BP NEWS: ಕಲಬುರ್ಗಿ: ಜೂನ್.25: ಮಳಖೇಡದಲ್ಲಿ ಶ್ರೀ ಜಯತೀರ್ಥರ ಮೂಲ ವೃಂದಾವನವಿಲ್ಲ ಎಂಬ ವಿವಾದವು ಜಯತೀರ್ಥರ ಭಕ್ತರನ್ನು ಕೆರಳಿಸಿದೆ. ವಿಪ್ರ ಸಮಾಜ ಸೇರಿ ವಿವಿಧ ಸಂಘಟನೆಗಳ ಮುಂಖಡರು ಈ ವಿವಾಧವನ್ನು ಖಂಡಿಸಿ ನಗರದಲ್ಲಿ ಮೌನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದರು.
ಕನ್ನಡ ಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೌನ ಮೆರವಣಿಗೆ ನಡೆಸಿ ಅಲ್ಲಿ ಸಮಾವೇಶಗೊಂಡ ಮುಖಂಡರು, ಜಯತೀರ್ಥರ ಮೂಲ ವೃಂದಾವನ ಕುರಿತು ಅನಗತ್ಯವಾಗಿ ಎಬ್ಬಿಸಿದ ವಿವಾದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರನನ್ನು ಉದ್ದೇಶಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮಳಖೇಡದಲ್ಲಿ ಶ್ರೀ ಜಯತೀರ್ಥರ ಮೂಲ ವೃಂದಾವನವಿದೆ ಎಂಬುದು ಸುಮಾರು 600 ವರ್ಷದಿಂದ ಭಕ್ತರ ನಂಬಿಕೆ ಇದೆ. ಐತಿಹಾಸಿಕ ಸ್ಥಳವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಇತಿಹಾಸ ತಿರುಚಲು ಹೊಂಚುಹಾಕುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಯಾರೂ ವಿವಾದ ಸೃಷ್ಠಿಸಿದ್ದಾರೋ ಅವರೆ ಬಗೆ ಹರಿಸಬೇಕು. ಮಳಖೇಡ ಇತಿಹಾಸ ತಿರುಚಲು ಕೈ ಹಾಕಿದರೆ ಜಿಲ್ಲಾ ಕಸಾಪ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿರಿಯ ಸಾಹಿತಿ ಶ್ರೀಶೈಲ್ ನಾಗರಾಳ ಮತ್ತು ಪೇಜಾವರ ಸೇನೆ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಬೋಳಿ ಮಾತನಾಡಿ, ಸ್ವಧರ್ಮಿಯರೇ ಈ ರೀತಿ ವಿವಾದ ಸೃಷ್ಠಿಸುವುದು ಗೌರವ ತರುವಂತದಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಟೀಕಾಚಾರ್ಯರ ಮೂಲ ವೃಂದಾವನ ಮಳಖೇಡದಲ್ಲಿ ಇಲ್ಲ ಎಂಬ ವಾದ ಮುಂದು ವರೆಸಿದರೆ ನಾವು ತಕ್ಕ ಉತ್ತರ ಕೊಡಬೇಕಾಗುತ್ತದೆಎಂದರು.
ವಿಪ್ರ ಸಮಾಜದ ಮುಖಂಡರು ಮಾತನಾಡಿ, ಮಧ್ವ ಸಿದ್ಧಾಂತ ಶ್ರೇಷ್ಠ ಯತಿಗಳಾದ ಶ್ರೀ ಜಯತೀರ್ಥರ ಮೂಲ ವೃಂದಾವನದ ಬಗ್ಗೆ ಆಕ್ಷೇಪ ಎತ್ತಿದ್ದು ಸರಿಯಲ್ಲ. ಆರು ನೂರಕ್ಕೂ ಹೆಚ್ಚು ವರ್ಷಗಳಿಂದ ಭಕ್ತರು ಮಳಖೇಡದಲ್ಲಿಯೇ ಜಯತೀರ್ಥರನ್ನು ಪೂಜಿಸುತ್ತಿದ್ದಾರೆೆ. ವಿವಾದಕ್ಕೆ ಕಾರಣರಾದವರು ಕೂಡ ಈ ಮೊದಲು ಮಳಖೇಡಕ್ಕೆ ಆಗಮಿಸಿ ಟೀಕಾಚಾರ್ಯರ ಮೂಲ ವೃಂದಾವನದ ದರ್ಶನ ಪಡೆದುಕೊಂಡು ಹೋಗಿದಾರೆ. ಮಳಖೇಡವೇ ಮೂಲ ಸಳ್ಥ ಎಂಬುದಕ್ಕೆ ಎಲ್ಲ ದಾಖಲೆಗಳಿವೆ ಇಷ್ಟಾದರೂ ವಿನಃ ಕಾರಣ ಗೊಂದಲ ಸೃಷ್ಟಿಸಿ ಭಕ್ತರ ಮನಸಿಗೆ ನೋವು ಉಂಟು ಮಾಡುತ್ತಿರುವುದು ಸರಿಯಲ್ಲ.ಈ ವಿವಾದ ಇಲ್ಲಿಗೆ ಕೈ ಬಿಡಬೇಕು ಎಂಬುದು ನಮ್ಮ ಪ್ರಾಥ೯ನೆಯಾಗಿದೆ ಎಂದರು.