಿದ್ದಾರೆ.
——-
ಇನ್ನೂ ದುರಸ್ತಿಯಾಗದ ಎಲ್‍ಎಲ್‍ಸಿ ಕಾಲುವೆ – ಆತಂಕದಲ್ಲಿ ಶಹಪುರ ಗ್ರಾಮದ ರೈತರು
BP News ಕೊಪ್ಪಳ,ಜೂ.28-ಜೂನ್ ತಿಂಗಳು ಮುಗಿಯುತ್ತಾ ಬಂದರೂ ತುಂಗಭದ್ರಾ ಜಲ ಮಂಡಳಿ ಎಲ್‍ಎಲ್‍ಸಿ ಕಾಲುವೆ ಇನ್ನೂ ದುರಸ್ತಿಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಶಹಪುರ ಗ್ರಾಮದ ಎಲ್‍ಎಲ್‍ಸಿ ಕೊನೆಯ ಭಾಗದ ರೈತರು ಆತಂಕಗೊಂಡಿದ್ದಾರೆ.
ಶಹಪುರ ಗ್ರಾಮದ ಎಲ್‍ಎಲ್‍ಸಿ ಕೊನೆ ಭಾಗದ ರೈತರಾದ ತಿಪ್ಪಣ್ಣ ಕೋರಿ, ಕರಿಯಪ್ಪ ಕುರಿ, ನಿಂಗಜ್ಜ ಕೋರಿ ಮತ್ತು ಮಂಜುನಾಥ ಕಂಬಳಿ ಅವರು ತುಂಗಭದ್ರಾ ಜಲಮಂಡಳಿ ಅಧಿಕಾರಿಗಳು ಕೂಡಲೇ ಕಾಲುವೆ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದಾರೆ.
——-
ಬಳ್ಳಾರಿ ಎಸ್‍ಪಿ ಸೈದುಲು ಅಡಾವತ್ ನೇತೃತ್ವದಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ
BP News ಬಳ್ಳಾರಿ,ಜೂ.28-ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಪೆÇಲೀಸ್ ಠಾಣೆಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಆಚರಿಸಲಾಯಿತು.
ವಿದ್ಯುತ್ ಚಾಲಿತ ಚಿಮಣಿಯ ಸಹಾಯದಿಂದ ಮಾದಕ ದ್ರವ್ಯಗಳನ್ನು ನಾಶಪಡಿಸಿ, ಸಾರ್ವಜನಿಕರು ಮಾದಕದ್ರವ್ಯಗಳಿಗೆ ವ್ಯಸನಿಗಳಾಗದಂತೆ ಮತ್ತು ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
——
ಹೊಸಪೇಟೆ ತಾಲೂಕು ಕಚೇರಿ ಮುಂದೆ ಅಗ್ನಿಪಥ್ ಯೋಜನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
BP News ಹೊಸಪೇಟೆ,ಜೂ.28-ಕೇಂದ್ರ ಬಿಜೆಪಿಯ ಅಗ್ನಿಪಥ್ ಯೋಜನೆಯನ್ನು ಖಂಡಿಸಿ ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ಹೊಸಪೇಟೆ ಕಾಂಗ್ರೆಸ್ ಮುಖಂಡರಾದ ಹೆಚ್. ಎನ್. ಎಫ್ ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ, ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
——-